ತ್ವರಿತ ಪರಿಹಾರಕ್ಕೆ ಸೂಚನೆ
ಬ್ಯಾಡಗಿ,ಜು೨೮: ತಾಲೂಕಿನಾದ್ಯಂತ ಮಳೆಯಿಂದ ಮನೆ ಹಾಗೂ ಬೆಳೆಹಾನಿ ಸಂಬAಧಿಸಿದAತೆ ತ್ವರಿತವಾಗಿ ಸಮೀಕ್ಷೆ ನಡೆಸಿ ಪರಿಹಾರ ನೀಡಬೇಕು. ಯಾವುದೇ ಕಾರಣಕ್ಕೂ ವಿಳಂಬ ಮಾಡಬಾರದು ಎಂದು ಶಾಸಕ ಬಸವರಾಜ ಶಿವಣ್ಣನವರ ಅಧಿಕಾರಿಗಳಿಗೆ ತಿಳಿಸಿದರು.
ತಾಲೂಕಿನಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯಿಂದ ಹಾನಿಗೊಳಗಾದ ಕದರಮಂಡಲಗಿ, ಬಿಸಿಲಹಳ್ಳಿ, ಆಣೂರ, ಶಿಡೇನೂರ ಹಾಗೂ ಅಂಗರಗಟ್ಟಿ ಗ್ರಾಮಗಳಿಗೆ ಶನಿವಾರ ತೆರಳಿ ಖುದ್ದು ಪರಿಶೀಲನೆ ನಡೆಸಿದ ಶಾಸಕರು ಬೆಳೆಹಾನಿ ಹಾಗೂ ಮನೆ ಹಾನಿ ಸಂಬAಧಿಸಿದAತೆ ಪರಿಹಾರವನ್ನು ನಿಯಮಾನುಸಾರ ವಿತರಿಸಬೇಕು. ಭಾಗಶಃ ಹಾನಿಗೆ ತಮ್ಮ ಹಂತದಲ್ಲಿಯೇ ಪರಿಹಾರ ವಿತರಿಸಲು ಅಗತ್ಯ ಕ್ರಮ ವಹಿಸುವಂತೆ ತಹಶೀಲ್ದಾರರಿಗೆ ಸೂಚಿಸಿದರಲ್ಲದೇ, ಮನೆ ಹಾನಿ ಹಾಗೂ ಬೆಳೆ ಹಾನಿ ಪರಿಹಾರ ಸಂಬAಧ ದೂರುಗಳು ಕೇಳಿಬರದಂತೆ ಗಮನ ಹರಿಸಬೇಕು ಎಂದು ಎಚ್ಚರಿಸಿದರು.
ಗ್ರಾಮಗಳಲ್ಲಿರುವ ಜನವಸತಿ ಪ್ರದೇಶಗಳಲ್ಲಿ ಮನೆಗಳಿಗೆ ಹಾನಿಯಾಗುವಂತೆ ಮರಗಳಿದ್ದರೆ ತಕ್ಷಣ ತೆರವುಗೊಳಿಸಿ ವಸತಿ ಜನತೆಗೆ ಅನುಕೂಲ ಕಲ್ಪಿಸುವ ಕುರಿತು ಅಧಿಕಾರಿಗಳಿಗೆ ತಿಳಿಸುತ್ತಾ, ಸತತ ಸುರಿದ ಮಳೆಗೆ ಕೆರೆ ಕಟ್ಟೆಗಳಿಗೆ ಹಾನಿಯಾದಲ್ಲಿ ಅಥವಾ ಹೊಲಗದ್ದೆಗಳಿಗೆ ಹಾನಿಯಾಗಿದ್ದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಅಗತ್ಯವಿರುವ ಕಡೆಗಳಲ್ಲಿ ತಡೆಗೋಡೆ ಕಾಮಗಾರಿ ಕೈಗೊಳ್ಳಲು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳಿಗೆ ಹಾಗೂ ಕೃಷಿ ಅಧಿಕಾರಿಗೆ ಸೂಚಿಸಿದರಲ್ಲದೇ, ತಾಲೂಕಿನಲ್ಲಿ ಮುಂಜಾಗ್ರತಾ ಕ್ರಮವಾಗಿ ಅಗತ್ಯವಿರುವಷ್ಟು ವಿದ್ಯುತ್ ಕಂಬಗಳು, ತಂತಿಗಳು, ಟ್ರಾನ್ಸ್ಫಾರ್ಮರ್‌ಗಳನ್ನು ಹೆಸ್ಕಾಂ ಇಲಾಖೆ ದಾಸ್ತಾನಿರಿಸಬೇಕು. ದೂರುಗಳು ಬಂದೊಡನೇ ಯಾವುದೇ ಸಬೂಬು ನೀಡದೆ ಸ್ಪಂದಿಸಬೇಕು ಎಂದು ಹೆಸ್ಕಾಂ ಅಧಿಕಾರಿಗೆ ನಿರ್ದೇಶನ ನೀಡಿದರು
ತಾಲೂಕಿನಲ್ಲಿ ಮಳೆ ಗಾಳಿ ಅಧಿಕವಿರುವುದರಿಂದ ಸುರಿವ ಮಳೆಗೆ ಹಾನಿಗೊಳಗಾದವರೊಂದಿಗೆ ಅಧಿಕಾರಿಗಳು ದಿನದ ೨೪ ಗಂಟೆಯೂ ಸಾರ್ವಜನಿಕ ಸೇವೆಗೆ ಸನ್ನದ್ಧರಾಗಿರಬೇಕು. ಮೂಲಭೂತ ಸೌಕರ್ಯ ಸಂಬAಧಿಸಿದAತೆ ರಸ್ತೆ, ಶಾಲೆ, ಅಂಗನವಾಡಿ ಹಾಗೂ ಸರ್ಕಾರಿ ಕಟ್ಟಡಗಳ ಹಾನಿ ಮತ್ತು ವಿದ್ಯುತ್ ಸಂಬAಧ ನಷ್ಟ ಉಂಟಾಗಿದ್ದಲ್ಲಿ ಮಾಹಿತಿ ಪಡೆದು ವರದಿ ನೀಡುವಂತೆ ಅಧಿಕಾರಿಗಳಿಗೆ ಹೇಳಿದರು.
ಈ ಸಂದರ್ಭದಲ್ಲಿ ತಾಲೂಕಾ ಕಾಂಗ್ರೇಸ್ ಅಧ್ಯಕ್ಷ ದಾನಪ್ಪ ಚೂರಿ, ಶಿವನಗೌಡ ಪಾಟೀಲ, ರಮೇಶ ಸುತ್ತಕೋಟಿ, ಮಾರುತಿ ಅಚ್ಚಿಗೇರಿ, ಬೀರಪ್ಪ ಬಣಕಾರ, ಡಿ.ಎಚ್.ಬುಡ್ಡನಗೌಡ, ಚನ್ನಬಸಪ್ಪ ಹುಲ್ಲತ್ತಿ, ಶಂಭನಗೌಡ ಪಾಟೀಲ, ತಹಸೀಲ್ದಾರ ಎಫ್.ಎ.ಸೋಮನಕಟ್ಟಿ, ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಮಲ್ಲಿಕಾರ್ಜುನ, ಸಹಾಯಕ ಕೃಷಿ ನಿರ್ದೇಶಕ ಗಣೇಶ ಕಮ್ಮಾರ, ಕೃಷಿ ಅಧಿಕಾರಿ ನಾಗರಾಜ ಬನ್ನಿಹಟ್ಟಿ, ಕಂದಾಯ ಅಧಿಕಾರಿ ರಾಮನಗೌಡ ದ್ಯಾಮನಗೌಡ, ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು, ಪಿಡಿಓಗಳು, ಗ್ರಾಮ ಲೆಕ್ಕಾಧಿಕಾರಿಗಳು ಹಾಜರಿದ್ದರು.