ಅಭಿವೃದ್ಧಿ ಕಾರ್ಯಗಳಿಗೆ ಸರ್ಕಾರದಿಂದ ಬಿಡಿಗಾಸು ನೀಡುತ್ತಿಲ್ಲ : ನೇಮಿರಾಜ್ ನಾಯ್ಕ
ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ :ಜು.28  ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ಸರ್ಕಾರ ಹಣ ನೀಡುತ್ತಿಲ್ಲ ಎಂದು ಕ್ಷೇತ್ರದ ಶಾಸಕ ಕೆ.ನೇಮಿರಾಜ್ ನಾಯ್ಕ ಅರೋಪಿಸಿದರು.
ತಾಲ್ಲೂಕಿನ ಬನ್ನಿಗೋಳ ಗ್ರಾಮದ ಏತ ನೀರಾವರಿ ಯೋಜನೆಗೆ 25 ಲಕ್ಷದ ವೆಚ್ಚದಲ್ಲಿ 2 ಹೊಸ ಮೋಟಾರು ಪಂಪುಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಸರ್ಕಾರದಲ್ಲಿ ಕಾಂಗ್ರೆಸ್ ಶಾಸಕರೇ ಅನುದಾನಕ್ಕೆ ಗೋಳಾಡುತ್ತಿದ್ದಾರೆ.  ನನ್ನ ಕ್ಷೇತ್ರಕ್ಕೆ ಹಣ ನೀಡದಿದ್ದರೂ ಕೆಕೆಆರ್ ಡಿಬಿ, 371ಜೆ, ಕೆಎಂಇಆರ್ ಸಿ, ಹಾಗೂ ಡಿಎಂಎಫ್, ಮುಖಾಂತರ 650 ಕೋಟಿ ರೂಗಳ ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಾಗಿದೆ.
ಅಮೃತ್ ಯೋಜನೆಯಲ್ಲಿ ಮರಿಯಮ್ಮನಹಳ್ಳಿ 77, ಕೊಟ್ಟೂರು 85, ಹಗರಿಬೊಮ್ಮನಹಳ್ಳಿ 35 ಕೋಟಿ ರೂಗಳನ್ನು ಕುಡಿಯುವ ನೀರಿಗಾಗಿ ತಂದಿದೆ. ಕ್ಷೇತ್ರದಲ್ಲಿ ನೀರಾವರಿ ಯೋಜನೆಗಳಿಗೆ ಆದ್ಯತೆ ನೀಡಲಾಗಿದ್ದು ಕ್ಷೇತ್ರದ ಎಲ್ಲಾ ಗುರುಗಳ ಆಶೀರ್ವಾದದಿಂದ 4 ವರ್ಷದ ಒಳಗಾಗಿ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲಾಗುವುದು. ಅಧಿಕಾರಿಗಳು ರೈತರ ಕೆಲಸ ವಿಳಂಬ ಮಾಡದೆ ಜಾತಿ ಪಕ್ಷ ಮರೆತು ಕೆಲಸ ಮಾಡುವಂತೆ ಸೂಚಿಸಲಾಗಿದೆ. ರೈತರ ಸುಟ್ಟ ವಿದ್ಯುತ್ ಪರಿವರ್ತಕಗಳನ್ನು 24 ತಾಸಿನಲ್ಲಿ ಉಚಿತವಾಗಿ ಬದಲಾಯಿಸಲಾಗುವುದು, ಅಧಿಕಾರಿಗಳಿಗೆ ರೈತರು ಯಾವುದೇ ಹಣ ನೀಡಬಾರದು ಎಂದು ತಿಳಿಸಿದರು.
ಸರ್ಕಾರ ಗ್ಯಾರಂಟಿ ನೆಪದಲ್ಲಿ ಬಿಪಿಎಲ್ ಕಾರ್ಡ್ ರದ್ದು ಮಾಡಲು ಹೊರಟಿದೆ. ಬಗರ್ ಹುಕುಂ ಅಡಿಯಲ್ಲಿ ಕ್ಷೇತ್ರದಲ್ಲಿ ಸುಮಾರು 25 ರಿಂದ 30 ಸಾವಿರ ಎಕರೆ ಜಮೀನು ಇದ್ದು ಬಹುದಿನಗಳ ಕಾಲ ಸಾಗುವಳಿ ಮಾಡಿಕೊಂಡ ಬಂದ ರೈತರಿಗೆ ಅಕ್ರಮ ಸಕ್ರಮ ಯೋಜನೆಯಲ್ಲಿ ಅರ್ಜಿ ಕರೆದು ರೈತರಿಗೆ ಪಟ್ಟಾ ವಿತರಣೆ ಮಾಡಬೇಕು,
ಮುಂದಿನ ದಿನಗಳಲ್ಲಿ ತಂಬ್ರಹಳ್ಳಿ ಏತ ನೀರಾವರಿ
ಯೋಜನೆಗೆ ಮೂರು ಮೋಟಾರ್ ರಿಪೇರಿ ಸೇರಿದಂತೆ ಹಾಗೂ ಕುದುರೆ ಕಾಲುವೆ ಯೋಜನೆಯನ್ನು ಶೀಘ್ರವೇ ಸಕಾರಗೊಳಿಸಲಾಗುವುದು, ಈ ಕುರಿತಂತೆ ಯೋಜನೆಯ ದಿಕ್ಕು ತಪ್ಪಿಸುತ್ತಿಸದಂತೆ ಕೆಲ ರೈತ ಮುಖಂಡರಿಗೆ ಕಿವಿ ಮಾತು ಹೇಳಿದರು. ಇದಕ್ಕೂ ಮುನ್ನ ತಾಲೂಕಿನ 6 ಏತ ನೀರಾವರಿ ಯೋಜನೆಗಳನ್ನು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ನಂದಿಪುರದ ಡಾ. ಮಹೇಶ್ವರ ಸ್ವಾಮೀಜಿ, ಜೆಡಿಎಸ್ ಕ್ಷೇತ್ರ ಅಧ್ಯಕ್ಷ ವೈ.ಮಲ್ಲಿಕಾರ್ಜುನ, ಕಿನ್ನಾಳ್ ಸುಭಾಷ್, ರೈತ ಮುಖಂಡ  ಮೈನಳ್ಳಿ ಕೊಟ್ರೇಶ್, ಗುಡ್ಡದ ಗಿರಿಧರ ರೆಡ್ಡಿ, ಅಳವಂಡಿ ಸಿದ್ದಾರೆಡ್ಡಿ, ಮೂಲಿಮನಿ ರವಿ ಪ್ರಸಾದ್, ಆನೇಕಲ್ ಶಾಂತಪ್ಪ, ಬಣಕಾರ ಅರುಣ್ ಕುಮಾರ್, ಸೊಬಟಿ ಹರೀಶ್, ಎನ್ ಮಂಜುನಾಥ್, ಸಣ್ಣ ನೀರಾವರಿ ಇಲಾಖೆಯ ಎಇ.ಜಗದೀಶ್ ಆಪ್ತ ಸಹಾಯಕ ಬಿ.ದೊಡ್ಡಬಸಪ್ಪ ರೆಡ್ಡಿ, ಬ್ಯಾಟಿ ನಾಗರಾಜ್, ರಾವುಲ್ ನಾಯ್ಕ ಇತರರು ಇದ್ದರು.
ಬಾಕ್ಸ್ 1)
187 ಕೋಟಿ ರೂ, ವಾಲ್ಮೀಕಿ ಅಭಿವೃದ್ಧಿ ಹಣ ಮತ್ತು 4 ಸಾವಿರ ಕೋಟಿ ಮುಡಾ ಹಗರಣದ ವಿರುದ್ಧ ಆಗಸ್ಟ್ 1ರಿಂದ ಎನ್ ಡಿಎ. ಮೈತ್ರಿಕೂಟದಿಂದ ಬೆಂಗಳೂರಿನಿಂದ ಮೈಸೂರಿಗೆ ಪಾದ ಯಾತ್ರೆ ಹಮ್ಮಿಕೋಳ್ಳಲಾಗಿದೆ ರೈತರು ಕೈಜೋಡಿಸಬೇಕು.
ನೇಮಿರಾಜ್ ನಾಯ್ಕ ಶಾಸಕರು ಹಗರಿಬೊಮ್ಮನಹಳ್ಳಿ