ಶಿಕ್ಷಣದ ವೃದ್ಧಿಗೆ ಸಂಘ ಸಂಸ್ಥೆಗಳ ನೆರವು ಅಗತ್ಯ
ಚನ್ನಪಟ್ಟಣ.ಜು.೨೮- ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಶಿಕ್ಷಣದ ಗುಣಮಟ್ಟವನ್ನು ವೃದ್ಧಿಸಲು, ಹಲವಾರು ರೀತಿಯಲ್ಲಿ ಸಹಕಾರ ನೀಡುವ ಸಂಘ ಸಂಸ್ಥೆಗಳ ಉಪಯೋಗವನ್ನು ಸದುಪಯೋಗಪಡಿಸಿಕೊಳ್ಳ ಬೇಕೆಂದು ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಜಯಶಂಕರ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ಆಯೋಜೆನೆ ಮಾಡಲಾಗಿದ್ದ, ಆದಿತ್ಯ ಬಿರ್ಲಾ ಕಂಪನಿಯ ಆಶ್ರಯದಲ್ಲಿ ಕಳೆದ ಸಾಲಿನಲ್ಲಿ ಎಸ್.ಎಸ್.ಎಲ್.ಸಿ. ಹಾಗೂ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿಯರಿಗೆ ಪ್ರೋತ್ಸಾಹ ಧನ ಹಾಗೂ ಅಧ್ಯಾಯನ ಸಮಾಗ್ರಿಗಳ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಸಕಳೆದ ೧೦ ವರ್ಷಗಳಿಂದ ಆದಿತ್ಯ ಬಿರ್ಲಾಕಂಪನಿಯು ವಿದ್ಯಾರ್ಥಿನಿಯರ ಭವಿಷ್ಯಕ್ಕೆ ಅಗತ್ಯವಾಗುವ ಎಲ್ಲಾರೀತಿಯ ಸಹಾಯ ಸಹಕಾರಗಳನ್ನು ಮಾಡಿಕೊಂಡು ಬರುತ್ತಿರುವುದು ಆರೋಗ್ಯಕರ ಬೆಳವಣಿಗೆಯಾಗಿದೆ,
ಅದರಲ್ಲೂ ಪ್ರತಿ ವರ್ಷವು ಎಸ್.ಎಸ್.ಎಲ್.ಸಿ.ಯಲ್ಲಿ ಹೆಚ್ಚು ಅಂಕಪಡೆದ ವಿದ್ಯಾರ್ಥಿನಿಯರಿಗೆ ಪ್ರೋತ್ಸಾಹಧನದ ಜೊತೆ ಪ್ರತಿಭಾ ಪುರಸ್ಕಾರ, ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿನಿಯರಿಗೂ ಪ್ರೋತ್ಸಾಹ ಘನ ಹಾಗೂ ಪ್ರತಿಭಾ ಪುರಸ್ಕಾರದ ಜೊತೆಯಲ್ಲಿಯೇ ಅದ್ಯಾಯನ ಸಾಮಾಗ್ರಿಗಳ ವಿತರಣೆ ಮಾಡುತ್ತಿರುವುದು ಪ್ರಶಂಸನೀಯ ವಿಚಾರವಾಗಿದೆ. ಆದಿತ್ಯ ಬಿರ್ಲಾ ಕಂಪನಿ ನೀಡುತ್ತಿರುವ ಸಂಪೂರ್ಣ ಸಹಕಾರವನ್ನು ಪಡೆದುಕೊಂಡು, ವಿದ್ಯಾಭ್ಯಾಸದಲ್ಲಿ ಸಾಧನೆ ಮೆರೆದು, ಆದಿತ್ಯ ಬಿರ್ಲಾ ಕಂಪನಿ, ವಿದ್ಯಾಭ್ಯಾಸ ಮಾಡಿದಕಾಲೇಜು ಹಾಗೂ ತಮ್ಮನ್ನು ಹೆತ್ತ ತಂದೆ ತಾಯಿಗೆ ಗೌರವ ತರುವಂತೆ ಶ್ರಮ ವಹಿಸಬೇಕೆಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ, ಉಪ ಪ್ರಿನ್ಸಿಪಾಲ್ ವೀರಭದ್ರಯ್ಯ, ರಾಜ್ಯದಲ್ಲಿ ದೊಡ್ಡದೊಡ್ಡ ಕಂಪನಿಗಳು ಇದ್ದು, ಸಮಾಜದ ಸೇವಾ ತುಡಿತದಲ್ಲಿ ಪಾಲ್ಗೊಳ್ಳುವುದು ವಿರಳವಾಗಿದೆ ಆದರೆಆದಿತ್ಯ ಬಿರ್ಲಾ ಕಂಪನಿ ವಿದ್ಯಾಬ್ಯಾಸಕ್ಕೆ ಪ್ರೋತ್ಸಾಹ ನೀಡುತ್ತಿರುವುದು ಸಾಮಾನ್ಯದ ವಿಚಾರವಲ್ಲಎಂದು ಸಂತಷ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಪ್ರೊಫೆಸರ್ ಎಂ.ಜಿ.ಮುರುಳಿಧರ್, ಆದಿತ್ಯ ಬಿರ್ಲಾಕಂಪನಿಯ ಕೆ.ಎನ್.ಪುರುಷೋತ್ತಮ್‌ರಾವ್, ಅರುಣ್‌ಕುಮಾರ್, ಹಿರಿಯ ಶಿಕ್ಷಕ ಸೋಮಶೇಖರ್, ಕಂಪನಿಯ ಸಂಯೋಜಕರಾದ ಕಾವ್ಯಶ್ರೀ ಹಾಗೂ ಶಾಲೆಯ ಶಿಕ್ಷಕ ವರ್ಗ ಹಾಜರಿದ್ದರು.