13 ನೇ ವಾರ್ಡಿನಲ್ಲಿ ಗಿಡ ನೆಟ್ಟ ಮಾಜಿ ಶಾಸಕರು
(ಸಂಜೆವಾಣಿ ವಾರ್ತೆ)
ಬಳ್ಳಾರಿ:ಜು,28-  ನಗರದ. 13ನೇ ವಾರ್ಡಿನಲ್ಲಿ ಪರಿಸರ ಜಾಗೃತಿ ಕಾರ್ಯಕ್ರಮವನ್ನು ನಿನ್ನೆ ಸಂಜೆ ಆ ವಾರ್ಡಿನ ಪಾಲಿಕೆ ಸದಸ್ಯ  ಸಿ.ಇಬ್ರಾಹಿಂ ಬಾಬು  ಹಮ್ಮಿಕೊಂಡಿದ್ದರು.
ನಗರದ ಮಾಜಿ ಶಾಶಕ  ಜಿ. ಸೋಮಶೇಖರ ರೆಡ್ಡಿ ಅವರು  ಗಿಡಗಳನ್ನು ನೆಡುವುದರ ಮೂಲಕವಾರ್ಡಿನ ಜನರಲ್ಲಿ ಪರಿಸರ ಜಾಗೃತಿ ಮೂಡಿಸಿದರು.
24ನೇ ವಾರ್ಡಿನ ಸದಸ್ಯ ಶ್ರೀನಿವಾಸ್ ಮೋತ್ಕರ್. ಬಿ. ಜೆ. ಪಿ. ಪಕ್ಷದ ಮುಖಂಡ ಎಸ್. ಮಲ್ಲನಗೌಡ. ಹಾಗೂ ವಾರ್ಡಿನ ಪ್ರಮುಖರು ಭಾಗವಹಿಸಿದ್ದರು.