ಶ್ರಮ ಪರಿಹಾರ ಅಂಗವಾಗಿ ಧ್ವಜಾರೋಹಣ
ಆಳಂದ: ಜು.28:ಪಟ್ಟಣದ ಶ್ರೀ ಏಕನಾಥ ಮಹಾರಾಜ್ ಹಾಗೂ ವಿಠ್ಠಲ್-ರುಕ್ಮಿಣಿ ಮಂದಿರದಲ್ಲಿ ಶ್ರಮ ಪರಿಹಾರ ಅಂಗವಾಗಿ ಧ್ವಜಾರೋಹಣ ಸಾಂಪ್ರದಾಯಿಕ ಕಾರ್ಯಕ್ರಮವನ್ನು ವಿದ್ಯುಕ್ತವಾಗಿ ಭಕ್ತಾದಿಗಳು ಶನಿವಾರ ನೆರವೇರಿಸಿದರು.
ಗೋಪಾಳಕಾಲ ಕಾರ್ಯಕ್ರಮದ ನಂತರ, ಆಚರಿಸುವ ಈ ಶ್ರಮಪರಿಹಾರ ಭಕ್ತಾದಿಗಳು ಪೂಜೆ ಮತ್ತು ಮಹಾಮಂಗಲದ ಮೂಲಕ ಪುಷ್ಪಾರ್ಚನೆ ಪ್ರಾರ್ಥನೆಯ ಮೂಲಕ ನೆರವೇರಿಸಿದರು.
ಬಳಿಕ ದೇವಸ್ಥಾನ ಪರ್ಯಟನೆ ಕೈಗೊಂಡು ಧ್ವಜರೋಹಣ ಕೈಗೊಂಡರು. ಈ ಧ್ವಜಾರೋಹಣ ಕಾರ್ಯಕ್ರಮದಲ್ಲಿ ದೇವಸ್ಥಾನ ಕಮಿಟಿ ಅಧ್ಯಕ್ಷ ಚೆನ್ನಬಸವರಾಜ ಕೆ. ಪಾಟೀಲ್, ವೀರೇಂದ್ರ ಎಸ್. ಪಾಟೀಲ್, ನ್ಯಾಯವಾದಿ ಬಾಬಾಸಾಹೇಬ್ ವಿ. ಪಾಟೀಲ್, ಮಹೇಶ್ ಸೂರೆ, ಜಯಪ್ರಕಾಶ್, ಲಾಡಪ್ಪ ಪಗಡೆಕುಲ, ನಾಗೇಶ್ ಪಗಡೆಕುಲ, ಗೋವಿಂದ ಮಿಸ್ಕಿನ್, ಹರಿ ಆಪ್ಟೆ ಮುಂತಾದ ಪ್ರಮುಖರು ಪಾಲ್ಗೊಂಡಿದ್ದರು. ಧಾರ್ಮಿಕ ಆಚರಣೆಗಳ ನಂತರ, ಭಕ್ತಾದಿಗಳಿಗೆ ಪ್ರಸಾದ ವಿತರಿಸಲಾಯಿತು.