ಸಂಗಮೇಶ್ವರ ಪ್ರೌಢ ಶಾಲೆಯಲ್ಲಿ ಶಾಲಾ ಸಂಸತ್ ರಚನೆ
ಕೊಲ್ಹಾರ:ಜು.28: ಪಟ್ಟಣದ ಸಂಗಮೇಶ್ವರ ಪ್ರೌಢ ಶಾಲೆಯಲ್ಲಿ 2024-25 ನೇ ಸಾಲಿನ ಶಾಲಾ ಸಂಸತ್ ಗೆ ಚುನಾವಣೆ ಜರುಗಿತು.
ಶಾಲೆಯಲ್ಲಿ ಸಾರ್ವತ್ರಿಕ ಚುನಾವಣೆಯ ಮಾದರಿಯಲ್ಲಿ ಶಾಲಾ ಸಂಸತ್ತಿಗೆ ಚುನಾವಣೆಯನ್ನು ನಡೆಸಲಾಯಿತು.ಗುರುವಾರ ನಾಮಪತ್ರ ಸಲ್ಲಿಕೆ,ಹಿಂಪಡೆಯುವುದು ಸೇರಿದಂತೆ ಅನೇಕ ಪ್ರಕ್ರಿಯೆಗಳು ಜರುಗಿದವು. ಶುಕ್ರವಾರ ಬೆಳಿಗ್ಗೆ ಶಾಲೆಯ ತರಗತಿಯ ಕೊಠಡಿಯಲ್ಲಿ ಪಿಂಕ್ ಮತಗಟ್ಟೆಯನ್ನು ನಿರ್ಮಿಸಲಾಯಿತು. ತರಗತಿಯ ಶಿಕಕ್ಷಕರು ತಮ್ಮ ಮೊಬೈಲ್ ನಲ್ಲಿ ಇ.ವಿ.ಎಮ್ ವೊಟಿಂಗ್ ಮಶಿನ್ ಆಪ್ ಡೌನಲೋಡ್ ಮಾಡಿ ಅದರಲ್ಲಿ ಸ್ಪರ್ಧೆ ಮಾಡಿದ ಮಕ್ಕಳ ಹೆಸರು ಮತ್ತು ಪೋಟೋಗಳನ್ನು ಸೇರಿಸಿದರು.ನಂತರ ಶಾಲೆಯ 8,9 ಹಾಗೂ 10 ನೇ ತರಗತಿಯ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ತಮ್ಮ ಆಧಾರ ಕಾರ್ಡ್ ತೋರಿಸಿ ಸರದಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು. ಇಲ್ಲಿ ಮಕ್ಕಳೇ ಚುನಾವಣೆಯ ಅಧಿಕಾರಿಗಳಾಗಿ, ಸಿಬ್ಬಂದಿಗಳಾಗಿ, ಪೋಲಿಸ್, ವೈದ್ಯ ಹಾಗೂ ಆಶಾ ಕಾರ್ಯಕರ್ತೆಯರಾಗಿ ಕಾರ್ಯನಿರ್ವಹಿಸಿದರು.ನಂತರ ನಡೆದ ಮತ ಏಣಿಕೆಯಲ್ಲಿ 8 ಹಾಗೂ 9 ನೇ ತರಗತಿಯಿಂದ 3 ಜನ ವಿದ್ಯಾರ್ಥಿಗಳು,10 ನೇ ತರಗತಿಯಿಂದ 4 ಜನ ವಿದ್ಯಾರ್ಥಿಗಳು ಹೆಚ್ಚು ಮತಗಳನ್ನು ಪಡೆದು ಪ್ರಸಕ್ತ ಶೈಕ್ಷಣಿಕ ವರ್ಷದ ಶಾಲಾ ಸಂಸತ್ ಗೆ ಚುನಾಯಿತರಾದರು. ಶಾಲೆಯ ಪ್ರಧಾನ ಕಾರ್ಯದರ್ಶಿ (ಜಿ.ಎಸ್) ಆಗಿ ತ್ರಿವೇಣಿ ಈರಯ್ಯ ಮಠಪತಿ,ಸಾಂಸ್ಕೃತಿಕ ಮಂತ್ರಿಯಾಗಿ ಕಾಶೀಬಾಯಿ ಜಗದಾಳೆ,ಕ್ರೀಡಾ ಮಂತ್ರಿಯಾಗಿ ರೋಹನ ಕುದರಿ,ಆರೋಗ್ಯ ಮಂತ್ರಿಯಾಗಿ ಸಾಕ್ಷಿ ಪರಗೊಂಡ,ಸ್ವಚ್ಛತೆ ಮಂತ್ರಿಯಾಗಿ ಸುನೀಲ ನಾಗರಾಳ,ಹಣಕಾಸು ಮಂತ್ರಿಯಾಗಿ ನೀಲಾ ಕುದರಿ,ಪ್ರವಾಸ ಮಂತ್ರಿಯಾಗಿ ಸ್ಪೂರ್ತಿ ಕರಣೆ,ತೋಟಗಾರಿಕೆ ಮಂತ್ರಿಯಾಗಿ ಮಹ್ಮದ್ ಇನೂಸ್ ಇಂಡಿಕರ ,ನೀರಾವರಿ ಮಂತ್ರಿಯಾಗಿ ಸುರೇಶ ಜಾಧವ ಹಾಗೂ ವಾಚನಾಲಯ ಮಂತ್ರಿಯಾಗಿ ಉದಿತ್ ಬಾರಸ್ಕಳ ಆಯ್ಕೆಯಾದರು.
ಈ ವೇಳೆ ಚುನಾವಣೆಯನ್ನು ಬಹಳ ವ್ಯವಸ್ಥಿತವಾಗಿ ಸಮಾಜ ಶಿಕ್ಷಕಿ ಸಿ.ಎಚ್.ಗೌಡರ,ದೈಹಿಕ ಶಿಕ್ಷಕ ಮಲ್ಲಿಕಾರ್ಜುನ ಕುಬಕಡ್ಡಿ,ಕರಣಿಕ ಅರುಣ ಬೆನ್ನೂರ,ಕಂಪೂಟರ್ ಶಿಕ್ಷಕ ವಿರೇಶ ಗಣಿ ನಡೆಸಿಕೊಟ್ಟರು.
ಶಾಲಾ ಸಂಸತ್ ಗೆ ಆಯ್ಕೆಯಾದಂತಹ ವಿದ್ಯಾರ್ಥಿಗಳನ್ನು ಮುಖ್ಯ ಚುನಾವಣಾಧಿಕಾರಿ ಹಾಗೂ ಶಾಲೆಯ ಮುಖ್ಯಶಿಕ್ಷಕ ರಾಜಶೇಖರ ಉಮರಾಣಿ,ಶಿಕ್ಷಕ ಸುರೇಶ ಉತ್ನಾಳ,ಶಿಕ್ಷಕಿ ಸಿ,ಎಚ್,ಗೌಡರ,ಧನಶ್ರೀ ಬಾರಸ್ಕಳ ಸೇರಿದಂತೆ ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.