ನಿಸರ್ಗ ಸಂರಕ್ಷಣೆಯಿಂದ ಜೀವ ಸಂಕುಲದ ಉಳಿವು
ಕಲಬುರಗಿ ಜು.28: ಯಾವುದೇ ಜೀವಿಯು ಜನಿಸಿ, ಬೆಳವಣಿಗೆ ಹೊಂದಿ, ತನ್ನ ಜೀವನವನ್ನು ಸಾಗಿಸಬೇಕಾದರೆ ನಿಸರ್ಗ ಅತ್ಯಂತ ಅವಶ್ಯಕವಾಗಿದೆ. ಉತ್ತಮವಾದ ನಿಸರ್ಗ, ಪರಿಸರವಿದ್ದರೆ ಮಾತ್ರ ಎಲ್ಲಾ ಜೀವರಾಶಿಗಳು ಸದೃಢವಾಗಿ, ದೀರ್ಘಕಾಲಿಕವಾಗಿ ಜೀವಿಸಲು ಸಾಧ್ಯವಾಗಿದೆ ಎಂದು ಉಪನ್ಯಾಸಕ, ಚಿಂತಕ ಎಚ್.ಬಿ.ಪಾಟೀಲ ಅಭಿಪ್ರಾಯಪಟ್ಟರು.
ನಗರದ ಆಳಂದ ರಸ್ತೆಯ ಸಂತೋಷ ಕಾಲನಿ ಕ್ರಾಸ್ ಸಮೀಪವಿರುವ ‘ರಿಪಬ್ಲಿಕ್ ಸ್ಪೋಕನ್ ಇಂಗ್ಲೀಷ್ ಅಕಾಡೆಮಿ’ಯಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಭಾನುವಾರ ಏರ್ಪಡಿಸಿದ್ದ ‘ವಿಶ್ವ ನಿಸರ್ಗ ಸಂರಕ್ಷಣೆ ದಿನಾಚರಣೆ’ಯ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ಭಾರತವು ನೈಸರ್ಗಿಕ ಸಂಪನ್ಮೂಲ ಮತ್ತು ಮಾನವ ಸಂಪನ್ಮೂಲಗಳಿAದ ಸಂಪತ್ಭರಿತ ರಾಷ್ಟçವಾಗಿದೆ. ನಮ್ಮ ದೇಶದಲ್ಲಿ ಸುಮಾರು 45000 ಸಸ್ಯ ಪ್ರಬೇಧಗಳಿವೆ.ಅದರಲ್ಲಿ 15000 ಹೂ ಬಿಡುವ ಸಸ್ಯಗಳು, 1676 ಪಾಚಿ, 1940 ಕಲ್ಲು ಹೂಗಳು, 12480 ಅಣಬೆ ಸೇರಿದಂತೆ ಸಾಕಷ್ಟು ಸಂಖ್ಯೆಯಲ್ಲಿ ಸಸ್ಯರಾಶಿ ಇದೆ. ಒಟ್ಟು 81000 ಪ್ರಾಣಿ ಪ್ರಬೇಧಗಳಲ್ಲಿ, 372 ಸಸ್ತನಿಗಳು, 1228 ಪಕ್ಷಿ ಸಂಕುಲ, 428 ಸರಿಸೃಪಗಳು, 204 ಉಭಯ ಜೀವಿಗಳು, 2546 ಮೀನು 57525 ಕೀಟಗಳು ಮತ್ತು ಅನೇಕ ಅಕಶೇರಕಗಳನ್ನು ಹೊಂದಿರುವ ಸಂಪತ್ಭ್ಬರಿತ ರಾಷ್ಟç ನಮ್ಮದಾಗಿದೆ ಎಂದರು.
ಆದರೆ ಇತ್ತೀಚಿನ ಕೆಲ ವರ್ಷಗಳಲ್ಲಿ ಮಾನವ ನಿಸರ್ಗದ ಮೇಲೆ ಸವಾರಿ ಮಾಡಲು ಹೊರಟಿದ್ದಾನೆ. ಇದರಿಂದ ಅನೇಕ ಸಸ್ಯ ಮತ್ತು ಪ್ರಾಣಿಗಳು ನಾಶಹೊಂದಿವೆ ಮತ್ತು ಇನ್ನೂ ಕೆಲವು ಅಳಿವಿನಂಚಿನಲ್ಲಿವೆ. ಅಧಿಕ ಪ್ರಮಾಣದ ಕಾರ್ಬನ ಡೈಆಕ್ಸೆöÊಡ ಮತ್ತು ಕಾರ್ಬನ್ ಮೋನಾಕ್ಸೆöÊಡ್ ವಾತಾವರಣೆಕ್ಕೆ ಸೇರಿ, ಜಾಗತಿಕ ತಾಪಮಾನ ಉಂಟಾಗುತ್ತಿದೆ. ಅರಣ್ಯಗಳು ನಾಶಹೊಂದಿತ್ತಿವೆ. ಹೀಗೆ ಅನೇಕ ಕಾರಣಗಳಿಂದ ಪರಿಸರವು ಅಸಮತೋಲನಾವಾಗುತ್ತಿದೆ. ಇದರಿಂದ ಸೂಕ್ತ ಕಾಲಕ್ಕೆ ಮಳೆ-ಬೆಳೆಯಾಗುತ್ತಿಲ್ಲ. ‘ನಿಸರ್ಗವೇ ಶಿಕ್ಷಕ’ ಎಂಬ ಮಾತಿನಂತೆ ನಾವೂ ನಿಸರ್ಗದ ಮೇಲೆ ಬೇಟೆಯಾಡಲು ಹೊರಟರೆ, ಅದು ಖಂಡಿತವಾಗಿಯೂ ಜೀವ ಸಂಕುಲಕ್ಕೆ ಪಾಠ ಕಲಿಸುತ್ತದೆ ಎಂದು ಮಾರ್ಮಿಕವಾಗಿ ನುಡಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಮುಖ್ಯಸ್ಥ ದತ್ತು ಹಡಪದ, ಪ್ರಮುಖರಾದ ಬಸಯ್ಯಸ್ವಾಮಿ ಹೊದಲೂರ, ಶಿವಯೋಗೆಪ್ಪಾ ಎಸ್.ಬಿರಾದಾರ, ಅಸ್ಲಾಂ ಶೇಖ್, ಅಮರನಾಥ ಸೇರಿದಂತೆ ಇನ್ನಿತರರಿದ್ದರು.