ಹುತಾತ್ಮ ಯೋಧರಿಗೆ ಗೌರವ ನಮನ: ಡಾ. ರಜನೀಶ ಎಸ್. ವಾಲಿ
ಬೀದರ :ಜು.28: ನಗರದ ಬಿ.ವಿ. ಭೂಮರಡ್ಡಿ ಮಹಾವಿದ್ಯಾಲಯದ ಆವರಣದಲ್ಲಿ ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಹೊಸದಾಗಿ ಪ್ರಾರಂಭಗೊAಡ ಸೈನಿಕ ಶಾಲೆ ಹಾಗೂ ಪದವಿ ಮಹಾವಿದ್ಯಾಲಯದ ಎನ್.ಸಿ.ಸಿ. ಘಟಕದಿಂದ ಕಾರ್ಗಿಲ್ ವಿಜಯ ದಿನದ ರಜತ ಮಹೋತ್ಸವ ಆಚರಿಸಲಾಯಿತು. ಈ ಸಂದರ್ಭದಲ್ಲಿ ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು ಹಾಗೂ ಬಿ.ವಿ. ಭೂಮರಡ್ಡಿ ಮಹಾವಿದ್ಯಾಲಯ ಆವರಣದ ಶಾಲಾ – ಕಾಲೇಜುಗಳ ಸಂಚಾಲಕರಾದ ಡಾ. ರಜನೀಶ ಎಸ್. ವಾಲಿಯವರು ಅಧ್ಯಕ್ಷತೆಯ ಸ್ಥಾನವಹಿಸಿ ಕಾರ್ಗಿಲ್ ಕದನದಲ್ಲಿ ಹುತಾತ್ಮರಾದ ಯೋಧರನ್ನು ನೆನೆದು ಗೌರದೊಂದಿಗೆ ಪುಷ್ಪಗುಚ್ಛ ಅರ್ಪಿಸಿ ನಮನ ಸಲ್ಲಿಸಿದರು ಹಾಗೂ ಭೂಸೇನೆಯಲ್ಲಿ ಧೀರ್ಘಕಾಲ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಮಾಜಿ ಸೈನಿಕರಾದ ಬಿ.ಎಚ್.ಎಂ. ಸಂಜೀವಕುಮಾರ ಅವರನ್ನು ಸನ್ಮಾನಿಸಿದರು.
ಅಲ್ಲದೇ ಬಿ.ವಿ.ಭೂಮರಡ್ಡಿ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಮೇಜರ್ ಡಾ. ಪಿ. ವಿಠ್ಠಲ ರಡ್ಡಿಯವರು ಸಹ ಹುತಾತ್ಮರಾದ ವೀರ ಯೋಧರ ಸ್ಮಾರಕಕ್ಕೆ ಪುಷ್ಪಗುಚ್ಛ ಅರ್ಪಿಸಿ ಸೈನಿಕ ಹಾಗೂ ಎನ್.ಸಿ.ಸಿ. ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ ನಮ್ಮ ದೇಶ ಸುರಕ್ಷೆಯಿಂದರಬೇಕಾದರೆ ಸೈನಿಕರು ಬೇಕು ಯಾವ ದೇಶ ಸೈನಿಕ ಹಾಗೂ ರೈತರನ್ನು ಗೌರವಿಸುತ್ತದೇಯೋ ಆ ದೇಶ ಎಂದಿಗೂ ಸುರಕ್ಷಿತವಾಗಿರುತ್ತದೆ. ಇಂದಿನ ಯವಕರು ನಾಳಿನ ನಾಗರೀಕರು ಎನ್ನುವ ಗಾದೆ ಸುಳ್ಳಲ್ಲ, ನಮ್ಮ ವಿದ್ಯಾರ್ಥಿಗಳು ಮುಂದುವರೆದು ಎನ್.ಡಿ.ಎ. ಪಾಸ್ ಮಾಡಿ ಸೇನೆಯಲ್ಲಿ ಅಧಿಕಾರಿಗಳಾಗಿ ಸೇವೆ ಸಲ್ಲಿಸಬೇಕು ಎನ್ನುವ ನಿಟ್ಟಿನಲ್ಲಿ ನಮ್ಮ ಇಂದಿನ ಮಾನ್ಯ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ದಾಮೋಧರ ಮೋದಿಯವರ ಕನಸಾಗಿದೆ. ಆದುದರಿಂದಲೇ ದೇಶದ ಪ್ರತಿ ಜಿಲ್ಲೆಗೊಂದು ಸೈನಿಕ ಶಾಲೆ ಪ್ರಾರಂಭಿಸುವುದರೊAದಿಗೆ ಅಗ್ನಿವೀರ ಸೈನಿಕರಾಗಿ ಭೂಸೇನೆ, ವಾಯುಸೇನೆ ಹಾಗೂ ಜಲಸೇನೆಗಳನ್ನು ವಿಶೇಷ ತರಬೇತಿ ನೀಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಕಲ್ಯಾಣ ಕರ್ನಾಟಕ ಭಾಗದ ಹೆಸರಾಂತ ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಬಿ.ವಿ. ಭೂಮರಡ್ಡಿ ಮಹಾವಿದ್ಯಾಲಯ ಆವರಣದಲ್ಲಿರುವ ನ್ಯಾಷನಲ್ ಅಂಗ್ಲ ಮಾಧ್ಯಮ ಶಾಲೆಗೆ ಸೈನಿಕ ಶಾಲೆಯ ಜಬ್ದಾರಿಯನ್ನು ಒಪ್ಪಿಸಿದ್ದಾರೆ. ಈಗಾಗಲೇ ಜುಲೈ 8, 2024ರಿಂದ ಸೈನಿಕ ಶಾಲೆ ಪ್ರಾರಂಭವಾಗಿದೆ. ಅಲ್ಲದೇ ಬೃಹತ್ ಮಟ್ಟದ ಸುಸಜ್ಜಿತ ಸೈನಿಕ ಶಾಲೆ ರಾಷ್ಟಿçÃಯ ಮೌಲಾಂಕನ ವ್ಯವಸ್ಥೆಯಡಿ ಕಟ್ಟಡದ ನಿರ್ಮಾಣ ಪ್ರಾರಂಭವಾಗಿದೆ. ಮುಂಬರುವ ದಿನಗಳಲ್ಲಿ ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ಶೈಕ್ಷಣಿಕ ವರದಾನವಾಗಿ ಸೇವೆ ಸಲ್ಲಿಸುವಲ್ಲಿ ಮುಂಚುಣಿಯಲ್ಲಿ ನಿಲ್ಲುತ್ತದೆ ಎಂದು ಮಾರ್ಮಿಕವಾಗಿ ನುಡಿದರು.
ಇನ್ನೋರ್ವ ಅತಿಥಿಗಳಾದ ಬಿ.ವಿ. ಭೂಮರಡ್ಡಿ ಮಹಾವಿದ್ಯಾಲಯದ ಶ್ರೀ ಅನೀಲಕುಮಾರ ಆಣದೂರೆ ಉಪ ಪ್ರಾಂಶುಪಾಲರು ಮಾತನಾಡಿದರಲ್ಲದೇ ಎನ್.ಇ.ಎಂ.ಪಿ.ಎಸ್. ಹಾಗೂ ಸೈನಿಕ ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ಶ್ರೀಲತಾ ಜಿ. ಸ್ವಾಮಿಯವರು ಮಾತನಾಡಿ ವಿದ್ಯಾರ್ಥಿಗಳಲ್ಲಿ ದೇಶ ಪ್ರೇಮ ಹಾಗೂ ರಾಷ್ಟçದ ಬಗ್ಗೆ ಗೌರವ ಹೆಚ್ಚುಸುವಂತೆ ಕರೆ ಕೊಟ್ಟರು.
ಅದೇ ರೀತಿ ಶಿಕ್ಷಕರಾದ ಶ್ರೀ ಜಗದೀಶ ಅವರಿಂದ ಕಾರ್ಗಿಲ್ ವಿಜಯ ಕದನದ ಸಾಕ್ಷಿಚಿತ್ರ ಮಕ್ಕಳಿಗೆ ತೋರಿಸಿದರು. ಕಾರ್ಯಕ್ರಮವನ್ನು ಶ್ರೀ ಆಕಾಶ ಕೋಳಾರೆಯವರು ನಿರೂಪಣೆ ಹಾಗೂ ವಂದನಾರ್ಪಣೆ ಸಲ್ಲಿಸದರು.
ಈ ಸಂದರ್ಭದಲ್ಲಿ ಬಿ.ವಿ.ಬಿ. ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ. ದೀಪಾ ರಾಗ, ಎನ್.ಇ.ಎಂ.ಪಿ.ಎಸ್. ಹಾಗೂ ಸೈನಿಕ ಶಾಲೆಯ ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಪದವಿ ಮಹಾವಿದ್ಯಾಲಯದ ಎನ್.ಸಿ.ಸಿ. ಕೆಡಟ್ಸ್ಗಳು ಹಾಜರಿದ್ದರು.