ವಿದ್ಯಾರ್ಥಿಗಳು ದೇಶಭಕ್ತಿಯನ್ನು ಮೈಗೂಡಿಸಿಕೊಳ್ಳಬೇಕು
ಕೋಲಾರ,ಜು,೨೮- ವಿದ್ಯಾರ್ಥಿಗಳು ತಮ್ಮ ಸುತ್ತಲಿನ ಸಮಾಜ ಶಾಂತಿಯುತವಾಗಿ ಇರಬೇಕಾದರೆ ಎಲ್ಲರೂ ಸಹ ಕಾನೂನು ಅರಿಯಬೇಕು ಮತ್ತು ಅದನ್ನು ಪಾಲಿಸಬೇಕು ಮತ್ತು ದೇಶ ಪ್ರೇಮವನ್ನು ಇಂದಿನಿಂದಲೇ ಮೈಗೂಡಿಕೊಳ್ಳಬೇಕು ಎಂದು ನಿವೃತ್ತ ಯೋಧ ಗಣೇಶ್ ತಿಳಿಸಿದರು.
ಕೋಲಾರ ನಗರದ ಗಾಂಧಿವನದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ಜಿಲ್ಲಾ, ಸ್ಥಳೀಯ ಹಾಗೂ ರೋಟರಿ ಕೋಲಾರ ನಂದಿನಿ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಜರುಗಿದ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ಮಹಾತ್ಮಾ ಗಾಂಧೀ ರವರ ಪ್ರತಿಮೆ ಮಾಲಾರ್ಪಣೆ ಮಾಡಿ ಮಾತನಾಡುತ್ತಾ ಇಂದಿನ ಮಕ್ಕಳಿಗೆ ಕಾರ್ಗಿಲ್ ಯುದ್ದದ ಬಗ್ಗೆ ಮಾಹಿತಿ ಇರುವುದಿಲ್ಲಾ ತಾವು ಇಂಟರ್‌ನೆಟ್ ನಲ್ಲಿ ಮಾಹಿತಿಯನ್ನು ಪಡೆದು ಯೋಧರ ಸೇವಾ ಮನೋಭಾವ , ದೇಶಸೇವೆ ಅರಿಯಬೇಕು. ಕಾರ್ಗಿಲ್ ಯುದ್ಧದಲ್ಲಿ ಹೋರಾಡಿದ ಸೈನಿಕರ ಗೌರವಾರ್ಥವಾಗಿ ಪ್ರತಿವರ್ಷ ಜುಲೈ ೨೬ ರಂದು ಕಾರ್ಗಿಲ್ ವಿಜಯ್ ದಿವಸ್ ಅನ್ನು ೧೯೯೯ ರಿಂದ ಆಚರಣೆ ಮಾಡುತ್ತಾ ಬಂದಿದ್ದೇವೆ, ತಾವು ತಮ್ಮ ಅಮೂಲ್ಯ ಸಮಯವನ್ನು ದೇಶಕ್ಕಾಗಿ ಹೋರಾಡಿದ ಮಹನೀಯರ ಜೀವನ ಚರಿತ್ರೆಗಳನ್ನು ಓದಿ ತಿಳಿದು ದೇಶದ ಶಕ್ತಿಯನ್ನು ತಮ್ಮ ಗೆಳೆಯರ ಬಳಿ ಹಂಚಿಕೊಳ್ಳಬೇಕು ಎಂದು ತಿಳಿಸಿದರು.
ಜಿಲ್ಲಾ ಮುಖ್ಯ ಆಯುಕ್ತರಾದ ಕೆ.ವಿ.ಶಂಕರಪ್ಪ ರವರು ಮಾತನಾಡಿ ಕಾರ್ಗಿಲ್ ಯುದ್ದ ಭಾರತದ ಎರಡನೇ ಸ್ವಾತಂತ್ರ ಎಂದು ಹೇಳಿದರು ತಪ್ಪಾಗಲಾರದು, ಕಾರ್ಗಿಲ್ ಪ್ರದೇಶದಿಂದ ನಮ್ಮ ವಿರೋಧಿ ದೇಶದ ಸೈನ್ಯ ನಮ್ಮ ದೇಶಕ್ಕೆ ನುಗ್ಗಿದಾಗ ನಮ್ಮ ದೇಶದ ಹೆಮ್ಮಯ ಸೈನಿಕರು ತಮ್ಮ ಪ್ರಾಣತ್ಯಾಗ ಮಾಡಿ ನಮ್ಮ ದೇಶದ ಜನರನ್ನು ರಕ್ಷಿಸಿ ತಮ್ಮ ಪ್ರಾಣವನ್ನು ತ್ಯಾಗಮಾಡಿ ದೇಶಕ್ಕೆ ಜಯವನ್ನು ತಂದು ಕೊಟ್ಟದಿನವನ್ನು ವಿಜಯ್ ದಿವಸ್ ಆಚರಣೆ ಮಾಡುತ್ತಾ, ಪ್ರಾಣ ತ್ಯಾಗ ಮಾಡಿದೆ ವೀರ ಯೋಧರಿಗೆ ಗೌರವವನ್ನು ಸಮರ್ಪಣೆ ಮಾಡುವಂತಹ ಮಾಹಾನ್ ದಿನ, ನಾವು ನೀವು ಸೇರಿ ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ದೇಶಭಕ್ತಿಯನ್ನು ಇತರರಲ್ಲೂ ಹರಡಿಸಬಹುದು ಎಂದು ತಿಳಿಸಿದರು.
ಜಿಲ್ಲಾ ಗೈಡ್ಸ್ ಆಯುಕ್ತರಾದ ನವೀನಾ ರವರು ಮಾತನಾಡಿ ಸ್ಕೌಟ್ಸ್ ಗೈಡ್ಸ್ ಗಳು ಕಾರ್ಗಿಲ್ ಯುದ್ಧದ ಸಂಗತಿಗಳಲ್ಲಿ ತಮ್ಮ ಗ್ರಾಮ/ನಗರಗಳಲ್ಲಿ ಇರುವ ಯೋಧರನ್ನು ಸಂಪರ್ಕಿಸಿ ಮಾಹಿತಿಯನ್ನು ತಿಳಿಯಬೇಕು. ಹಾಗೂ ಅವರ ಜೀವನ ಶೈಲಿಯನ್ನು ತಾವು ಅಳವಡಿಸಿಕೊಳ್ಳುವ ಮೂಲಕ ತಾವು ದೇಶದ ಆಸ್ತಿಯಾಗಬೇಕು ಎಂದು ತಿಳಿಸಿದರು.
ಪಧಾಧಿಕಾರಿಗಳಾದ ಸುರೇಶ್, ಬೇವಹಳ್ಳಿ ಶಂಕರ್, ಸ್ಕೌಟ್ಸ್ ಬಾಬು, ಚೇತನ್, ವೆಂಕಟರಗಂ, ರಮೇಶ್ ನಾಯಕ್, ಸಂಪತ್ ಕುಮಾರ್, ರವಿಕುಮಾರ್, ಸಾಹಿರಾ ಬಾನು, ಸೌಂದರ್ಯ ಮುಂತಾದವರು ಉಪಸ್ಥಿತರಿದ್ದರು.