ಬಿಎಸ್‌ಎಸ್‌ಕೆ ಪುನರಾರಂಭಕ್ಕೆ ಆಗ್ರಹಿಸಿ 5 ರಂದು ಪ್ರತಿಭಟನೆ
ಹುಮನಾಬಾದ್:ಜು.28:ಕಾರ್ಖಾನೆ ಪುನರಾರಂಭಕ್ಕೆ ಆಗ್ರಹಿಸಿ ಬಿಎಸ್‌ಎಸ್‌ಕೆ ಹಿತರಕ್ಷಣಾ ಸಮಿತಿಯಿಂದ ಅಗಸ್ಟ್ 5ರಂದು ಸೋಮವಾರ ಕಾರ್ಖಾನೆ ಆವರಣದಲ್ಲಿ ಧರಣಿ ಸತ್ಯಾಗ್ರಹ ನಡೆಸಲಾಗುತ್ತದೆ’ ಎಂದು ಸಮಿತಿ ಅಧ್ಯಕ್ಷ ಸುಭಾಷ್ ಗಂಗಾ ತಿಳಿಸಿದರು.
ಪಟ್ಟಣದಲ್ಲಿ ಭಾನುವಾರ ನಡೆದ ರೈತ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು.
“ಅಂದು ಬೆಳಿಗ್ಗೆ 11 ಗಂಟೆಗೆ ಧರಣಿ ಆರಂಭಿಸಿ, ಕಾರ್ಖಾನೆ ಪುನರಾರಂಭ ಮಾಡುವರೆಗೆ ನಿರಂತವಾಗಿ ಜರುಗಲಿದೆ. ಕಾರ್ಖಾನೆ ಧರಣಿ ???? ಷೇರುದಾರರು ರೈತರು ಸಹಕರಿಸಬೇಕು’ ಎಂದು ಮನವಿ ಮಾಡಿದರು.
‘ಕಾರ್ಖಾನೆ ಆರಂಭ ಮಾಡುವಲ್ಲಿ ಆಡಳಿತ ಮಂಡಳಿಯು ಸಂಪೂರ್ಣ ವಿಫಲವಾಗಿದೆ. ಚುನಾವಣೆ
ಸಂದರ್ಭದಲ್ಲಿ ಕಾರ್ಖಾನೆ ಆರಂಭಿಸುತ್ತೇವೆ ಎಂದು ಹೇಳಿ ಅಧಿಕಾರ ಹಿಡಿದಿದ್ದ ಆಡಳಿ ಮಂಡಳಿಯವರು, ‘ಈಗ ನುಡಿದಂತೆ ನಡೆಯದೆ, ರೈತರಿಗೆ ಮೋಸ ಮಾಡುತ್ತಿದ್ದಾರೆ. ಕಾರ್ಖಾನೆಯಲ್ಲಿ ಇದ್ದ ಸಾಗುವಾನಿ ಮರಗಳು, ಕಬ್ಬಿಣ, ಎತ್ತಿನ ಗಾಡಿಗಳನ್ನು ಮಾರಾಟ ಮಾಡಿದ್ದಾರೆ. ಇನ್ನೂ ಸುಮ್ಮನಿದ್ದರೆ ಕಾರ್ಖಾನೆಯನ್ನೇ ಮಾರಾಟ ಮಾಡುತ್ತಾರೆ. ಕಾರ್ಖಾನೆಯಲ್ಲಿ ನಡೆದ ಭ್ರಷ್ಟಾಚಾರದ ಬಗ್ಗೆ ಈಗಾಗಲೇ ಮುಖ್ಯಮಂತ್ರಿ ಅವರಿಗೆ ಪತ್ರ ಬರೆಯಲಾಗಿದೆ. ಇದಕ್ಕೆ ಅವರು ಸ್ಪಂದಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರ ಜೊತೆಗೆ ಬಿ.ಎಸ್.ಎಸ್.ಕೆ ಹಿತರಕ್ಷಣಾ ಸಮಿತಿ ಸದಸ್ಯರೊಂದಿಗೆ ಮಾಡಲಾಗುವುದು ಎಂದಿದ್ದಾರೆ ಎಂದು ಮಾಹಿತಿ ತಿಳಿಸಿದರು.
ವೀರಾರಡ್ಡಿ ಪಾಟೀಲ, ಖಾಸೀಂ ಅಲಿ, ಸೋಮಶೇಖರ್ ದುಬಲಗುಂಡಿ ಸಿರಿದಂತೆ ಅನೇಕ ರೈತ ಮುಖಂಡರು ಇದ್ದರು.