ಆರ್‌ಎಂಎಸ್‌ಎ ಶಿಕ್ಷಕರ ಹೋರಾಟಕ್ಕೆ ಸಂದ ಜಯ: ನಮೋಶಿ
ಕಲಬುರಗಿ,ಜು.28-ಕಳೆದ ಎರಡು ವರ್ಷಗಳಿಂದ ಹೊಸದಾಗಿ ರಚನೆಯಾದ ತಾಲೂಕುಗಳ ಆರ್‌ಎಂಎಸ್‌ಎ ಪ್ರೌಢ ಶಾಲೆ ಸಿಬ್ಬಂದಿಗಳ ವೇತನ 4-5 ತಿಂಗಳು ವಿಳಂಬವಾಗಿ ಪಾವತಿಯಾಗುತ್ತಿದ್ದನ್ನು ಖಂಡಿಸಿ ಈಚೆಗೆ ಶಿಕ್ಷಕರು ಹಾಗೂ ಸಿಬ್ಬಂದಿಗಳು ಅಪರ ಆಯುಕ್ತರ ಕಚೇರಿಯಲ್ಲಿ ಪ್ರತಿಭಟನೆ ನಡೆಸಿದ್ದರು.
ಅಂದು ನಾನು ಸಹ ಪ್ರತಿಭಟನೆಯಲ್ಲಿ ಭಾಗವಹಿಸಿ ಸಂಪೂರ್ಣ ಬೆಂಬಲ ಸೂಚಿಸಿದ್ದೆ ಅಂದು ಸ್ಥಳಕ್ಕೆ ಆಗಮಿಸಿದ ಅಪರ ಆಯುಕ್ತರು ಒಂದು ವಾರದಲ್ಲಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದರು. ನಂತರ ನಾನು ವಿಧಾನ ಪರಿಷತ್ ಕಲಾಪದಲ್ಲಿ ಶೂನ್ಯ ವೇಳೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿ ಸರ್ಕಾರದ ಗಮನ ಸೆಳೆದಿದ್ದೆ. ಅದರಂತೆ ಸರ್ಕಾರ ಶಿಕ್ಷಕರ ವೇತನ ಬಿಡುಗಡೆಗೆ ಹಣ ಬಿಡುಗಡೆ ಮಾಡಿದೆ. ಆದರೆ ಹೊಸ ತಾಲೂಕುಗಳ ಡಿಡಿಓ ಕೋಡ್ ಏ 2 ದಲ್ಲಿ ರಿ ಮ್ಯಾಪಿಂಗ್ ಆಗಬೇಕಾಗಿದೆ. ಆದ್ದರಿಂದ ಕಲಬುರ್ಗಿಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕ ಸೂರ್ಯಕಾಂತ ಮದಾನೆ ಇವರೊಂದಿಗೆ ಮಾತನಾಡಿದ್ದೆನೆ. ಅವರು ಸಂಭAದಿಸಿದ ಹೊಸ ತಾಲೂಕುಗಳ ಬಿ ಇ ಓ ಗಳ ಜೋತೆ ಮಾತನಾಡಿದ್ದು ಇನ್ನು ಮೂರ್ನಾಲ್ಕು ದಿನಗಳಲ್ಲಿ ರಿ ಮ್ಯಾಪಿಂಗ್ ಮಾಡಿ ಎಚ್ ಆರ್ ಎಂ ಎಸ್ ಸಮಸ್ಯೆ ಬಗೆಹರಿಸುವಂತೆ ಸೂಚಿಸಿದ್ದಾರೆ. ಈ ವಾರದಲ್ಲಿ ಎಲ್ಲ ಶಿಕ್ಷಕರ ವೇತನ ಸಮಸ್ಯೆ ಬಗೆಹರಿಯುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಶಶೀಲ ಜಿ.ನಮೋಶಿ ತಿಳಿಸಿದ್ದಾರೆ.