ಇಂದಿನ ಮಕ್ಕಳಲ್ಲಿದ್ದ ಜಾನಪದ ಕಲೆ ಗುರುತಿಸುವುದು ಅವಶ್ಯ
ಕಲಬುರಗಿ:ಜು.28:ಇತ್ತೀಚೆಗೆಜಾನಪದ ಕಲೆ ಸಾಹಿತ್ಯ ಬಹಳ ಮರೆಮಾಚುತ್ತಿದೆಅದನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿರವಿವರ್ಮ ಕಲಾ ಸಾಹಿತ್ಯಸಾಂಸ್ಕೃತಿಕ ಸೇವಾ ಸಂಸ್ಥೆ ವತಿಯಿಂದ ಹಮ್ಮಿಕೊಂಡ ಈ ಜಾನಪದ ಸಂಗೀತ ಸಂಭ್ರಮದಲ್ಲಿಇAತಹಕಾರ್ಯಕ್ರಮದಲ್ಲಿ ಭಾಗವಹಿಸಿ ವಿದ್ಯಾರ್ಥಿಗಳಲ್ಲಿರುವ ಬಹುಮುಖ್ಯ ಪ್ರತಿಭೆಗಳನ್ನು ಹೊರಹಾಕಿಇದರ ಸದುಪಯೋಗ ವಿದ್ಯಾರ್ಥಿಗಳು ಪಡೆದುಕೊಳ್ಳುವುದು ಅವಶ್ಯವಾಗಿದೆಎಂದುಡಾ. ಸುಜಾತ ಎಂ. ಪ್ರಾಚಾರ್ಯರು ಸ.ಪ.ಪೂ. ಕಾಲೇಜಿನ ಸಭಾಂಗಣದಲ್ಲಿರವಿವರ್ಮ ಕಲಾ ಸಾಹಿತ್ಯ ಸಂಭ್ರಮಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದಅಧ್ಯಕ್ಷತೆ ಸಿದ್ರಾಮ ರಾಜಮಾನೆಯವರುಜಾನಪದ ಸಂಸ್ಕೃತಿ ಹಾಗೂ ಕಲೆಗಳು ನಶಿಸದಂತೆ ಕಾಪಾಡುವುದು ನಮ್ಮೇಲ್ಲರಕರ್ತವ್ಯ ಹಾಗೂ ಜವಾಬ್ದಾರಿಯಾಗಿದೆ.ಮಕ್ಕಳಿಗೆ ಪಾಶ್ಚಾö್ಯತ್ಯ ಸಂಸ್ಕೃತಿಯ ಪ್ರೋತ್ಸಾಹ ನೀಡದಿರಲು ಸೂಚಿಸಿದರು.ನಡೆ-ನುಡಿ, ಆಚಾರ-ವಿಚಾರಗಳ ಮೂಲ ಸಂಸ್ಕೃತಿ, ಪದ್ದತಿಗಳು ಜಾನಪದವೇಆಗಿದೆಎಂದು ಹೇಳಿದರು.
ಶ್ರೀಮತಿ ದೇವಮ್ಮ ಎಂ.ಸಿAದಗಿ ಕಲಾ ತಂಡದಿAದ ಜಾನಪದಗಳು ಹಾಡಿದರು, ಸಿದ್ದಣ್ಣ ಗುಡ್ಡಾ ಬಬ್ರುವಾಹನ ನಾಟಕದಒಂದುತುಣುಕನ್ನು ಪ್ರದರ್ಶಿಸಿದರು.ಶ್ರೀ ನಾಗಭೂಷಣಅವರುತತ್ವಪದ ಹಾಡಿದರು.ಕಲಾವಿದ ಮುರಗೆಪ್ಪ ಹಾರ್ಮೋನಿಯಂ ಸಾತ್ ನೀಡಿದರು ಮತ್ತುಈರಮ್ಮ ಸಿ, ಕು. ಪೂಜಾ ಪಡಶೆಟ್ಟಿ, ಸುನೀತಾ, ಭಾಗ್ಯಶ್ರೀ, ಸಿದ್ದಮ್ಮ, ನಾಗರತ್ನ, ಗುರುಬಾಯಿ, ಮಹಾದೇವಿ, ಪ್ರೀಯದರ್ಶಿನಿ ಎಸ್.ಬಿ. ಪವಿತ್ರಾಕಲಾತಂಡದಿAದ ಭಕ್ತಿಗೀತೆ, ತತ್ವಪದ, ಜಾನಪದ, ಸಂಗೀತವನ್ನು ಹಾಡಿಎಲ್ಲರ ಗಮನ ಸೆಳೆದರು.
ಮುಖ್ಯ ಅತಿಥಿಗಳಾಗಿ ಶ್ರೀದೇವಿ ಹಿರೇಮಠ, ನಾಮದೇವ ಕಡಕೋಳ, ಎಚ್.ಎಸ್. ಬರಗಾಲಿಕುಸನೂರ, ಬಿ.ಕೋಳಕೂರ, ಧರ್ಮಣ್ಣಧನ್ನಿ ಉಪಸ್ಥಿತರಿದ್ದರು, ಸಂಸ್ಥೆ ಕಾರ್ಯದರ್ಶಿಗಳಾದ ಶಿವಶಂಕರ ಬಿ.ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.ಕೊನೆಯದಾಗಿಶ್ರೀಮತಿ ಸವಿತಾ ನಾಸಿ ಉಪನ್ಯಾಸಕರು ನಿರೂಪಿಸಿ ವಂದಿಸಿದರು.