ಮುನಿರ್ ಅಹ್ಮದ್ ಬೀಳಗಿ ಅವರಿಗೆ ವೈದ್ಯ ರತ್ನ ಪ್ರಶಸ್ತಿ
ದೇವರಹಿಪ್ಪರಗಿ: ಜು.28: ಮುನಿರ್ ಅಹ್ಮದ್ ಬೀಳಗಿ,ಅವರಿಗೆ ಪ್ರಸಕ್ತ ಸಾಲಿನ ವೈದ್ಯ ರತ್ನ ಪ್ರಶಸ್ತಿ ಲಭಿಸಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ ಸಗರದ ಕಲಾನಿಕೇತನ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ. ವಿವಿಧ ಕ್ಷೇತ್ರದಲ್ಲಿನ ಸಾಧಕರನ್ನು ಗುರುತಿಸಿ ಪ್ರಶಸ್ತಿ ಕೊಡಮಾಡಿದೆ ವೈದ್ಯಕೀಯ ಕ್ಷೇತ್ರದಲ್ಲಿ ಡಾ,ಮುನೀರ್ ಅಹ್ಮದ್ ಬೀಳಗಿ ಅವರು ಸಮಾಜ ಸೇವೆಯಲ್ಲಿ ಕಾರ್ಯ ಪ್ರವರ್ಥಕರಾಗಿರುವ ಇವರ ನಿಸ್ವಾರ್ಥ ಸೇವೆಯನ್ನು ಪರಿಗಣಿಸಿ ವೈದ್ಯ ರತ್ನ ಪ್ರಶಸ್ತಿ ನೀಡಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ ಕರ್ನಾಟಕ ನಾಮಕರಣ ಸುವರ್ಣ ಸಂಭ್ರಮಾಚರಣೆ ಹಾಗೂ ವಿಶ್ವಗುರು ಬಸವೇಶ್ವರ ಕರ್ನಾಟಕದ ಸಂಸ್ಕೃತಿ ನಾಯಕ ಸಂಭ್ರಮಾಚರಣೆ ಪ್ರಯುಕ್ತ 27.07. 2024 ರಂದು ಶಹಾಪೂರದ ಬೋರುಕಾ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಸಗರದ ಕಲಾನಿಕೇತನ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಪ್ರಶಸ್ತಿ ಪುರಸ್ಕೃತ ಸಾಧಕರಿಗೆ ವಿವಿಧ ಪ್ರಶಸ್ತಿಗಳ ಪ್ರಧಾನ ಮಾಡಿ ಸನ್ಮಾನಿಸಿ ಗೌರವಿಸಲಾಗಿದೆ.
ಈ ಸಮಾರಂಭದಲ್ಲಿ ದೇವರಹಿಪ್ಪರಗಿ ತಾಲೂಕಿನ ಮಾರ್ಕಬ್ಬಿನಹಳ್ಳಿ ಗ್ರಾಮದ ಡಾಕ್ಟರ್, ಮುನೀರ್ ಅಹ್ಮದ್ ಬೀಳಗಿ ಅವರಿಗೆ ವೈದ್ಯ ರತ್ನ ಪ್ರಶಸ್ತಿ ಪುರಸ್ಕಾರದೊಂದಿಗೆ ಸನ್ಮಾನಿಸಿ ಅಭಿನಂದಿಸಲಾಗಿದೆ.
ವೈದ್ಯಕೀಯ ಸೇವೆ ಜೊತೆಗೆ ಸಾಮಾಜಿಕ ಸೇವೆಯಲೂ ಗಮನಸೆಳೆದಿರುವ ಮುನೀರ್ ಅಹ್ಮದ್ ಅವರಿಗೆ ಈ ಪ್ರಶಸ್ತಿ ಲಭಿಸಿರುವುದು ಅವರ ಅಪಾರ ಮಿತ್ರ ವೃಂದ ಯಂಭತ್ನಾಳ ಮತ್ತು ಮಾರ್ಕಬ್ಬಿನಹಳ್ಳಿ ಊರಿನಲ್ಲಿ ಸಂತಸ ತಂದಿದೆ.ಅವರ ಕುಟುಂಬಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ.