ಭಕ್ತರಿಗೆ ಸೂಕ್ತ ಭದ್ರತೆ ಒದಗಿಸಲು ಮನವಿ
ಭಾಲ್ಕಿ:ಜು.28: ತಾಲೂಕಿನ ಖಾನಾಪೂರ(ಮೈಲಾರ) ಮಲ್ಲಣ್ಣ ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರಿಗೆ ಸೂಕ್ತ ಪೊಲೀಸ್ ಭದ್ರತೆ ಒದಗಿಸುವಂತೆ ಮಲ್ಲಣ್ಣ ದೇಗುಲದ ಮಾಜಿ ಅಧ್ಯಕ್ಷ ಕೆ.ಡಿ.ಗಣೇಶ ಮನವಿ ಮಾಡಿದ್ದಾರೆ.
ಬೀದರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಮೈಲಾರ ಮಲ್ಲಣ್ಣ ದೇಗುಲದ ಮಾಜಿ ಅಧ್ಯಕ್ಷ ಕೆ.ಡಿ.ಗಣೇಶ್ ಅವರು ಶನಿವಾರ ಎಸ್ಪಿ ಪ್ರದೀಪ ಗುಂಟಿ ಅವರನ್ನು ಭೇಟಿಯಾಗಿ, ಮಲ್ಲಣ್ಣ ದೇಗುಲ ತನ್ನದೇ ಆದ ಐತಿಹ್ಯ ಹೊಂದಿದೆ.
ಈ ಭಾಗದಲ್ಲಿ ದಕ್ಷಿಣ ಕಾಶಿಯಂತಲೇ ಪ್ರಸಿದ್ಧಿ ಪಡೆದಿರುವ ಈ ದೇಗುಲ ಅಸಂಖ್ಯಾತ ಭಕ್ತರನ್ನು ಹೊಂದಿದೆ.
ಕರ್ನಾಟಕ ಅಷ್ಟೇ ಅಲ್ಲದೆ ನೆರೆಯ ಮಹಾರಾಷ್ಟç, ತೆಲಂಗಾಣ ರಾಜ್ಯ ಸೇರಿ ಮುಂತಾದ ಕಡೆಗಳಿಂದ ಅಪಾರ ಸಂಖ್ಯೆಯ ಭಕ್ತರು ಈ ದೇಗುಲಕ್ಕೆ ಭೇಟಿ ನೀಡಿ ದರುಶನ ಪಡೆಯುತ್ತಾರೆ.
ವಿಶೇಷವಾಗಿ ಶ್ರಾವಣ ಮಾಸದಲ್ಲಿ ಮಲ್ಲಣ್ಣ ದೇವಸ್ಥಾನದಲ್ಲಿ ಭಕ್ತರ ದಟ್ಟಣೆ ಕಂಡು ಬರುತ್ತದೆ. ಇದರಿಂದ ಸರಗಳ್ಳರು, ಜೇಬುಗಳ್ಳರು ತಮ್ಮ ಕೈಚಳಕ ತೋರಿಸುವ ಆತಂಕ ಇದೆ.
ಈ ಹಿನ್ನೆಲೆಯಲ್ಲಿ ಭಕ್ತರ ಸುರಕ್ಷತೆ ದೃಷ್ಟಿಯಿಂದ ದೇಗುಲದಲ್ಲಿ ಹೆಚ್ಚಿನ ಪೊಲೀಸ್ ಸಿಬ್ಬಂದಿ ನಿಯೋಜಿಸಲು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮುಖಂಡ ರಂಜಿತ್ ಮಳಚಾಪೂರೆ ಇದ್ದರು.