ರೈಲಿನಲ್ಲಿ ಪ್ರಯಾಣಿಕರ ಸೋಗಿನಲ್ಲಿ ಸರಗಳ್ಳತನ ಮಾಡುತ್ತಿದ್ದ ಇಬ್ಬರ ಬಂಧನ
ವಾಡಿ,ಜು.28-ರೈಲಿನಲ್ಲಿ ಪ್ರಯಾಣಿಕರ ಸೋಗಿನಲ್ಲಿ ಬಂದು ಸರಗಳ್ಳತನ ಮಾಡುತ್ತಿದ್ದ ಇಬ್ಬರನ್ನು ವಾಡಿ ರೈಲ್ವೆ ಪೊಲೀಸರು ಶುಕ್ರವಾರ ಬಂಧಿಸಿ 2.0600 ರೂ.ಮೌಲ್ಯದ 32 ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.
ಸೊಲ್ಲಾಪೂರದ ಲಿಂಬೆವಾಡಿ ಗ್ರಾಮದ ಅಂಬಾದಾಸ ವಿಲಾಸ ಜಾಧವ (26) ಮತ್ತು ಸಮರ್ಥ ಅಜಯ ಚವ್ವಾಣ (29) ಬಂಧಿತ ಆರೋಪಿಗಳಾಗಿದ್ದಾರೆ.
ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿ ತಲೆಮರಿಸಿಕೊಂಡಿದ್ದ ಆರೋಪಿಗಳನ್ನು ಪತ್ತೆ ಹಚ್ಚಲು ಹುಬ್ಬಳಿಯ ಡಿ.ಎಸ್.ಆರ್‌ಪಿ. ಹಾಗೂ ಸಿಪಿಐ ಬಸವರಾಜ ತೇಲಿ, ಪಿಎಸ್‌ಐ ಮಹೆಮೂದ್ ಪಾಶಾ, ಎಎಸ್‌ಐ ಖಾಜಾಸಾಬ್ ಅವರ ನೇತೃತ್ವದ ರೈಲ್ವೆ ಪೊಲೀಸ್ ತಂಡ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿದೆ. ಶುಕ್ರವಾರ ಸೋಲ್ಲಾಪೂರ ಮಾರ್ಗವಾಗಿ ಹೊರಟ್ಟಿದ್ದ ಪುಣೆ ಎಕ್ಸಪ್ರೇಸ್ ರೈಲಿನಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದನ್ನು ಇಬ್ಬರನ್ನು ಗಮನಿಸಿದ ಪೊಲೀಸ್‌ರು ಅವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿ ಅವರ ಬಳಿಯಿದ್ದ ಬ್ಯಾಗ್ ಪರಿಶೀಲಿಸಲಾಗಿ ಅದರಲ್ಲಿ 32 ಗ್ರಾಂ ಚಿನ್ನದ ಸರ ಪತ್ತೆಯಾಗಿದೆ. ಆರೋಪಿಗಳನ್ನು ವಶಕ್ಕೆ ಪಡೆದು ರೂ.2.0600 ಮೌಲ್ಯದ ಒಟ್ಟು 32 ಗ್ರಾಂ.ಬAಗಾರದ ಚೈನುಗಳು ಜಪ್ತಿಮಾಡಲಾಗಿದೆ ಎಂದು ಪಿಎಸ್‌ಐ ಮಹ್ಮದ ಪಾಶಾ ತಿಳಿಸಿದ್ದಾರೆ. ಎಎಸ್‌ಐ ಅನಿತಾ ರಾಚಯ್ಯ ಸ್ವಾಮಿ, ಮುಖ್ಯ ಪೇದೆಗಳಾದ ಸೈಫಾನ್, ಬಸವರಾಜ, ಬಾವಿಕಟ್ಟಿ, ರಾಹೂಲ ಸಾಳುಂಕೆ, ಪರಶುರಾಮ ರೆಡ್ಡಿ, ಭಾವಾಸಾಬ, ಪ್ರವೀಣ, ಬಾಲು, ಸಚಿನ್, ಕಾವೇರಿ ಸೇರಿದಂತೆ ಇತರರೂ ಇದ್ದರು.