ಬಳೂತಿ ಗ್ರಾಮ ಭಾವೈಕ್ಯತೆಯ ಕಾಶಿ
ಪವಾಡಕ್ಕೆ ಹೆಸರಾಗಿರುವ ಬಿಬಿ ಫಾತೀಮಾ ದೇವತೆ: ಬಳೂತಿ ಗ್ರಾಮದಲ್ಲಿ ಅನೇಕ ಪವಾಡಗಳ ಮೂಲಕ ಪ್ರಸಿದ್ಧಿ ಪಡೆದಿರುವ ಬಿಬಿ ಫಾತಿಮಾ ದೇವತೆ. ಈ ಭಾಗದಲ್ಲಿ ಪವಾಡ ದೇವತೆ ಎಂದೇ ಪ್ರಸಿದ್ಧಿ ಪಡೆದಿದ್ದು ಅವಳಿ ಜಿಲ್ಲೆಯ ಜನರು ಅತ್ಯಂತ ಪೂಜ್ಯನೀಯ ಭಾವದಿಂದ ಹತ್ತು ದಿನದ ಜಿಯಾರತ್ ಆಚರಣೆ ಮಾಡುತ್ತಾರೆ.
ಅಂತೆಯೇ ಶುಕ್ರವಾರ ಕೂಡ ಬಳೂತಿ ಗ್ರಾಮದಲ್ಲಿ ಬಿಬಿ ಫಾತಿಮಾ ದೇವತೆಯ ಜಿಯಾರತ್ ಆಚರಣೆ ಶ್ರದ್ಧಾ ಭಕ್ತಿಯಿಂದ ಆಚರಿಸಲ್ಪಡಲಾಯಿತು. ಸಾವಿರಾರು ಭಕ್ತಾದಿಗಳ ಉದ್ಘೋಷ, ಜೈಕಾರದೊಂದಿಗೆ ಅಲಂಕೃತ ಡೋಲಿ ಮೆರವಣಿಗೆಗೆ ನೂರಾರು ಕ್ವೀಂಟಾಲ್ ಹೂವಿನಿಂದ ಪುಷ್ಪಾರ್ಚನೆ ಮಾಡಲಾಯಿತು. ಡೋಲಿ ಮೆರವಣಿಗೆಯುದ್ದಕ್ಕೂ ಪುರುಷರು, ಮಹಿಳೆಯರು, ಮಕ್ಕಳು ನಿಂತು ಕೈ ಮುಗಿದು ದೇವತೆಗೆ ನಮಿಸುತ್ತಿರುವುದು ಕಂಡುಬAದಿತು.
ಬಳೂತಿ ಭಾವೈಕ್ಯತೆ ಕಾಶಿ: ಬಳೂತಿ ಗ್ರಾಮವನ್ನು ಭಾವೈಕ್ಯತೆಯ ಕಾಶಿ ಎಂದೇ ಕರೆಯಬಹುದು. ಗ್ರಾಮದಲ್ಲಿ ಹಿಂದೂ ಮುಸ್ಲಿಂರು ಭಾವೈಕ್ಯತೆಯಿಂದ ಪ್ರತಿವರ್ಷ ಈ ಜಿಯಾರತ್ ಕಾರ್ಯಕ್ರಮವನ್ನು ಆಚರಣೆ ಮಾಡುತ್ತಾರೆ. ಹಿಂದೂ ಹಾಗೂ ಮುಸ್ಲಿಂ ಸಮುದಾಯದ ಹಿರಿಯರ ನೇತೃತ್ವದಲ್ಲಿ ಜರುಗುವ ಈ ಕಾರ್ಯಕ್ರಮ ಹಾಗೂ ಬಳೂತಿ ಗ್ರಾಮ ಭಾವೈಕ್ಯತೆಗೆ ಸಾಕ್ಷಿಯಾಗಿದೆ.