ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ ಆರೋಗ್ಯ ಸಚಿವರಿಂದ ಭರವಸೆ
ಮಾಲೂರು ಜು೨೮: ಪಟ್ಟಣದಲ್ಲಿ ಸುಸಜ್ಜಿತ ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕಾಗಿ ೨೦ ಕೋಟಿ ರೂಗಳು ವಸತಿಗೃಹ ನಿರ್ಮಾಣಕ್ಕೆ ನಾಲ್ಕುವರೆ ಕೋಟಿ ರೂಗಳು ಅಗತ್ಯವಿರುವ ಬಗ್ಗೆ ಸದನದಲ್ಲಿ ಆರೋಗ್ಯ ಸಚಿವರು ಉತ್ತರದ ಮೂಲಕ ತಿಳಿಸಿದ್ದಾರೆ.ಸುಸಜ್ಜಿತ ಆಸ್ಪತ್ರೆಯ ಕಟ್ಟಡ ನಿರ್ಮಿಸಲಾಗುವುದು ಎಂದು ಶಾಸಕ ಕೆ.ವೈ.ನಂಜೇಗೌಡ ಹೇಳಿದರು.
ಅವರು ಸುದ್ದಿಗಾರರೊಂದಿಗೆ ಮಾತನಾಡಿ ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರತಿನಿತ್ಯ ನೂರಾರು ಮಂದಿ ರೋಗಿಗಳು ಚಿಕಿತ್ಸೆ ಗಾಗಿ ಆಗಮಿಸುತ್ತಾರೆ ಆಸ್ಪತ್ರೆಯ ಕಟ್ಟಡವು ಶಿಥಿಲವಾಗಿದ್ದು, ಹಾಗೂ ಕಿರಿದಾಗಿರುವುದರಿಂದ ವೈದ್ಯರು ಸೂಕ್ತ ಚಿಕಿತ್ಸೆ ನೀಡಲು ಆಗುತ್ತಿಲ್ಲ ೧೯೫೨ ರಲ್ಲಿ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಪ್ರಾರಂಭವಾಗಿ ಹಂತ ಹಂತವಾಗಿ ಸರ್ಕಾರ ಮೇಲ್ದರ್ಜೆಗೆ ಏರಿಸಿದೆ. ಆದರೆ ಕಟ್ಟಡ ಶಿಥಿಲವಾಗಿದ್ದು ಹಳೆ ಕಟ್ಟಡವಾಗಿದೆ. ತಾಲೂಕಿನಲ್ಲಿ ಕೈಗಾರಿಕಾ ಪ್ರಾಂಗಣಗಳು ಇರುವುದರಿಂದ ಹೊರ ರಾಜ್ಯಗಳಿಂದ ಹೆಚ್ಚಿನ ಜನರು ಆಗಮಿಸುತ್ತಾರೆ. ಜಿಲ್ಲೆಯಲ್ಲಿಯೇ ಅತ್ಯಂತ ಹೆಚ್ಚು ಹೊರರೋಗಿಗಳು ಚಿಕಿತ್ಸೆಗಾಗಿ ಆಗಮಿಸುವ ಆಸ್ಪತ್ರೆ ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಾಗಿದೆ.
ಪಟ್ಟಣದಲ್ಲಿ ಸುಸಜಿತ ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕಾಗಿ ೨೦ ಕೋಟಿ ರೂಗಳು ವಸತಿಗೃಹ ನಿರ್ಮಾಣಕ್ಕೆ ನಾಲ್ಕುವರೆ ಕೋಟಿ ರೂಗಳು ಅಗತ್ಯವಿರುವ ಬಗ್ಗೆ ಸದನದಲ್ಲಿ ಆರೋಗ್ಯ ಸಚಿವರು ಉತ್ತರದ ಮೂಲಕ ತಿಳಿಸಿದ್ದಾರೆ ಪ್ರತ್ಯೇಕವಾಗಿ ಸಹ ಸಚಿವರನ್ನು ಭೇಟಿ ಮಾಡಿ ಚರ್ಚಿಸಲಾಗಿದೆ ಆಸ್ಪತ್ರೆ ಕಟ್ಟಡಕ್ಕೆ ಅಗತ್ಯವಿರುವ ಅನುದಾನವನ್ನು ನೀಡಲಾಗುವುದು ಎಂದು ತಿಳಿಸಿದ್ದಾರೆ ಎಂದರು
ಈ ಸಂದರ್ಭದಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ರಮೇಶ್ ಬಾಬು, ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ವಸಂತ್, ವೈದ್ಯರುಗಳಾದ ಡಾ ಶ್ರೀನಿವಾಸ್, ಡಾ. ಚನ್ನಕೇಶವ, ಪುರಸಭೆಯ ಸದಸ್ಯರಾದ ಎ ರಾಜಪ್ಪ, ಮುರಳಿಧರ್, ಜಾಕಿರ್ ಖಾನ್, ಇನ್ನಿತರರು ಹಾಜರಿದ್ದರು.
ವಿಶೇಷ ಅನುದಾನ ಬಿಡುಗಡೆ
ಪಟ್ಟಣದ ಅಭಿವೃದ್ಧಿಗಾಗಿ ಹಿಂದುಳಿದ ವಾರ್ಡುಗಳ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ರಾಜ್ಯ ಸರ್ಕಾರ ವಿಶೇಷ ಅನುದಾನ ನೀಡಲು ಮುಂದಾಗಿದ್ದು, ವಾರ್ಡ್‌ವಾರು ಅಗತ್ಯವಿರುವ ಅಭಿವೃದ್ಧಿ ಕೆಲಸಗಳ ಪಟ್ಟಿಯನ್ನು ಸದಸ್ಯರಿಂದ ಪಡೆದು ಕ್ರಿಯಾಯೋಜನೆ ಸಿದ್ಧಪಡಿಸಿ ಮುಖ್ಯಮಂತ್ರಿಗಳಿಗೆ ಸಲ್ಲಿಸಿದರೆ ವಿಶೇಷ ಅನುದಾನ ಬಿಡುಗಡೆಯಾಗಲಿದೆ ಎಂದರು. ಯರಗೊಳು ನೀರು ಈಗಾಗಲೇ ಪಟ್ಟಣಕ್ಕೆ ಸರಬರಾಜು ಆಗುತ್ತಿದ್ದು ಹಂತವಾಗಿ ಪಟ್ಟಣದ ಎಲ್ಲಾ ವಾರ್ಡ್‌ಗಳಿಗೆ ನೀರು ಸರಬರಾಜು ಮಾಡಲಾಗುವುದು, ಪುರಸಭಾ ಆಸ್ತಿಯನ್ನು ಇಂದಿನ ಆಡಳಿತಗಳು ಕಾಪಾಡುವ ಕೆಲಸ ಮಾಡಿಲ್ಲ, ಪುರಸಭೆ ಆಸ್ತಿ ಸಿಎ ನಿವೇಶನಗಳನ್ನು ಕೆಲವರು ಖಾತೆ ಮಾಡಿಕೊಂಡು ಮನೆಗಳು ನಿರ್ಮಿಸಿಕೊಂಡಿದ್ದಾರೆ, ಅಂತಹ ೩೦೮ ನಿವೇಶನಗಳನ್ನು ಅಧಿಕಾರಿಗಳು ಪಟ್ಟಿ ಮಾಡಿದ್ದು ಯಾವುದೇ ಪ್ರತಿಷ್ಠಿತ ವ್ಯಕ್ತಿಯಾಗಿರಲಿ ಬಿಡುವುದಿಲ್ಲ, ಸರ್ಕಾರಿ ಸರ್ವೇ ನಂಬರ್ ಅಕ್ರಮವಾಗಿ ಪುರಸಭೆಯಲ್ಲಿ ಖಾತೆ ಮಾಡಿಕೊಂಡಿದ್ದಾರೆ ಈಗಾಗಲೇ ಅಧಿಕಾರಿಗಳು ಅಕ್ರಮವಾಗಿ ಖಾತೆ ಮಾಡಿಕೊಂಡಿರುವ ನಿವೇಶನಗಳ ಪಟ್ಟಿ ಮಾಡುತ್ತಿದ್ದಾರೆ ತೆರವುಗೊಳಿಸಿ ಪುರಸಭೆ ವಶಕ್ಕೆ ಪಡೆಯಲು ಆಂದೋಲನ ರೀತಿಯಲ್ಲಿ ಅಧಿಕಾರಿಗಳು ಕೆಲಸ ಮಾಡಲಿದ್ದಾರೆ ಎಂದರು.