ಯಾದಗಿರ-ಕಲಬುರಗಿ: 350 ರೈತ ಕುಟುಂಬಗಳಿಗೆ ಪರಿಹಾರ
ಕಲಬುರಗಿ,ಜು.28- ಯಾದಗಿರ ಮತ್ತು ಕಲಬುರಗಿ ಉಭಯ ಜಿಲ್ಲೆಯಲ್ಲಿ ಕಳೆದ 4 ವರ್ಷಗಳಲ್ಲಿ ಆತ್ಮಹತ್ಯೆಗೆ ಶರಣಾದ 376 ಕುಟುಂಬಗಳ ಪೈಕಿ 350 ಕುಟುಂಬಳಿಗೆ ಪರಿಹಾರ ನೀಡಲಾಗಿದ್ದು, ಇನ್ನುಳಿದ 24 ಪ್ರಕರಣದಳಿಗೂ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಕಂದಾಯ ಸಚಿವ ಬೈರೇಗೌಡ ಅವರು, ವಿಧಾನ ಮಂಡಲ ಅಧಿವೇಶನದಲ್ಲಿ ವಿಧಾನ ಪರಿಷತ್ ಸದಸ್ಯ ಡಾ.ಬಿ.ಜಿ.ಪಾಟೀಲ ಅವರ ಪ್ರಶ್ನೆಗೆ ಉತ್ತರಿಸಿದರು.
ಕಳೆದ 2021ರಿಂದ 2024ರ ಅವಧಿಯಲ್ಲಿ ಈ ಜಿಲ್ಲೆಯಲ್ಲಿ 376 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದರಲ್ಲಿ ಯಾದಗಿರ ಜಿಲ್ಲೆ 168 ಮತ್ತು ಕಲಬುರಗಿ ಜಿಲ್ಲೆಯಲ್ಲಿ 182 ಪ್ರಕರಣಗಳು ದಾಖಲಾಗಿದ್ದು, ಈ ಜಿಲ್ಲೆಗಳಲ್ಲಿ ರೈತರಿಗೆ ಪರಿಹಾರ ವಿತರಣೆಗೆ ಸಂಬAಧಿಸಿದAತೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ಯಾವುದೇ ಸಂಘ ಸಂಸ್ಥೆಗಳಿAದ ಪ್ರತಿಭಟನೆಗಳು ನಡೆದಿಲ್ಲ ಎಂದು ಸಚಿವರು ಬಿಜಿ ಪಾಟೀಲರಿಗೆ ಸ್ಪಷ್ಟಪಡಿಸಿದರು.
ಯಾದಗಿರ ಜಿಲ್ಲೆಯಲ್ಲಿ 2021-22ರಲ್ಲಿ 55 ಪ್ರಕರಣಗಳು, 2022-23ರಲ್ಲಿ 52 ಪ್ರಕರಣ ಹಾಗೂ 2023-24ರಲ್ಲಿ 59 ಪ್ರಕರಣಗಳು ದಾಖಲಾಗಿವೆ. ಅದರಂತೆ ಕಲಬುರಗಿ ಜಿಲ್ಲೆಯಲ್ಲಿ 2021-22ರಲ್ಲಿ 98 ಪ್ರಕರಣಗಳು, 2022-23ರಲ್ಲಿ 55 ಪ್ರಕರಣಗಳು, 2023-24ರಲ್ಲಿ 53 ಪ್ರಕರಣಗಳು ದಾಖಲಾಗಿವೆ ಈ ಎಲ್ಲ ಪ್ರಕರಣಗಳಿಗೆ ಸಂಬAಧಿಸಿದ ಸಂತ್ರಸ್ತ ರೈತರ ಕುಟುಂಬಗಳಿಗೆ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗಿದೆ ಇದರಲ್ಲಿ ಈಗಾಗಲೇ 350 ಕುಟುಂಬಗಳಿಗೆ ಪರಿಹಾರ ವಿತರಿಸಲಾಗಿದೆ ಎಂದು ಸಚಿವರು, ಬಿ.ಜಿ.ಪಾಟೀಲರು ಕೇಳಿದ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ್ದಾರೆ.