ಮುಂಜಾಗ್ರತಾ ಕ್ರಮಕ್ಕೆ ಸೂಚನೆ
ಚನ್ನಮ್ಮನ ಕಿತ್ತೂರು,ಜು೨೮: ಮಳೆ ಅವಾಂತರವು ಹೆಚ್ಚಾದ್ದದರಿಂದ ತಾಲೂಕಾಧ್ಯಂತ ಪ್ರವಾಹ ಪರಿಸ್ಥತಿ ತಡೆಗಟ್ಟಲು ಮುಂಜಾಗ್ರತೆ ಕ್ರಮ ಕೈಗೊಂಡು ಸಾರ್ವಜನಿಕರಿಗೆ ತೊಂದರೆಯಾಗದAತೆ ಕೂಡಲೇ ತಾಲೂಕ ಮಟ್ಟದ ಅಧಿಕಾರಿಗಳು ಸ್ಪಂದಿಸಬೇಕು. ಈ ವಿಷಯದ ಬಗ್ಗೆ ಸಾರ್ವಜನಿಕರಿಂದ ದೂರು ಬಂದಲ್ಲಿ ಅಧಿಕಾರಿಗಳ ಮೇಲೆ ತಕ್ಕ ಕ್ರಮ ಜರುಗಿಸಲಾಗುವುದು. ಈ ಕಾರ್ಯಕೈಗೊಳ್ಳುವ ಪೂರ್ವದಲ್ಲಿಯೇ ಎಚ್ಚೆತ್ತುಗೊಂಡು ತಾಲೂಕಿನ ಎಲ್ಲ ಅಧಿಕಾರಿಗಳು ಕೆಲಸ ಮಾಡಬೇಕೆಂದು ಶಾಸಕ ಬಾಬಾಸಾಹೇಬ ಪಾಟೀಲ ಖಡಕ್ಕಾಗಿ ಆದೇಶ ನೀಡಿದರು.
ತಾಲೂಕಾಡಳಿತ ಸೌಧದಲ್ಲಿ ಟಾಸ್ಕಪೊರ್ಟ ಸಮಿತಿ ತಾಲೂಕಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕಿಗೆ ಒಳಪಡುವ ಮಲಪ್ರಭಾ ನದಿ ತುಂಬಿಹರಿಯುತ್ತಿದ್ದು ಸದ್ಯದ ಪರಿಸ್ಥಿತಿಯಲ್ಲಿ ಯಾವುದೇ ಹಾನಿ ಇಲ್ಲ. ಆದರೂ ಸಹ ಮುನ್ನೆಚ್ಚರಿಕೆಯಾಗಿ ನದಿ ದಡೆಗೆ ಹೊಂದಿಕೊAಡಿರುವ ಗ್ರಾಮಗಳಿಗೆ ಯಾವುದೇ ತೊಂದರೆಯಾಗದAತೆ ತಾಲೂಕಾಡಳಿತ ಕ್ರಮ ಕೈಗೊಳ್ಳಬೇಕು. ಅದಲ್ಲದೇ ವಿವಿಧ ಕಡೆಗಳಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿದ್ದು ಅಂತಹ ಘಟನೆ ನಮ್ಮ ತಾಲೂಕಿನಲ್ಲಿ ನಡೆದಿಲ್ಲ ಮುನ್ನೆಚ್ಚರಿಕೆಯಾಗಿ ಗ್ರಾಪಂಗಳು ಪಪಂಗಳು ಸೇರಿದಂತೆ ಇನ್ನುಳಿದ ಕಡೆ ಸ್ವಚ್ಛತೆಗೆ ಆದ್ಯತೆ ನೀಡಿ ಡೆಂಗ್ಯೂ ತಡೆಯಲು ಅಧಿಕಾರಿಗಳು ಶ್ರಮವಹಿಸಿ. ಶಿಕ್ಷಕರು ಶಾಲಾ ಅಂಗನವಾಡಿಗಳಲ್ಲಿ ಶಿಥಿಲಾವಸ್ಥೆಯಲ್ಲಿರುವ ಕೊಠಡಿಗಳಲ್ಲಿ ಮಕ್ಕಳನ್ನು ಕೂಡ್ರಿಸಬಾರದು ಅತಿ ಹೆಚ್ಚು ಮಳೆಯಿಂದ ವಿವಿಧ ಗ್ರಾಮಗಳಲ್ಲಿ ಮನೆಗಳು ಕುಸಿದಿವೆ. ಸ್ಥಳಕ್ಕೆ ಸಂಬAಧಪಟ್ಟ ಅಧಿಕಾರಿಗಳು ಭೇಟಿ ನೀಡಿ ತಹಶೀಲ್ದಾರಿಗೆ ವರದಿ ನೀಡಿ ಮನೆ ಕಳೆದುಕೊಂಡ ಜನರಿಗೆ ಸರ್ಕಾರದಿಂದ ದೊರೆಯುವ ಪರಿಹಾರವನ್ನು ದೊರಕಿಸಿ ಕೊಡುವಲ್ಲಿ ಮುಂದಾಗಬೇಕೆAದು ಸೂಚಿಸಿದರು.
ತಾಲೂಕಾಡಳಿತದಿಂದ ಕೈಗೊಂಡಿರುವ ಪ್ರವಾಹ ಕುರಿತು ತಹಶೀಲ್ದಾರ ರವೀಂದ್ರ ಹಾದಿಮನಿ ಮಾಹಿತಿ ನೀಡಿ ಮಾತನಾಡಿ ನದಿ ಹತ್ತಿರದ ಎಲ್ಲ ಗ್ರಾಮದ ಜನರಿಗೂ ಈಗಾಗಲೇ ಪ್ರವಾಹ ಭೀತಿ ಬಗ್ಗೆ ತಿಳಿಹೇಳಲಾಗಿದ್ದು. ಅಂತಹ ಪರಿಸ್ಥಿತಿ ಎದುರಾದರೆ ಬೇರೆಡೆಗೆ ಸ್ಥಳಾಂತರಲಾಗುವುದು. ೩೨ ಕಡೆಗಳಲ್ಲಿ ಗಂಜಿ ಕೇಂದ್ರ ಸ್ಥಾಪನೆ ಮಾಡಲಾಗಿದೆ. ಅದಲ್ಲದೇ ಜಾನುವಾರು ರಕ್ಷಣೆಗೂ ೪೪ ಕೇಂದ್ರಗಳನ್ನು ತೆರೆಯಲಾಗಿದ್ದು ಒಂದು ಬೋಟ್ (ದೋಣಿ) ವ್ಯವಸ್ಥೆ ಸಹ ಮಾಡಿಕೊಂಡಿದ್ದೇವೆ. ಪ್ರವಾಹ ಭೀತಿ ಇಲ್ಲದಿದ್ದರೂ ತಾಲೂಕಾಡಳಿತದಿಂದ ಮುನ್ನೆಚ್ಚರಿಕೆಯಾಗಿ ಅಗತ್ಯ ಕ್ರಮಗಳ ವ್ಯವಸ್ಥೆಮಾಡಿಕೊಂಡಿದ್ದೇವೆ. ಸುಮಾರು ೫೦ ಮನೆಗಳು ಬಿದ್ದಿರುವ ಮಾಹಿತಿ ದೊರೆತಿದೆ. ತಾಲೂಕಾಡಳಿತದಿಂದ ತಂಡ ರಚಿಸಿ ಪ್ರತಿ ಗ್ರಾಮಗಳಿಗೂ ಭೇಟಿನೀಡಿ ಬಿದ್ದ ಮನೆಗಳ ಮಾಹಿತಿ ಪಡೆದಿದ್ದೇವೆಂದರು.
ಸಭೆಯಲ್ಲಿ ತಾಪಂ, ಪಪಂ, ಹೆಸ್ಕಾಂ, ಪಿಡಬ್ಲೂಡಿ, ಅರಣ್ಯ ಇಲಾಖೆ, ಬಿಇಓ, ಲ್ಯಾಂಡಆರ್ಮಿ, ನೀರಾವರಿ, ಕೃಷಿ,ಪೋಲಿಸ್ ಸೇರಿದಂತೆ ತಾಲೂಕಮಟ್ಟದ ಎಲ್ಲ ಅಧಿಕಾರಿಗಳಿದ್ದರು.