ಸ್ವಾವಲಂಬಿ ಜೀವನ ನಡೆಸಲು ಮಹಿಳೆ ಆರ್ಥಿಕವಾಗಿ ಬೆಳೆಯ ಬೇಕು: ಮಾಲತಿ ರೇಷ್ಮಿ
ಕಲಬುರಗಿ:ಜು.28:ಇಂದಿನ ಆಧುನಿಕ ಜೀವನ ಶೈಲಿಯಲ್ಲಿ ಮಹಿಳೆ ಆರ್ಥಿಕವಾಗಿ ಬೆಳೆದಾಗ ಮಾತ್ರ ಸ್ವಾವಲಂಬಿ ಜೀವನ ಸಾಧಿಸಲು ಸಾಧ್ಯ ಮಹಿಳೆಯರು ತಮ್ಮಗಿರುವ ಕಾನೂನು ಅವಕಾಶಗಳು ಹಾಗೂ ಸರ್ಕಾರ ಯೋಜನೆಗಳ ಬಗ್ಗೆ ಮಾಹಿತಿ ಪಡೆದು ಉತ್ತಮ ಜೀವನ ನಡೆಸಬೇಕು ಎಂದು ಗ್ರಾಹಕರ ಆಯೋಗದ ಅಧ್ಯಕ್ಷರಾದ ಶ್ರೀಮತಿ ಮಾಲತಿ ರೇಷ್ಮಿಯವರು ತಿಳಿಸಿದರು.
ನಗರದ ಜಿಡಿಎ ಲೇಔಟನಲ್ಲಿರುವ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿ., ಕಲಬುರಗಿ ಇದರ ಪ್ರಾಂತೀಯ ಕಛೇರಿಯಲ್ಲಿ ಆಯೋಜಿಸಿದ ಕಲಬುರಗಿ ಮತ್ತು ಯಾದಗಿರ ಜಿಲ್ಲೆಯ ಮಹಿಳಾ ಸೌಹಾರ್ದ ಸಹಕಾರಿಗಳ ಅಧ್ಯಕ್ಷರ/ಉಪಾಧ್ಯಕ್ಷರ ಹಾಗೂ ನಿರ್ದೇಶಕರ ಒಂದು ದಿನದ ವಿಶೇಷ ತರಬೇತಿಯ ಉದ್ಘಾಟನೆಯನ್ನು ನೆರವೆರಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಕೃಷಿ ಇಲಾಖೆಯ ಉಪನಿರ್ದೇಶಕರಾದ ಶ್ರೀಮತಿ ಅನುಸುಯಾ ಎಮ್ ಹೂಗಾರ ಇವರು ಕೃಷಿ ಇಲಾಖೆಯಲ್ಲಿ ಮಹಿಳೆಯರಿಗಾಗಿ ಇರುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು. ಯಶಸ್ವಿ ಮಾರ್ಗದರ್ಶಿ ಕೇಂದ್ರದ ನಿರ್ದೇಶಕರಾದ ಡಾ. ಜಯಶ್ರೀ ಎಸ್ ರೆಡ್ಡಿ ಇವರು ಮಾತನಾಡಿ ಮಹಿಳೆ ಇಂದು ಮಾನಸಿಕ ಒತ್ತಡದಲ್ಲಿ ಜೀವನ ಸಾಗಿಸುತ್ತಿದ್ದಾಳೆ ಪ್ರತಿಯೋಬ್ಬರು ಧ್ಯಾನ ಮತ್ತು ಯೋಗದ ಮೂಲಕ ತಮ್ಮ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಸಲಹೆ ನೀಡಿದರು. ಜಿಲ್ಲಾ ಸ್ತ್ರಿ ಶಕ್ತಿ ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ಮಲ್ಲಮ್ಮ ಕಾಡ್ಲಾ ಇವರು ಮಹಿಳೆಯರಿಗಾಗಿ ಇರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಯೋಜನೆಗಳ ಕುರಿತು ಮಾಹಿತಿ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ ಸಂಯುಕ್ತ ಸಹಕಾರಿಯ ನಿರ್ದೇಶಕರಾದ ಶ್ರೀಮತಿ ಶೈಲಜಾ ತಪಲಿ ಮಾತನಾಡಿ ಮಹಿಳೆರು ಎಲ್ಲಾರೀತಿಯ ತರಬೇತಿಯಲ್ಲಿ ಭಾಗವಹಿಸಬೇಕು ತಮ್ಮ ಗೆ ಹಾಗೂ ತಮ್ಮ ಸಹಕಾರಿಗೆ ಅಗತ್ಯ ಇರುವ ತರಬೇತಿಯನ್ನು ನೂರಿತ ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿ ನೀಡಲಾಗುವುದು ಇದರ ಸದುಪಯೋಗ ಪಡೆದುಕೊಳ್ಳಲು ತಿಳಿಸಿದರು.
ಪ್ರಾಂತೀಯ ವ್ಯವಸ್ಥಾಪಕರಾದ ಸೂರ್ಯಕಾಂತ ರಾಕಲೇ ಪ್ರಸ್ತಾವಿಕ ನುಡಿಗಳನ್ನು ಆಡಿದರು. ಶ್ರೀಮತಿ ಸೂಲೋಚನಾ ಮಠಪತಿ ಪ್ರಾರ್ಥನೆ ಮಾಡಿದರು, ಶ್ರೀದೇವಿ ಇವರು ಸ್ವಾಗತಿಸಿದರು. ವೀರಶಟ್ಟಿ ನಿರೂಪಿಸಿದರು, ಪವನ ವಂದಿಸಿದರು. ಸಭೆಯಲ್ಲಿ ಸಿಬ್ಬಂದಿಗಳಾದ ಆನಂದ ರಾಯ, ಅಂಬುಲಾಲ, ಮಾಳಪ್ಪಾ,ರಾಜುಕುಮಾರ, ಹಾಗೂ 100 ಹೆಚ್ಚು ಕಲಬುರಗಿ ಮತ್ತು ಯಾದಗಿರ ಜಿಲ್ಲೆಯ ಸೌಹಾರ್ದ ಸಹಕಾರಿಗಳ ಮಹಿಳಾ ಅಧ್ಯಕ್ಷರು/ಉಪಾಧ್ಯಕ್ಷರು ಹಾಗೂ ನಿರ್ದೇಶಕರು ಭಾಗವಹಿಸಿದರು.