ಕೊಡಗೈದಾನಿ ತಂಬ್ರಹಳ್ಳಿ ಅಕ್ಕಿ ಕೊಟ್ರಪ್ಪ ನಿಧನ
ಸಂಜೆವಾಣಿ ವಾರ್ತೆ
 ಹಗರಿಬೊಮ್ಮನಹಳ್ಳಿ. ಜು.28 ತಾಲೂಕಿನ ತಂಬ್ರಹಳ್ಳಿ ಗ್ರಾಮದ ಮಂಡಲ ಪಂಚಾಯಿತಿ ಮಾಜಿ ಅಧ್ಯಕ್ಷ ಅಕ್ಕಿ ಕೊಟ್ರಪ್ಪ (92) ನಿಧನರಾಗಿದ್ದಾರೆ.
 ತಾಲೂಕಿನ ಶೈಕ್ಷಣಿಕ ಮತ್ತು ಧಾರ್ಮಿಕ ಕಾರ್ಯಗಳಿಗೆ ಕೊಡಗೈ ದಾನಿ ಎಂದೇ ಪ್ರಸಿದ್ಧಿ ಹೊಂದಿದ್ದರು. ಬಡತನದಲ್ಲಿ ಹುಟ್ಟಿ ತಮ್ಮ ಸ್ವಂತ ಶ್ರಮದಿಂದ ಬಹು ಎತ್ತರಕ್ಕೆ ಬೆಳೆದು ಹಲವಾರು ಸಂಘ ಸಂಸ್ಥೆಗಳಲ್ಲಿ ಗುರುತಿಸಿಕೊಂಡಿದ್ದರು. ವಯಸ್ಸು 92 ಆದರೂ ಕ್ರಿಯಾಶೀಲರಾಗಿ ಚಟುವಟಿಕೆ ಯಿಂದ ನಡೆದಾಡುತ್ತಿದ್ದರು. ನಾಲ್ಕು ಜನ ಪುತ್ರರು ಮತ್ತು ಇಬ್ಬರು ಪುತ್ರಿಯರಿಗೆ ಒಳ್ಳೆಯ ಶಿಕ್ಷಣ ನೀಡುವ ಮೂಲಕ ಸಮಾಜದಲ್ಲಿ ತಮ್ಮನ್ನು ತಾವು ಗುರುತಿಸಿಕೊಳ್ಳುವಂತೆ ಕೆಲಸ ಮಾಡಿದ್ದರು.
 ಇವರು ನಿನ್ನೆ ರಾತ್ರಿ ಊಟ ಮಾಡುವಾಗ ಕುಸಿದಿಬಿದ್ದರು. ಇವರಿಗೆ ಪತ್ನಿ ಮತ್ತುಮೂರು ಪುತ್ರರು ಇಬ್ಬರು ಪುತ್ರಿಯರನ್ನು   ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
 ಇವರ ನಿಧನಕ್ಕೆ ಶಾಸಕ ಕೆ ನೇಮರಾಜ್ ನಾಯ್ಕ್, ಮಾಜಿ ಶಾಸಕ ಎಸ್ ಭೀಮ ನಾಯ್ಕ್, ಮಠಾಧೀಶರಾದ ಮಹೇಶ್ವರ ಸ್ವಾಮೀಜಿ, ಹಾಲ ಸಿದ್ದೇಶ್ವರ ಸ್ವಾಮೀಜಿ   ಹಿರಿಯ ಸಾಹಿತಿ ಮೇಟಿ ಕೊಟ್ರಪ್ಪ, ಹುರುಕಡ್ಲಿ ಶಿವಕುಮಾರ್ , ಹಿ ಮ ಕೊಟ್ರಯ್ಯ ಹಿರಿಯರಾದ ನಾಗನಗೌಡ್ರು  ಪಂಚಮಸಾಲಿ ಸಮಾಜದ ಭಾವಿ ಬೆಟ್ಟಪ್ಪ, ವೀರಶೈವ ಮಹಾಸಭಾ ತಾಲೂಕ ಅಧ್ಯಕ್ಷ ಕೊಟ್ರೇಶ್  ಶೆಟ್ಟರ್ ವಾಲ್ಮೀಕಿ ಸಮಾಜದ ಅಧ್ಯಕ್ಷ ವೆಂಕೋಬಪ್ಪ  ಸೇರಿದಿಂದ ಅಪಾರ ಸಂಖ್ಯೆಯಲ್ಲಿ ಸಂತಾಪ ಸೂಚಿಸಿದ್ದಾರೆ