ಸಾಧನೆಗೆ ಗುರಿ, ಛಲ ಅವಶ್ಯ: ವಾಸೀಮ ಪಟೇಲ್
ಔರಾದ್ : ಜು.28:ಜೀವನದಲ್ಲಿ ಸಾಧನೆ ಮಾಡಲು ಗುರಿ ಹಾಗೂ ಗುರುವಿನೊಂದಿಗೆ ಛಲವೂ ಅವಶ್ಯವಾಗಿದೆ ಸಾಧನೆಗೆ ನೂರಾರು ಅವಕಾಶಗಳಿವೆ, ಸಾವಿರಾರು ದಾರಿಗಳಿವೆ. ಸಾಧಕನಾಗಲು ಬೇಕು ಸಾಧಿಸುವ ಛಲ ಎಂದು ಔರಾದ್ ಪಿಎಸ್ ಐ ವಾಸೀಮ್ ಪಟೇಲ್ ಹೇಳಿದರು.
ಪಟ್ಟಣದ ಆದರ್ಶ ವಿದ್ಯಾಲಯದಲ್ಲಿ ಶನಿವಾರ ಸುಭಾಷಚಂದ್ರ ಬೋಸ್ ಯುವಕ ಸಂಘದಿAದ ನಡೆದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಕವಿಕೋಷ್ಠಿ ಮತ್ತು ವಿಚಾರ ಸಂಕೀರ್ಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳು ಪುಸ್ತಕ ಪ್ರೇಮಿಗಳಾಗಿ, ಓದುವ ಹವ್ಯಾಸ ಬೆಳಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ವಿದ್ಯಾರ್ಥಿಗಳು ಬದುಕಿನಲ್ಲಿ ಸಾಧನೆಯ ಹಂಬಲ ಹೊಂದಿರಬೇಕು. ಜತೆಗೆ ನಿರಂತರವಾಗಿ ಅಧ್ಯಯನ ಶೀಲತೆ ಅಳವಡಿಸಿಕೊಂಡಾಗ ಉನ್ನತ ಹುದ್ದೆಗಳನ್ನು ಪಡೆಯಬಹುದು ಎಂದರು. ವಿದ್ಯಾರ್ಥಿಗಳು ಸಾಧನೆ ಮಾಡುವ ಮೂಲಕ ಹೆತ್ತವರ ಮತ್ತು ಶಿಕ್ಷಕರಿಗೆ ಕೀರ್ತಿ ತರಬೇಕು. ಒಂದು ನಿರ್ಧಾರ ಕೆ?ಗೊಂಡಾಗ ಅದನ್ನು ಪೂರ್ಣಗೊಳಿಸದೇ ಹಿಂದೆ ಸರಿಯಬಾರದು. ಅದಕ್ಕೆ ಬೇಕಾದ ಪ್ರಯತ್ನವನ್ನು ನಿರಂತರವಾಗಿ ಮಾಡಬೇಕು. ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುವಾಗ ಒಂದೇ ಹುದ್ದೆಗೆ ಎಂದು ಓದದೇ, ಎಲ್ಲ ಪರೀಕ್ಷೆಗಳನ್ನು ಸಮರ್ಥವಾಗಿ ಎದುರಿಸಬೇಕು ಎಂದರು.ಬಸವಣ್ಣನವರ ಆಚಾರ-ವಿಚಾರಗಳು ಪ್ರತಿಯೊಬ್ಬರು ಅಳವಡಿಸಿಕೊಂಡಾಗ ಸಮಾಜಕ್ಕೆ ಕೊಡುಗೆ ನೀಡಲು ಸಾಧ್ಯ ಎಂದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಶಿವಾನಂದ ಮೊಕ್ತೆದಾರ್ ಮಾತನಾಡಿ, ವಚನ ಕ್ರಾಂತಿಯ ಮೂಲಕ ಸಮಾನತೆ ಸಾರಿದ ಬಸವಣ್ಣನವರ ವಿಚಾರಗಳು ಸಾರ್ವಕಾಲಿಕ ಸತ್ಯವಾಗಿದ್ದು, ಅವುಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು. ವಿದ್ಯಾರ್ಥಿ ಜೀವನ ಎಂಬುದು ಬದುಕಲ್ಲಿ ಬರುವ ಅತ್ಯಂತ ಅಮೂಲ್ಯ ಮತ್ತು ಸುಂದರವಾದ ಸಮಯ. ಅದನ್ನು ಸದುಪಯೋಗ ಪಡಿಸಿಕೆuಟಿಜeಜಿiಟಿeಜಳ್ಳಬೇಕು ಎಂದು ಸಲಹೆ ನೀಡಿದರು.
ಸುಭಾಷ್ ಚಂದ್ರ ಬೋಸ್ ಯುವಕ ಸಂಘದ ತಾಲೂಕು ಅಧ್ಯಕ್ಷ ರತ್ನಾದೀಪ ಕಸ್ತೂರೆ ಪ್ರಾಸ್ತವಿಕ ಮಾತನಾಡಿ, ಸಂಘದಿAದ ವಿಶ್ವಗುರು ಬಸವಣ್ಣನವರ ಜಂಯತಿ ನಿಮಿತ್ತ ವಿಚಾರ ಸಂಕೀರ್ಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ವಿದ್ಯಾರ್ಥಿಗಳು ಬಸವಣ್ಣನವರ ಜೀನವ ಚರಿತ್ರೆ ಅರಿಯಬೇಕು ಎಂದರು.
ಪ್ರಭಾರಿ ಬಿಇಒ ಧೂಳಪ್ಪ ಮಳೆನೂರೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಎನ್ ಪಿಎಸ್ ನೌಕರರ ಸಂಘದ ತಾಲೂಕು ಅಧ್ಯಕ್ಷ ಮಹಾದೇವ ಚಿಟಗೀರೆ, ರೋಹಿತ್ ಕಾಂಬಳೆ, ಧಮ್ಮದೀಪ ಗೋಕಲೆ ಸೇರಿದಂತೆ ಅನೇಕರಿದ್ದರು.