ಬಿವಿಬಿ ಕಾಲೇಜಿನಲ್ಲಿ ಬಸವಕುಮಾರಗೆ ಸನ್ಮಾನ
ಬೀದರ್: ಜು.28:ನಗರದ ಗುಂಪಾ ರಸ್ತೆಯಲ್ಲಿರುವ ಪ್ರತಿಷ್ಟಿತ ಬಿ
ವಿ ಭೂಮರೆಡ್ಡಿ ಮಹಾವಿದ್ಯಾಲಯದ ಅವರಣದಲ್ಲಿ ಶನಿವಾರ ಪಿ.ಯು.ಸಿ ದ್ವಿತೀಯ ವರ್ಷದಲ್ಲಿ ಶೇಕಡಾ 97 ಪ್ರತಿಶತದಷ್ಟು ಅಂಕ ಗಳಿಸಿ ಸಾಧನೆಗೈದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಕುಮಾರ ಸ್ವಾಮಿ ಅವರ ಸುಪುತ್ರರಾದ ಕು.ಬಸವಕುಮಾರ ಸ್ವಾಮಿ ಅವರನ್ನು ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ಪಿ.ವಿಠಲರೆಡ್ಡಿ ಸನ್ಮಾನಿಸಿ ಗೌರವಿಸಿದರು. ಕಾಲೇಜಿನ ಉಪ ಪ್ರಾಚಾರ್ಯರಾದ ಪ್ರೊ.ಅನಿಲಕುಮಾರ ಅಣದುರೆ, ಪ್ರಾಧ್ಯಾಪಕರಾದ ಪ್ರೊ.ದೀಪಾ ರಾಗಾ, ಸುಜೀತ, ಬಸವರಾಜ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಕುಮಾರ ಸ್ವಾಮಿ, ಪ್ರಜಾ ಟಿವಿ ವರದಿಗಾರ ಸಂಜೀವಕುಮಾರ ಬುಕ್ಕಾ, ಯೋಗ ಶಿಕ್ಷಕರಾದ ಗುರುನಾಥ ಮೂಲಗೆ ಹಾಗೂ ಇತರರು ಈ ಸಂದರ್ಭದಲ್ಲಿ ಇದ್ದರು.