ಉತ್ತಮ ಆರೋಗ್ಯಕ್ಕೆ ಜೀವನ ಶೈಲಿ ಬದಲಾವಣೆ ಅವಶ್ಯ: ಡಾ.ಕಾಡಗೆ
ಔರಾದ್:ಜು,28: ಉತ್ತಮ ಆಹಾರ, ದೈನಂದಿನ ವ್ಯಾಯಾಮ ಮತ್ತು ಸಾಕಷ್ಟು ನಿದ್ರೆ ಇವು ಆರೋಗ್ಯಕರ ಜೀವನಕ್ಕೆ ಅಡಿಪಾಯವಾಗಿದೆ. ಆರೋಗ್ಯಕರ ಜೀವನ ಶೈಲಿ ನಿಮ್ಮನ್ನು ಸದಾ ಸದೃಢವಾಗಿ, ಶಕ್ತಿಯುತವಾಗಿ ಹಾಗೂ ಆರೋಗ್ಯವಾಗಿರಿಸುತ್ತದೆ, ಆದ್ದರಿಂದ ಉತ್ತಮ ಆರೋಗ್ಯಕ್ಕೆ ಜೀವನ ಶೈಲಿ ಬದಲಾವಣೆ ಅವಶ್ಯವಾಗಿದೆ ಎಂದು ಡಾ. ಕಿರಣ ಕಾಡಗೆ ಹೇಳಿದರು.
ಪಟ್ಟಣದ ಮಾತೋಶ್ರೀ ಆಸ್ಪತ್ರೆ ಹಾಗೂ ಸುದೀಕ್ಷಾ ಫೌಂಡೇಶನ್ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮಾತನಾಡಿದ ಅವರು ಜನರು ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ತೋರದೆ ತಜ್ಞ ವೈದ್ಯರು ಲಭ್ಯವಿದ್ದಾಗ ಅವರ ಸಲಹೆ ಪಡೆದುಕೆuಟಿಜeಜಿiಟಿeಜಳ್ಳಬೇಕು, ಉತ್ತಮ ಆರೋಗ್ಯಕ್ಕೆ ಜೀವನ ಶೈಲಿ ಬದಲಾವಣೆ ಬಹುಮುಖ್ಯ, ಮುಂಜಾನೆ ಬೇಗನೆ ಏಳುವುದು, ರಾತ್ರಿ ಬೇಗ ಮಲಗುವುದು, ಪೌಷ್ಠಿಕ ಆಹಾರ ಸೇವನೆ, ಮನೆ ಊಟ ಹೀಗೆ ಹತ್ತು ಹಲವು ನಮ್ಮ ಜೀವನ ಶೈಲಿಯಲ್ಲಿ ಬದಲಾವಣೆ ಅತ್ಯವಶ್ಯಕವಾಗಿದೆ ಎಂದರು.
ಡಾ,ನಾಗೇಶ ಕವಟಗೆ ಮಾತನಾಡಿ, ಕೀಲು ನೋವು
ಮೊಣಕಾಲು ನೋವು,ಸಂಧಿವಾತ, ಹಿಮ್ಮಡಿಯ ನೋವು ಹಾಗೂ ಎಲ್ಲಾ ಸಂಧಿ ನೋವುಗಳಿಗೆ ಇಂದು ಉಚಿತವಾಗಿ ತಪಾಸಣೆ ಮಾಡಲಾಗುತ್ತಿದೆ, ಅವಶ್ಯವಿರುವ ರೋಗಿಗಳಿಗೆ ಉಚಿತವಾಗಿ ಬ್ಲಡ್, ಯುರಿನ್ ಟೆಸ್ಟ್ ಹಾಗೂ ಮಾತ್ರೆಗಳು ಉಚಿತವಾಗಿ ನಿಡಲಾಗುವುದು ಎಂದರು. ಈ ಶಿಬಿರದಲ್ಲಿ ಪರಿಣಾಮಕಾರಿಯಾದ ಸಲಹೆ ಮತ್ತು ಆಯುರ್ವೇದ ಔಷಧಿಗಳನ್ನು ಸೂಚಿಸಲಾಗುವುದು. ದೀರ್ಘ ಕಾಲದಿಂದ ಸಂಧಿ ನೋವು ಹಾಗೂ ಕೀಲು ನೋವಿನಿಂದ ಬಳಲತ್ತಿದ್ದರೆ ಅಂತಹ ರೋಗಿಗಳು ಇದರ ಪ್ರಯೋಜನವನ್ನು ಪಡೆಯಬಹುದು ಎಂದು ಹೇಳಿದರು.
ಈ ಸಂದರ್ಭದಲ್ಲಿ 80ಕ್ಕೂ ಹೆಚ್ಚು ಉಚಿತ ಆರೋಗ್ಯ ತಪಾಸಣೆ, ರಕ್ತ ಪರೀಕ್ಷೆ, ಯುರಿನ್ ಪರೀಕ್ಷೆ ನಡೆಸಿ ಉಚಿತವಾಗಿ ಮಾತ್ರೆಗಳನ್ನು ನೀಡಲಾಯಿತು.
ಶಿಬಿರ ಉದ್ಘಾಟಸಿ ಪೊಲೀಸ್ ಇನ್ಸ್ಪೆಕ್ಟರ್ ವಸೀಮ್ ಪಟೇಲ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಸಂಪನ್ಮೂಲ ಶಿಕ್ಷಕ ನಾಗನಾಥ ಚಿಟ್ಮೆ, ಗಣಪತಿ ಕೆಇಬಿ, ಸಿದ್ರಾಮಪ್ಪ ನಿಡೋದೆ, ಅನೀಲ ರೆಡ್ಡಿ, ಸೇರಿದಂತೆ ಹಲವರು ಇದ್ದರು ಕಾಯಕಯೋಗಿ ಟ್ರಸ್ಟ್ ಕಾರ್ಯದರ್ಶಿ ಅನೀಲ ಜಿರೋಬೆ ಸ್ವಾಗತಿಸಿ ವಂದಿಸಿದರು.