ತಂದೆ, ತಾಯಿಗೆ ನೋಯಿಸಬೇಡಿ:ಸಿದ್ದಲಿಂಗಶ್ರೀ
ತಾಳಿಕೋಟೆ:ಜು.೨೮: ತಂದೆ ತಾಯಿಕೊಟ್ಟ ದೀಕ್ಷೆಯಿಂದಲೇ ನಾವು ನಮ್ಮ ಮುಂದೆ ನಿಲ್ಲಲು ಸಾದ್ಯವಾಗಿದೆ ತಂದೆ ತಾಯಿಯ ಮೇಲೆ ಪ್ರೀತಿ ಪ್ರೇಮ, ದಯೇ ಎಂಬುದು ಇದ್ದರೆ ಮಕ್ಕಳಾದವರು ಒಳ್ಳೆಯ ಮಾರ್ಗದತ್ತ ಸಾಗಲು ಸಾದ್ಯವಾಗಲಿದೆ ಎಂದು ಶ್ರೀ ಖಾಸ್ಗತೇಶ್ವರ ಮಠದ ಬಾಲ ಶಿವಯೋಗಿ ಶ್ರೀ ಸಿದ್ದಲಿಂಗ ದೇವರು ನುಡಿದರು.
ಶನಿವಾರರಂದು ಸ್ಥಳೀಯ ಶ್ರೀ ಘನಮಠೇಶ್ವರ ವಿದ್ಯಾ ಸಂಸ್ಥೆಯ ವತಿಯಿಂದ ನಡೆಸಿಕೊಂಡು ಬರಲಾಗುತ್ತಿರುವ ಪಿಯುಸಿ ವಿಭಾಗದ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಲಾದ ಸ್ವಾಗತ ಸಮಾರಂಭವನ್ನು ದೀಪ ಬೆಳಗಿಸುವದರೊಂದಿಗೆ ಉದ್ಘಾಟಿಸಿ ಸನ್ಮಾನ ಸ್ವಿಕರಿಸಿ ಮಾತನಾಡುತ್ತಿದ್ದ ಶ್ರೀಗಳು ಹೆತ್ತ ತಂದೆ ತಾಯಿಗಳು ಕಳೆದುಕೊಂಡು ಹೋದರೆ ಮತ್ತೇ ಸಿಗಲಾರರು ಇದನ್ನು ಅರ್ಥೈಸಿಕೊಳ್ಳಬೇಕೆಂದರು. ತಂದೆ ತಾಯಿಯಂದಿರರಿಗೆ ಪಾದ ಪೂಜೆ ಮಾಡಿ ನೀವು ಮುಂದುವರೆದು ಸಾಧನೆ ಮಾಡಿ ತೋರಿಸಿ ಎಂದು ಹೇಳಿದ ಶ್ರೀಗಳು ಅವರಿಗೆ ಮೋಸ ಮಾಡುವ ಕಾರ್ಯ ಮಾಡಬೇಡಿ ಎಂದರು. ಪಿಯುಸಿ ಪ್ರಥಮ ಹಾಗೂ ದ್ವಿತೀಯ ಈ ತರಗತಿಯಿಂದಲೇ ವಿದ್ಯಾಭ್ಯಾಸದಲ್ಲಿ ಮೇಲ್ಮಟ್ಟಕ್ಕೇ ಹೋಗುವ ಮಾರ್ಗ ಇದಾಗಿದೆ ಈ ಸ್ಥಾನದಲ್ಲಿ ನಿರ್ಲಕ್ಷತೆಯಿಂದ ಮುಂದುವರೆದರೆ ತೊಂದರೆ ಅನುಭವಿಸಬೇಕಾದೀತೆಂದು ಶ್ರೀಗಳು ಎಚ್ಚರಿಸಿದರು. ಸ್ಪರ್ದೆ ಎಂಬುದು ಇರಬೇಕು ನಟನೆ ಮಾಡುವವರು ಹಿರೋಗಳೆನ್ನುವಂತೆ ನಿಜವಾದ ಹಿರೋ ನನ್ನ ಮಗ, ನನ್ನ ಮಗಳು ಎಂಬ ಕನಸ್ಸು ಕಾಣುವವರೇ ತಂದೆ ತಾಯಿಯಾಗಿರುತ್ತಾರೆ ಕಾರಣ ಅವರೇ ನಿಜವಾದ ದೇವರೆಂದರು. ವಿದ್ಯಾರ್ಥಿನಿಯೋರ್ವಳ ಸಾಧನೆ ಗೈದಿದ್ದನ್ನು ಆಕೆ ತಂದೆ ಆಕೆ ಸಾಧನೆಗೆ ಸ್ಪೂರ್ತಿ ನೀಡಿದ್ದರ ಕುರಿತು ಜರುಗಿದ ಘಟನೆಯ ಕುರಿತು ವಿವರಿಸಿದ ಶ್ರೀಗಳು ಆ ಮಹಿಳೆ ಉನ್ನತ ಸ್ಥಾನ ಮಾನದ ಮೆಟ್ಟಿಲು ಏರಿದ್ದರ ಕುರಿತು ವಿದ್ಯಾರ್ಥಿಗಳಿಗೆ ತಿಳುವಳಿಕೆ ನೀಡಿದರಲ್ಲದೇ ಮಗ ಚಿಕ್ಕವನಿರುವಾಗ ಆತನಿಗೆ ಹೋದ ಕಣ್ಣನ್ನು ತನ್ನ ಕಣ್ಣನ್ನು ಕಿತ್ತು ಹಾಕಿ ಮಗನಿಗೆ ಬೆಳಕು ನೀಡಿದ ತಾಯಿ ಯೋರ್ವಳಿಗೆ ಬೆಳಕು ಕಂಡ ಮಗ ತಾಚಾರ ಭಾವನೆಯಿಂದ ಕಂಡಿದ್ದನ್ನು ಕಂಡ ತಾಯಿ ಆತನಿಗೆ ಪತ್ರ ಬರೆದಿಟ್ಟು ಮೃತಪಟ್ಟ ತಾಯಿಯನ್ನು ಕಾಣಲು ಆಗಮಿಸಿದ ಆಕೆಯ ಪುತ್ರ ಆಕೆ ತನ್ನ ಕಣ್ಣನ್ನು ಕಿತ್ತಿ ತನಗೆ ಕಣ್ಣು ಹಾಕಿದ್ದನ್ನು ಬರೆದಿಟ್ಟ ವಿಷಯವನ್ನು ಓದಿ ದೀಗ್ಬçಮೆಗೊಂಡ ಆ ಪುತ್ರ ಆಗಮಿಸಿದಾಗ ತಾಯಿಯೂ ಕೂಡಾ ಮೃತಪ್ಪಟ್ಟು ಹೋಗಿದ್ದಳಲ್ಲದೇ ಆ ಮನೆಯಲ್ಲಿ ದೀಪ ಬೆಳಗುತ್ತಿರುವದನ್ನು ನೋಡಿ ದುಃಖ ತಪ್ತನಾಗಿದ್ದರ ಕುರಿತು ವಿದ್ಯಾರ್ಥಿಗಳಿಗೆ ತಿಳುವಳಿಕೆ ನೀಡಿದ ಶ್ರೀಗಳು ಮಾತಾಪಿತರನ್ನು ಹಾಗೂ ಶಿಕ್ಷಕರನ್ನು ಎಂದೂ ಮರೆಯಿದಿರಿ ಎಂದರು.
ಇನ್ನೋರ್ವ ಶ್ರೀ ಘನಮಠೇಶ್ವರ ವಿದ್ಯಾ ಸಂಸ್ಥೆಯ ಅಧ್ಯಕ್ಷ ಡಾ.ಎಸ್.ಎಂ.ಸಜ್ಜನ ಅವರು ಮಾತನಾಡಿ ತಮ್ಮ ಸಂಸ್ಥೆಯಲ್ಲಿ ಉತ್ತೀರ್ಣ ಹೊಂದಿದ್ದAತಹ ವಿದ್ಯಾರ್ಥಿಗಳ ಸಂಖ್ಯೆಯನ್ನು ವಿವರಿಸಿ ಶೈಕ್ಷಣಿಕ ಪ್ರಥಮ ವರ್ಷ ಸ್ವಾಗತ ಕೋರಿ ಮಾತನಾಡಿದ ಅವರು ಕನಸ್ಸನ್ನು ನನಸ್ಸಾಗಿಸಿಕೊಳ್ಳುವಂತಹ ಕಾರ್ಯ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯರದ್ದಾಗಿದೆ ೨೦೦೫-೦೬ರಲ್ಲಿ ನೊಂದಾಯಿಸಿಕೊAಡ ತಮ್ಮ ಸಂಸ್ಥೆಯ ಇತಿಹಾಸವನ್ನು ಬಿಚ್ಚಿಟ್ಟ ಅವರು ೨೦೦೭-೦೮ ರಲ್ಲಿ ಪಿಯುಸಿಯನ್ನು ಪ್ರಾರಂಬಿಸಲಾಯಿತೆAದರು. ಆಂಗ್ಲ ಮಾದ್ಯಮ, ಬಿಎಡ್, ಡಿಎಡ್ ಒಳಗೊಂಡು ೭-೮ ಬ್ರಾö್ಯಂಚ್‌ಗಳನ್ನು ಸಂಸ್ಥೆಯ ವತಿಯಿಂದ ತೆರೆಯಲಾಗಿದೆ ೧೫೦೦ ಕ್ಕೂ ಮೇಲ್ಪಟ್ಟು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆಂದರು. ಶ್ರೀ ಖಾಸ್ಗತೇಶ್ವರ ಮಠದ ಲಿಂ.ವಿರಕ್ತಶ್ರೀಗಳೂ ಸಹ ತಮ್ಮ ಸಂಸ್ಥೆಗೆ ಆಗಮಿಸಿ ಆಶಿರ್ವದಿಸಿದ್ದರ ಕುರಿತು ವಿವರಿಸಿದ ಡಾ.ಸಜ್ಜನ ಅವರು ಗುರುವಿನ ಆಶಿರ್ವಾದ ಸೇವೆಯ ಪ್ರತಿಫಲ, ದುಡಿಮೆಗೆ ಯಾವ ಯಾವುದು ಸಿಗುತ್ತದೆ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದ ಅವರು ಶಿಕ್ಷಣದ ದುಡಿಮೆಗೆ ಅಂಕಗಳು ಸಿಗುತ್ತವೆ ಅದುವೇ ನಿಮ್ಮ ಉದ್ದಾರಕ್ಕಾಗಿ ನಿಲ್ಲಲಿದೆ ಎಂದರು. ವಿಜಯಪುರ ಗೋಲಗುಮ್ಮಟದಂತೆ ಒಂದು ಸಲ ತಾವು ಓದಿದ ಮೇಲೆ ೭ ಸಲ ಓದುವಂತಹ ಕಾರ್ಯ ಮಾಡಿ ಚೈತನ್ಯ ಚಿಲುಮೆಯನ್ನು ಹೊರ ಹಾಕುವಂತಹ ಕಷ್ಠ ಪಟ್ಟರೆ ಜೀವನ ರ‍್ಯಂತ ಸುಖಃಮಯವಾಗಿರುತ್ತೀರಿ ಎಂದು ವಿದ್ಯಾರ್ಥಿಗಳಿಗೆ ತಿಳುವಳಿಕೆ ನೀಡಿದ ಅವರು ಶ್ರೀ ಖಾಸ್ಗತ ಮಠದ ಶ್ರೀ ಸಿದ್ದಲಿಂಗ ದೇವರು ಶ್ರೀ ಖಾಸ್ಗತರಂತೆ ಪುನರ್ ಜನ್ಮ ಹೆತ್ತಿ ಬಂದಿದ್ದಾರೆAಬ ಭಾವನೆಯು ಅವರ ಮಾತು ಹಾಗೂ ನೇರ ನುಡಿಗಳಿಂದಲೇ ಗೊತ್ತಾಗುತ್ತದೆ ಮುಂದೆ ಅವರು ಸಾಮಾನ್ಯ ವ್ಯಕ್ತಿಯಾಗುವದಿಲ್ಲಾ ಅವರು ಸಾಕ್ಷಾತ ಖಾಸ್ಗತರೇ ಎಂದರು.
ಇನ್ನೋರ್ವ ಮುಖ್ಯ ಅತಿಥಿಗಳಾಗಿ ಆಗಮಿಸಿ ಸನ್ಮಾನ ಸ್ವಿಕರಿಸಿದ ಹಿರಿಯ ಪತ್ರಕರ್ತರಾದ ಜಿ.ಟಿ.ಘೋರ್ಪಡೆ ಅವರು ಮಾತನಾಡಿ ಶ್ರೀ ಘನಮಠೇಶ್ವರ ವಿದ್ಯಾ ಸಂಸ್ಥೆಯ ಸೇವಾ ಕಾರ್ಯ ಕಳೆದ ೧೫ ವರ್ಷಗಳಿಂದ ನಾನು ಬಲ್ಲೆ ಅಲ್ಲಿ ನುರಿತ ಶಿಕ್ಷಕರಿಂದ ವಿದ್ಯಾರ್ಥಿಗಳಿಗೆ ಪ್ರಥಮ ಹಾಗೂ ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗುತ್ತಿರುವದು ಹೆಚ್ಚುತ್ತಲಿದೆ ಈ ಸಂಸ್ಥೆಯನ್ನು ಹುಟ್ಟು ಹಾಕುವಾಗ ಸಜ್ಜನವರು ಅನೇಕ ಎಡರು ತೊಡರುಗಳನ್ನು ಕಂಡಿದ್ದರು ಯಾವುದಕ್ಕೆ ಹೆದರದೇ ಮುನ್ನುಗ್ಗುತ್ತಾ ಸಾಗಿದ್ದಾರೆಂದು ಹೇಳಿದ ಅವರು ಮುಖ್ಯವಾಗಿ ಡಾ.ಎಸ್.ಎಂ.ಸಜ್ಜನ ಅವರಿಗೆ ಅವರ ಧರ್ಮ ಪತ್ನಿ ಸಾತ್ ನೀಡಿದ್ದೂ ಸಹ ಈ ಶಿಕ್ಷಣ ಸಂಸ್ಥೆಯು ಮುಂದುವರೆಯಲು ಕಾರಣವಾಗಿದೆ ಎಂದು ಸುಮಾರು ನೂರಾರು ಶಿಕ್ಷಕರು ಉದ್ಯೋಗದಲ್ಲಿ ತಮ್ಮ ಸೇವಾ ಕಾರ್ಯದಲ್ಲಿ ಮುಂದುವರೆಯುತ್ತಾ ಸಾಗಿದ್ದಾರೆಂದು ಶ್ರೀ ಘನಮಠೇಶ್ವರ ಶಿಕ್ಷಣ ಸಂಸ್ಥೆಯ ಕಾರ್ಯ ಚಟುವಟಿಕೆಗಳ ಬಗ್ಗೆ ಗುಣಗಾನ ಮಾಡಿದರು.
ವೇದಿಕೆಯ ಮೇಲೆ ಪ್ರಾಚಾರ್ಯ ಕೀಶೋರಗೌಡ, ಶಿಕ್ಷಕ ಸುರೇಶ ಸಜ್ಜನ, ಬಸವರಾಜ ಸಜ್ಜನ, ಹಾಗೂ ಶಿಕ್ಷಣ ಸಂಸ್ಥೆಯ ಬೋಧಕ, ಬೇದಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಇದೇ ಸಮಯದಲ್ಲಿ ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಭಹುಮಾನ ನೀಡಿ ಗೌರವಿಸಲಾಯಿತು.
ನೀವೇದಿತಾ ಸಜ್ಜನ ಸ್ವಾಗತಿಸಿ ನಿರೂಪಿಸಿದರು. ಉಪನ್ಯಾಸಕಿ ರೇಖಾ ವಂದಿಸಿದರು.