ಸರಕಾರಿ ಶಾಲೆ ಮುಂದೆ ಚರಂಡಿ ನೀರು: ಗ್ರಾಪಂ ನಿರ್ಲಕ್ಷ್ಯ
ವಾಡಿ:ಜು.28: ಚಿತ್ತಾಪುರ ತಾಲೂಕಿನ ಕಮರವಾಡಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದ ಕಾರಣಕ್ಕೆ, ಚರಂಡಿ ನೀರು ಶಾಲೆ ಮುಂಭಾದಲ್ಲಿ ನಿಲ್ಲುತ್ತಿರುವುದರಿಂದ ರೋಗದ ಭೀತಿ ಶುರುವಾಗಿದೆ.
ದಿನನಿತ್ಯ ಶಾಲೆಗೆ ಬರುವ ಶಾಲಾ ವಿದ್ಯಾರ್ಥಿಗಳು ಚರಂಡಿ ನೀರು ದಾಟಿಕೊಂಡೆ ಹೋಗಬೇಕು. ಪಾಚಿ ಗಟ್ಟಿದ ನೀರು ದುರ್ವಾಸನೆ ಬೀರುತ್ತದ್ದ ಸಾಂಕ್ರಾಮಿಕ ರೋಗ ಹರಡುವ ತಾಣವಾಗಿದೆ. ಗಬ್ಬು ವಾಸನೆ ಹರಡುತ್ತಿರುವುದರಿಂದ ಶಾಲಾ ಮಕ್ಕಳಿಗೆ ರೋಗದ ಭೀತಿ ಶುರುವಾಗಿದೆ. ಸೂಕ್ತ ಚರಂಡಿ ವ್ಯವಸ್ಥೆ ಮಾಡುವ ಮೂಲಕ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕಾದ ಸ್ಥಳೀಯ ಗ್ರಾಪಂ ಅಧಿಕಾರಿಗಳು ಸಂಪೂರ್ಣ ನಿರ್ಲಕ್ಷ ತೋರುತ್ತಿದೆ ಎಂದು ಸಾರ್ವಜನಿಕರ ದೂರಿದ್ದಾರೆ.
ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ಆರೋಗ್ಯ ಇಲಾಖೆ ಸಾರ್ವಜನಿಕರಿಗೆ ಅರಿವು ಮೂಡಿಸುತ್ತಿದೆ. ನಿಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವಂತೆ ಹಾಗೂ ನೀರು ನಿಲ್ಲದಂತೆ ನೋಡಿಕೊಳ್ಳಿ ಎಂದು ತಿಳಿ ಜಾಗೃತಿ ಹೇಳಲಾಗುತ್ತಿದೆ. ಆದರೂ ಸಹ, ಸ್ಥಳೀಯ ಆಡಳಿತದ ಬೇಜವಾಬ್ದಾರಿಯಿಂದ ರೋಗ ಉಲ್ಬಣಕ್ಕೆ ಕಾರಣವಾಗಿದೆ. ವಿದ್ಯಾರ್ಥಿಗಳು ರೋಗರುಜನೆಗಳಿಗೆ ತುತ್ತಾದರೆ ಸ್ಥಳೀಯ ಗ್ರಾಪಂ ನೇರ ಕಾರಣ ಎಂದು ಪೋಷಕರು ಆರೋಪಿಸುತ್ತಿದ್ದಾರೆ. ಸೂಕ್ತ ಚರಂಡಿ ವ್ಯವಸ್ಥೆ ಮಾಡುವ ಮೂಲಕ ಮುಂದೆ ಆಗುವ ಅನಾಹುತಗಳು ತಪ್ಪಿಸಬೇಕು ಎಂದು ಸ್ಥಳೀಯ ನಾಗರಿಕರು ಒತ್ತಾಯಿಸಿದ್ದಾರೆ.
ಪಿಡಿಒ-ಅಧ್ಯಕ್ಷರ ನಿರ್ಲಕ್ಷö್ಯ: ಈಗಾಗಲೇ ಮಳೆಗಾಲ ಪ್ರಾರಂಭವಾಗಿದ್ದ ಗ್ರಾಮದಲ್ಲಿ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ನೀರು ರಸ್ತೆ ಮೇಲೆ ಹರುಡುವ ಮೂಲಕ ರೋಗ ಉಲ್ಬಣಕ್ಕೆ ಕಾರಣವಾಗಿದೆ. ಸೋಳ್ಳಗಳ ಕಾಟ, ನೋಣಗಳ ಉಪಟಳ ಹೆಚ್ಚಾಗಿದ್ದ ನೈರ್ಮಲ್ಯ ಸಂಪೂರ್ಣ ಹದಗೆಟ್ಟಿದೆ. ಬಡಾವಣೆಗಳಿಗೆ ಭೇಟಿ ನೀಡಿ, ಜನರ ಸಮಸ್ಯೆ ಅರಿತುಕೊಳ್ಳಬೇಕಾದ ಗ್ರಾಪಂ ಅಧಿಕಾರಿಗಳು ಹಾಗೂ ಅಧ್ಯಕ್ಷರು ನಿರ್ಲಕ್ಷö್ಯ ತೂರುವ ಮೂಲಕ ಸಾರ್ವಜನಿಕರ ಟೀಕಿಗೆ ಗುರಿಯಾಗಿದ್ದಾರೆ.