ಮಲೆ ಮಹದೇಶ್ವರ ಬೆಟ್ಟಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್ ಭೇಟಿ-ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಜು.೨೮:- ಪಶು ಸಂಗೋಪನೆ, ರೇಷ್ಮೆ ಸಚಿವರು ಹಾಗೂ ಜಿಲ್ಲಾಉಸ್ತುವಾರಿ ಸಚಿವ ಕೆ. ವೆಂಕಟೇಶ್‌ಅವರುಇಂದುಮಲೆ ಮಹದೇಶ್ವರ ಬೆಟ್ಟಕ್ಕೆಭೇಟಿ ನೀಡಿಪ್ರಾಧಿಕಾರದ ವತಿಯಿಂದನಡೆಯಲಿರುವಉಚಿತ ಸಾಮೂಹಿಕ ವಿವಾಹ ಸಿದ್ದತೆ ಹಾಗೂ ಬೆಟ್ಟದಲ್ಲಿಕೈಗೊಂಡಿರುವಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ನಡೆಸಿದರು.
ದೀಪದಒಡ್ಡುವಿನಲ್ಲಿಇರುವ ಮಲೆ ಮಹದೇಶ್ವರರ ಪ್ರತಿಮೆ ಕೆಳಭಾಗದಲ್ಲಿ ನಿರ್ಮಿಸಲಾಗುತ್ತಿರುವ ಮಲೆ ಮಹದೇಶ್ವರರಪವಾಡ, ಕಥಾ ಸಂಗತಿಗಳನ್ನು ವಿವರಿಸುವಚಿತ್ರ ನಿರ್ಮಾಣಕಾಮಗಾರಿಯನ್ನು ಸಚಿವರು ವೀಕ್ಷಿಸಿದರು.ತ್ವರಿತವಾಗಿಕಾಮಗಾರಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಪ್ರತಿಮೆ ಸ್ಥಳಕ್ಕೆ ತೆರಳುವ ರಸ್ತೆಕಾಮಗಾರಿಯನ್ನು ಸಹ ಶೀಘ್ರ ಪೂರ್ಣಗೊಳಿಸಲು ನಿರ್ದೇಶನ ನೀಡಿದರು.
ಭಕ್ತಾಧಿಗಳು ತಂಗಲು ನಿಮಾಣ ಮಾಡಲಾಗುತ್ತಿರುವ ೫೧೨ ವಸತಿ ಗೃಹಗಳ ಕಾಮಗಾರಿ ಪರಿಶೀಲಿಸಿದ ಜಿಲ್ಲಾಉಸ್ತುವಾರಿ ಸಚಿವರುಅಗತ್ಯ ಸೂಚನೆಗಳನ್ನು ನೀಡಿದರು. ತ್ವರಿತವಾಗಿ ಕೆಲಸ ಮುಗಿಸುವಂತೆ ತಿಳಿಸಿದರು. ನಿರ್ಮಾಣ ಹಂತದಲ್ಲಿರುವಕ್ಯೂಲೈನ್‌ಕಾಮಗಾರಿ ವೀಕ್ಷಿಸಿ ಸೂಕ್ತ ನಿರ್ದೇಶನ ನೀಡಿದರು. ಸೋಲಾರ್ ಪ್ಲಾಂಟ್, ಒಳಚರಂಡಿ ಕೆಲಸಗಳನ್ನು ಪರಿಶೀಲಿಸಿದರು.
ಬಳಿಕ ನಾಗಮಲೆ ಭವನದಲ್ಲಿ ಸಭೆ ನಡೆಸಿದ ಜಿಲ್ಲಾಉಸ್ತುವಾರಿ ಸಚಿವರುಪ್ರಾಧಿಕಾರದ ವತಿಯಿಂದ ಭಕ್ತಾಧಿಗಳಿಗೆ ಕೈಗೊಳ್ಳಲಾಗಿರುವ ಕಾಮಗಾರಿ ನಿರ್ವಹಣೆಗೆ ವಿಳಂಬ ಮಾಡಬಾರದು. ಕಾಲಮಿತಿಯೊಳಗೆ ಎಲ್ಲಾ ಕೆಲಸಗಳು ಪೂರೈಸಬೇಕು. ಭಕ್ತಾಧಿಗಳಿಗೆ ಸಮರ್ಪಕವಾಗಿ ಮೂಲಸೌಕರ್ಯತಲುಪಿಸಬೇಕೆಂದು ತಿಳಿಸಿದರು.
ಆಗಸ್ಟ್ ೨೧ರಂದು ಪ್ರಾಧಿಕಾರದ ವತಿಯಿಂದ ನಡೆಸಲಾಗುತ್ತಿರುವಉಚಿತ ಸಾಮೂಹಿಕ ವಿವಾಹಕ್ಕೆ ನೊಂದಣಿಯಾಗಿರುವ ಬಗ್ಗೆ ವಿವರ ಪಡೆದಜಿಲ್ಲಾಉಸ್ತುವಾರಿ ಸಚಿವರುಅಚ್ಚುಕಟ್ಟಾಗಿ ಸಾಮೂಹಿಕ ವಿವಾಹ ಮಹೋತ್ಸವ ನೆರವೇರಬೇಕು. ಇದಕ್ಕಾಗಿಎಲ್ಲಾಅಗತ್ಯ ಸಿದ್ದತೆಗಳನ್ನು ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಸಾಲೂರು ಮಠದ ಶ್ರೀಗಳಾದ ಶ್ರೀ ಶಾಂತ ಮಲ್ಲಿಕಾರ್ಜುನಸ್ವಾಮಿ, ಶಾಸಕರಾದಎಂ.ಆರ್. ಮಂಜುನಾಥ್, ಎ.ಆರ್. ಕೃಷ್ಣಮೂರ್ತಿ, ಜಿಲ್ಲಾಧಿಕಾರಿ ಶಿಲ್ಪಾ ನಾಗ್, ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕಅಧಿಕಾರಿ ಮೋನಾ ರೋತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಡಾ. ಬಿ.ಟಿ.ಕವಿತ, ಶ್ರೀ ಮಲೆ ಮಹದೇಶ್ವರ ಸ್ವಾಮಿಕ್ಷೇತ್ರಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎ.ಇ. ರಘು, ಉಪ ಕಾರ್ಯದರ್ಶಿ ಚಂದ್ರಶೇಖರ್, ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.