ಕರ್ತವ್ಯ ನಿರತ ಯೋಧರಿಗೆ ಸತ್ಕಾರ
ಬೈಲಹೊಂಗಲ,ಜು೨೮: ಪಟ್ಟಣದ ವೀರರಾಣಿ ಕಿತ್ತೂರು ಚನ್ನಮ್ಮನ ಸಮಾಧಿ ಸ್ಥಳದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಅಖಿಲ ಕರ್ನಾಟಕ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸ್ಮರಣೋತ್ಸವ ಸಮಿತಿ, ಸ್ವಾಭಿಮಾನಿ ಕ್ರೀಯಾಶೀಲ ಗೆಳೆಯರ ಬಳಗ ವತಿಯಿಂದ ೨೫ನೇ ವರ್ಷದ ಕಾರ್ಗಿಲ್ ವಿಜಯೋತ್ಸವವನ್ನು ಕರ್ತವ್ಯ ನಿರತ ಯೋಧ, ಮಾಜಿ ಸೈನಿಕರನ್ನು ಸತ್ಕರಿಸುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಜೋರಾದ ಮಳೆಯ ನಡುವೆಯೂ ಸ್ವಯಂ ಪ್ರೇರಣೆಯಿಂದ ಚನ್ನಮ್ಮನ ಸಮಾಧಿ ಸ್ಥಳದಲ್ಲಿ ಉತ್ಸಾಹದಿಂದ ಅಧಿಕ ಸಂಖ್ಯೆಯಲ್ಲಿ ಸೇರಿದ ಮಕ್ಕಳು, ಯುವಕರು, ದೇಶಾಭಿಮಾನಿಗಳು ಭಾರತ ಮಾತಾಕೀ ಜೈ, ವೀರರಾಣಿ ಕಿತ್ತೂರು ಚನ್ನಮ್ಮ, ಸಂಗೊಳ್ಳಿ ರಾಯಣ್ಣ, ವೀರಕೇಸರಿ ಅಮಟೂರು ಬಾಳಪ್ಪ, ಬೆಳವಡಿ ಮಲ್ಲಮ್ಮ, ಗಡಿ ಕಾಯುವ ಯೋಧರು, ದೇಶಕ್ಕೆ ಅನ್ನ ನೀಡುವ ರೈತರಿಗೆ ಜಯಘೋಷ ಮೊಳಗಿಸಿದರು. uಶ್ರದ್ಧೆ, ಭಕ್ತಿಯಿಂದ ದೀಪ ಬೆಳಗಿಸಿ ಹುತಾತ್ಮ ವೀರ ಯೋಧರ ಆತ್ಮಕ್ಕೆ ಶ್ರದ್ಧಾಂಜಲಿ ಸಲ್ಲಿಸಿದರು.
ಮುಖ್ಯಅತಿಥಿ, ಪುರಸಭೆ ಮುಖ್ಯಾಧಿಕಾರಿ ವೀರೇಶ ಹಸಬಿ ಮಾತನಾಡಿ, ‘ಕಾರ್ಗಿಲ್ ಯುದ್ಧದ ಸನ್ನಿವೇಶ ಕುರಿತು ವಿವರಿಸಿದರು. ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮಹಾಂತೇಶ ತುರಮರಿ, ಪುರಸಭೆ ಸದಸ್ಯ ರಾಜು ಜನ್ಮಟ್ಟಿ, ಡಾ.ಸಾಗರ ಕುಲಕರ್ಣಿ ಮಾತನಾಡಿದರು.
ಯೋಧ ಸಂತೋಷ ಉಪ್ಪಾರ, ಮಾಜಿ ಸೈನಿಕರಾದ ಬಸವರಾಜ ಸರಾಯದ, ಈರಪ್ಪ ಕಾಡೇಶನವರ, ಆನಂದ ತೋಟಗಿ, ಸಂಗಮೇಶ ರೇಶ್ಮಿ, ಪತ್ರಕರ್ತ ಮಂಜುನಾಥ ಜ್ಯೋತಿ ಅವರನ್ನು ಸತ್ಕರಿಸಲಾಯಿತು. ಬಾಲಕಿ ಶ್ರಾವಣಿ ಕಾಡೇಶನವರ ಯೋಧರ ಉಡುಗೆ ತೊಟ್ಟು ಗಮನ ಸೆಳೆದಳು.
ವಿಶ್ವಹಿಂದು ಪರಿಷದ್ ಜಿಲ್ಲಾ ಘಟಕ ಅಧ್ಯಕ್ಷ ಪ್ರಮೋದಕುಮಾರ ವಕ್ಕುಂದಮಠ, ರಾಯಣ್ಣ ಸ್ಮರಣೋತ್ಸವ ಸಮಿತಿ ಅಧ್ಯಕ್ಷ ಸೋಮನಾಥ ಸೊಪ್ಪಿಮಠ, ಸೋಮೇಶ್ವರ ಕಾರ್ಖಾನೆ ಉಪಾಧ್ಯಕ್ಷ ಮಹಾಂತೇಶ ಮತ್ತಿಕೊಪ್ಪ, ಬಿಜೆಪಿ ಮುಖಂಡರಾದ ಗುರು ಮೆಟಗುಡ್ಡ, ಶಿವಾನಂದ ಬಡ್ಡಿಮನಿ, ಮಡಿವಾಳಪ್ಪ ಹೋಟಿ, ಸುಭಾಸ ತುರಮರಿ, ಪತ್ರಕರ್ತರಾದ ಉದಯ ಕೋಳೆಕರ, ಶರೀಫ ನದಾಫ, ಮಹಾಂತೇಶ ರಾಜಗೋಳಿ, ರವಿ ಹುಲಕುಂದ, ಚಂದ್ರಕಾAತ ಹೈಬತ್ತಿ, ರಾಜು ಬಡಿಗೇರ, ಯುನಸ್ ಬಡೇಘರ, ಶಿಕ್ಷಕ ಸಂತೋಷ ಹುಣಶೀಕಟ್ಟಿ, ರಾಜು ದಳವಾಯಿ, ಆನಂದ ಹಿರೇಮಠ, ಮಂಜುನಾಥ ಬಗಾಡೆ, ಶ್ರೀಶೈಲ ಹಂಪಿಹೊಳಿ, ಸಂತೋಷ ಹಡಪದ, ಅಶೋಕ ಸವದತ್ತಿ, ಗುರು ಕಡತನಾಳ, ಶಿವು ಬಿಸಗುಪ್ಪಿ, ಅನೇಕರು ಇದ್ದರು.