ಜೆಸಿ ನಗರ ದಸರಾಗೆ ಭೂಮಿ ಪೂಜೆ
ಬೆಂಗಳೂರು.ಸೆ.೨೯-ಪ್ರತಿವರ್ಷದಂತೆ ಈ ವರ್ಷವೂ ಸಹ ಕರ್ನಾಟಕದ ೨ನೇ ಮೈಸೂರು ದಸರಾ ಎಂದೇ ಪ್ರಖ್ಯಾತಿ ಹೊಂದಿರುವ ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಜೆಸಿ ನಗರ ಮುನಿರೆಡ್ಡಿ ಪಾಳ್ಯದ ದಸರಾ ಮೈದಾನದಲ್ಲಿ ಇದೇ ಅಕ್ಟೋಬರ್ ೩ ರಿಂದ ಆರಂಭವಾಗಲಿರುವ ಅದ್ದೂರಿ ದಸರಾ ಉತ್ಸವದ ಧ್ವಜಸ್ಥಂಭ ನೆಡುವ ಭೂಮಿ ಪೂಜೆಯನ್ನು ಇಂದು ದಸರಾ ಉತ್ಸವ ಸಮಿತಿ ಅಧ್ಯಕ್ಷರು ಹಾಗೂ ನಗರಾಭಿವೃದ್ಧಿ ಮತ್ತು ಯೋಜನೆ ಸಚಿವರು, ಕ್ಷೇತ್ರದ ಶಾಸಕರಾದ ಶ್ರೀ ಬೈರತಿ ಸುರೇಶ್ ರವರು ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾಜಿ ಬಿಬಿಎಂಪಿ ಸದಸ್ಯರು, ದಸರಾ ಉತ್ಸವ ಸಮಿತಿ ಸದಸ್ಯರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ವಿವಿಧ ದೇವಸ್ಥಾನ ಸಮಿತಿಗಳ ಪದಾಧಿಕಾರಿಗಳು, ಸ್ಥಳೀಯ ಮುಖಂಡರು, ಕಾರ್ಯಕರ್ತರು, ಸಾರ್ವಜನಿಕರು ಹಾಜರಿದ್ದರು.