ವರ್ಧಂತ್ಯೋತ್ಸವದಂಗವಾಗಿ ಬಾಗಿನ
ಸಂಜೆವಾಣಿ ನ್ಯೂಸ್
ಮೈಸೂರು: ಜು.೨೮:- ನಗರದ ಶ್ರೀ ದುರ್ಗಾ ಫೌಂಡೇಶನ್ ವತಿಯಿಂದ ಶ್ರೀ ಚಾಮುಂಡೇಶ್ವರಿ ದೇವಿಯ ವರ್ಧಂತಿ ಮಹೋತ್ಸವದ ಅಂಗವಾಗಿ ಚಾಮುಂಡಿ ಬೆಟ್ಟದ ಪಾದದಲ್ಲಿ ಚಾಮುಂಡೇಶ್ವರಿ ದರ್ಶನಕ್ಕೆ ಆಗಮಿಸಿದ ಮುತ್ತೈದೆಯರಿಗೆ ಅರಿಶಿಣ,ಕುಂಕುಮ ,ಬಳೆಗಳೊಂದಿಗೆ ಬಾಗಿನ ನೀಡಲಾಯಿತು.
ನಂತರ ಮಾತನಾಡಿದ ಶ್ರೀ ದುರ್ಗಾ ಫೌಂಡೇಶನ್ ಅಧ್ಯಕ್ಷೆ ರೇಖಾ ಶ್ರೀನಿವಾಸ್ ಆಷಾಢ ಮಾಸದಲ್ಲಿ ನಾಡ ಅಧಿದೇವತೆ ಚಾಮುಂಡಿ ಬೆಟ್ಟದಲ್ಲಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ನಡೆಸಲಾಗುತ್ತದೆ. ಈ ಹಿನ್ನಲೆಯಲ್ಲಿ ಸಾವಿರಾರೂ ಭಕ್ತಾಧಿಗಳು ತಾಯಿಗೆ ಹರಕೆ ತಿರಿಸಲು ಬೆಟ್ಟದ ಪಾದದಿಂದ ಬೆಟ್ಟದ ಮೇಲೆ ವರೆಗೂ ಅರಿಶಿನ ಕುಂಕುಮ ಹಚ್ಚುತ್ತಾರೆ. ಅಂತಹ ಮಹಿಳಾ ಭಕ್ತಾದಿಗಳಿಗೆ ಅರಿಶಿನ ಕುಂಕುಮ ಹಾಗೂ ಬಳೆಗಳನ್ನು ನೀಡಿ ಅವರಿಗೆ ತಾಯಿ ಚಾಮುಂಡೇಶ್ವರಿ ಒಳಿತನ್ನು ನೀಡಲಿ ಎಂದು ಹಾರೈಸುತ್ತಿದ್ದೇವೆ ಎಂದರು.
ಇದೇ ಸಂದರ್ಭದಲ್ಲಿ ಶ್ರೀ ದುರ್ಗಾ ಫೌಂಡೇಶನ್‌ನ ಲತಾ ಮೋಹನ್, ಸಮಾಜ ಸೇವಕರಾದ ಶಾಂತ,ಅಂಬಾಭವಾನಿ ಸಮಾಜ ಮಹಿಳಾ ಅಧ್ಯಕ್ಷರಾದ ಸವಿತಾ ಘಾಟ್ಕೆ, ಸುಮಿತ್, ಶೃತಿ, ಮಣಿಕಂಠ, ಶ್ರೀನಿವಾಸ್, ಮಂಜುಳ, ಸುವರ್ಣ, ಹಾಗೂ ಇನ್ನಿತರ ಮಹಿಳೆಯರು ಹಾಜರಿದ್ದರು.