ಪತ್ರಿಕಾರಂಗ ಜನರನ್ನು ಬೆಸೆವ ಸಂಪರ್ಕ ಸೇತುವೆ
ಬೀದರ : ಜು.28:ಬಿ.ವಿ. ಭೂಮರಡ್ಡಿ ಮಹಾವಿದ್ಯಾಲಯ ವತಿಯಿಂದ ನಗರದ ಪ್ರತಿಷ್ಠಿತ ಓಡವಾಡ ಅಗ್ರಹಾರದ ಅನಂತಶಯನ ದೇವಾಲಯದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಪತ್ರಕರ್ತರಾದ ಶ್ರೀ ಶಿವಕುಮಾರ ಸ್ವಾಮಿಯವರು ಮಾತನಾಡುತ್ತಾ ಇಂದಿನ ಪತ್ರಿಕಾ ರಂಗ ರಾಜಕೀಯ ಮತ್ತು ಸಾಮಾಜಿಕವಾಗಿ ಜನರನ್ನು ಬೆಸೆಯುವ ಸಂಪರ್ಕ ಸೇತುವೆಯಾಗಿದೆ. ಈ ರಂಗವು ಅತ್ಯಂತ ಪ್ರಾಮಾಣಿಕವಾಗಿ ಪರಿಶುದ್ಧವಾಗಿ ಮಾಡುವ ಶ್ರೇಷ್ಠ ಅಂಗವಾಗಿದೆ. ಸರ್ಕಾರದ ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗ ಈ ಮೂರು ಅಂಗಗಳು ಹೊರತುಪಡಿಸಿ ಪತ್ರಕಾ ರಂಗ ನಾಲ್ಕನೇ ಅಂಗಗವಾಗಿ ಹೊರಹೊಮ್ಮಿದೆ. ಆದರಿಂದ ಶಿಬಿರಾರ್ಥಿಗಳು ಪ್ರತಿಕೋಧ್ಯಮ ಕೋರ್ಸನ್ನು ಮಾಡಿ ಉನ್ನತ ಪತ್ರಕರ್ತರಾಗಲು ಸಾಧ್ಯವಾಗುತ್ತದೆ ಎಂದು ಮಾರ್ಮಿಕವಾಗಿ ನುಡಿದರು.
ಇನ್ನೋರ್ವ ಅತಿಥಿಗಳಾದ ಶ್ರೀ ಶಿವಕುಮಾರ ಭುಜ್ಜಾ ಪಬ್ಲಿಕ್ ಟಿ.ವಿ. ವರದಿಗಾರರು ಪತ್ರಕರ್ತರು ಭೂಕಂಪ ನೆರಹಾವಳಿ, ಯುದ್ಧ, ಮುಂತಾದ ಸಂದರ್ಭಗಳಲ್ಲಿ ಅಂತಹ ಕಠಿಣ ಪ್ರದೇಶಗಳಿಗೆ ತೆರಳಿ ಸುದ್ಧಿ ಮಾಡುತ್ತಾರೆ. ಇವರ ಸೇವೆ ಶ್ಲಾಘನೀಯ ಮಾನವ ಮತ್ತು ಸರ್ಕಾರದ ನಡುವೆ ಲೋಪದೋಷಗಳು ಹೊರಹಾಕುವುದು ಅಲ್ಲದೇ ಜನರಿಗೆ ಸರ್ಕಾರದ ಸವಲತ್ತುಗಳು ತಿಳಿಸಿ ಸರಿ ದಾರಿಗೆ ತರುವುದ ಪತ್ರಿಕಾ ರಂಗದ ಉದ್ದೇಶವಾಗಿದೆ ಎಂದು ನುಡಿದರು.
ಇನ್ನೋರ್ವ ಅತಿಥಿಗಳಾದ ಯೋಗ ಶಿಕ್ಷಕರು ಹಾಗೂ ನಿವೃತ್ತ ಸಮಾಜಶಾಸ್ತç ಉಪನ್ಯಾಸಕರಾದ ಶ್ರೀ ಗುರುನಾಥ ಮೂಲಗೆಯವರು ಮಾತನಾಡುತ್ತಾ ಯೋಗದಿಂದ ರೋಗಗಳನ್ನು ತಡೆಗಟ್ಟಿ ಉತ್ತಮ ಜೀವನ ನಡೆಸಲು ಸಾಧ್ಯ ಪ್ರಾಚೀನ ಕಾಲದ ವೇದಗಳಲ್ಲಿ ಭಾರತ ದೇಶ ಯೋಗದ ಕೇಂದ್ರ ಬಿಂದುವಾಗಿದೆ. ನಮ್ಮ ದೇಶದದಲ್ಲಿ ಹಲವಾರು ಋಷಿ – ಮುನಿಗಳು ಯೋಗದಿಂದ ಮಾರಕ ರೋಗಗಳು ತಡೆಗಟ್ಟಿ ತಮ್ಮ ಜೀವಿತ ಅವಧಿಯನ್ನು ಹೆಚ್ಚಿಸಿಕೊಂಡಿದಲ್ಲದೇ ಪ್ರಾಣಯಾಮ, ಅನುಲೋಮ – ವಿಲೋಮ, ಸೂರ್ಯ ನಮಸ್ಕಾರ, ಕುಕುಟಾಸನ ಇಂತಹ ಹಲವಾರು ಯೋಗಗಳು ಮಾಡಿ ಸದೃಢ ಆರೋಗ್ಯ ಹೊಂದಿದ್ದರು, ಶಿಬಿರಾರ್ಥಿಗಳು ಸಹ ಯೋಗಗಳನ್ನು ಕಲಿತು ಆರೋಗ್ಯ ಕಾಪಾಡಿಕೊಂಡು ಸದೃಢ ಭಾರತದಲ್ಲಿ ಸದೃಢ ಆರೋಗ್ಯ ಎಂದು ಮಾರ್ಮಿಕವಾಗಿ ನುಡಿದರು.
ಕಾರ್ಯಕ್ರಮದ ಘನ ಅಧ್ಯಕ್ಷತೆಯನ್ನು ವಹಿಸಿದ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಪಿ. ವಿಠ್ಠಲ ರಡ್ಡಿಯವರು ಮಾತನಾಡುತ್ತಾ ಇಂದಿನ ಒತ್ತಡದ ಜೀವನದಲ್ಲಿ ಮಾನವನಿಗೆ ಯೋಗವು ಮುಖ್ಯವಾಗಿದೆ ಯೋಗದಿಂದ ಸರ್ವರೋಗಗಳು ತಡೆಗಟ್ಟಿ ನೆಮ್ಮದಿಯಿಂದ ಬದುಕನ್ನು ಸಾಗಿಸಲು ಸಾಧ್ಯವಾಗುತ್ತದೆ ಹಾಗೂ ಇವತ್ತಿನ ಪತ್ರಿಕಾ ರಂಗದ ದಿನಾಚರಣೆಯ ಉದ್ದೇಶದಿಂದ ಭಾರತದ ಮೂಲೆ ಮೂಲೆಯಿಂದ ಸುದ್ಧಿ ವಾಹಿನಿಯನ್ನು ಸಂಗ್ರಹಿಸಿ ದಿನಪತ್ರಿಕೆ ಮತ್ತು ವಾರ್ತೆಗಳ ಮುಖಾಂತರ ನಾವು ಮನೆಯಲ್ಲಿ ಕುಳಿತು ವೀಕ್ಷಿಸಬಹುದು ಹಾಗೂ ಪತ್ರಿಕಾ ರಂಗದ ಜೀವನ ಅತ್ಯಂತ ಶ್ರೇ಼ಷ್ಠ ಕಾರ್ಯವಾಗಿದೆ ಪತ್ರಿಕಾ ರಂಗ ಸರ್ಕಾರದ ನಾಲ್ಕನೇಯ ಅಂಗವಾಗಿ ರಾಜಕೀಯ ವ್ಯಕ್ತಿಗಳು ಮತ್ತು ಸಾಮಾನ್ಯ ಜನರ ನಡುವೆ ಸಂಪರ್ಕ ಸೇತುವೆಯಾಗಿದೆ ಎಂದು ಶಿಬಿರಾರ್ಥಿಗಳಿಗೆ ಮನಮುಟ್ಟುವಂತೆ ತಿಳಿಸಿದರು.
ಕಾರ್ಯಕ್ರಮದ ವೇದಿಕೆಯ ಮೇಲೆ ಗೌರವ ಉಪಸ್ಥಿತಿ ಕಛೇರಿಯ ಅಧೀಕ್ಷಕರಾದ ಶ್ರೀ ಸುಜೀತಕುಮಾರ ಬಿ. ಹಾಗೂ ಎನ್.ಎಸ್.ಎಸ್. ‘ಬ’ ಘಟಕದ ಅಧಿಕಾರಿಗಳಾದ ಶ್ರೀ ಬಸವರಾಜ ಬಿರಾದಾರ ಉಪಸ್ಥಿತರಿದ್ದರು.
ಕಾರ್ಯಕ್ರಮ ಮೊದಲಿಗೆ ಸ್ವಾಗತ ಗೀತೆಯನ್ನು ಕು: ದೇವಿಕಾ ಹಾಡಿದರೆ, ಎನ್.ಎಸ್.ಎಸ್. ‘ಅ’ ಘಟಕದ ಅಧಿಕಾರಿಗಳಾದ ಡಾ. ದೀಪಾ ರಾಗ ಸ್ವಾಗತಿಸಿದರೆ, ಕು. ಸಾಹೀಲ್ ಅಬ್ಬಾಸ್ ಬಿ.ಎ. 6ನೇ ಸೆಮಿಸ್ಟರ ನಿರೂಪಣೆ ಮಾಡಿದರೆ, ಕು. ಪ್ರೀಯರಾಣಿ ವಂದಿಸಿದರು
ಕಾಯಕ್ರಮದಲ್ಲಿ ಶಿಬಿರಾರ್ಥಿಗಳು, ಪ್ರಾಧ್ಯಾಪಕರು ಬೋಧಕೇತರ ಸಿಬ್ಬಂದಿ ವರ್ಗದವರು ಹಾಜರಿದ್ದರು.