ಜನರ ಸಮಸ್ಯೆಗಳಿಗೆ ಪೊಲೀಸರು ಸ್ಪಂದಿಸಲಿ: ಎಸ್ಪಿ
ಕೋಲಾರ,ಜು,೨೮- ಪೊಲೀಸ್ ಇಲಾಖೆ ಮತ್ತು ಸಾರ್ವಜನಿಕ ಸಂಬಂಧಗಳು ಪಾರದರ್ಶಕವಾಗಿ ತೆರೆದ ಮನೆಯಂತಿರ ಬೇಕು, ಪ್ರಮುಖವಾಗಿ ಮಹಿಳೆಯರಿಗೆ ಮತ್ತು ಮಕ್ಕಳಿಗೆ ಪೊಲೀಸ್ ಠಾಣೆಯ ಬಗ್ಗೆ ಉತ್ತಮವಾದ ಅಭಿಪ್ರಾಯ ಮತ್ತು ಭಾಂದವ್ಯ ಹೊಂದುವಂತಾಗ ಬೇಕು. ಜನರಿಗೆ ಸ್ಪಂದಿಸುವ ಪೊಲೀಸ್ ಇಲಾಖೆಯಾಗಿರಬೇಕು, ಸಾರ್ವಜನಿಕರಿಗೆ ಸಾಮಾನ್ಯ ಕಾನೂನು ಸುವ್ಯವಸ್ಥೆಗಳ ಕುರಿತು ಜಾಗೃತಿಯ ಅರಿವು ಮೋಡಿಸುವಂತಾಗ ಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ನಿಖಿಲ್ ಅಭಿಪ್ರಾಯ ಪಟ್ಟರು,
ನಗರದ ಪತ್ರಕರ್ತರ ಭವನದಲ್ಲಿ ಪತ್ರಿಕಾ ಸಂವಾದದ ಕಾರ್ಯಕ್ರಮದಲ್ಲಿ ಅವರು ಮಾತನಾಡಿ ಜನರ ಸಮಸ್ಯೆಗಳ ಪರಿಹಾರಕ್ಕೆ ಮಾದ್ಯಮಗಳು ಕೊಂಡಿಯಂತೆ ಕಾರ್ಯನಿರ್ವಹಿಸುವ ಮೂಲಕ ಸಮಾಜಕ್ಕೆ ಉತ್ತಮ ಸೇವೆ ಸಲ್ಲಿಸುವಂತಾಗ ಬೇಕು, ನಾವು ನಿಮಗೆ- ನಿಮಗೆ ನಾವು ಇದ್ದು ಸಮಾಜಕ್ಕೆ ಒಳ್ಳೆಯದನ್ನು ಮಾಡುವಂತ ಪರಸ್ಪರ ಸಹಕಾರದ ಭಾಂದವ್ಯವನ್ನು ಹೊಂದಿದಾಗ ಮಾತ್ರ ಏನಾದರೂ ಸಾಧನೆ ಮಾಡಲು ಸಾಧ್ಯ ಎಂದರು,
ಮಾದ್ಯಮಗಳು ವಾಸ್ತವಾಂಶದ ಮಾಹಿತಿಗಳನ್ನು ಮಾತ್ರ ಪ್ರಕಟಿಸ ಬೇಕು. ಅಧಿಕಾರಿಗಳೊಂದಿಗೆ ನೇರ ಸಂರ್ಪಕ ಇಟ್ಟು ಕೊಂಡು ನಿಖರವಾದ ವಿಷಯಗಳನ್ನು ಸಂಗ್ರಹಿಸಿ ಪ್ರಕಟಿಸುವುದಕ್ಕೆ ಹೆಚ್ಚಿನ ಅದ್ಯತೆಗಳನ್ನು ನೀಡ ಬೇಕು. ಹಿರಿಯ ಮತ್ತು ಅನುಭವಿ ಪತ್ರಕರ್ತರ ಆದರ್ಶ ಮತ್ತು ಮಾರ್ಗದರ್ಶನ ಪಡೆದು ಪತ್ರಿಕೆಯ ಭವಿಷ್ಯವನ್ನು ರೂಪಿಸುವಂತಾಗ ಬೇಕೆಂದರು,
ಕೋಲಾರ ಜಿಲ್ಲೆಯು ಇಡೀ ವಿಶ್ವಕ್ಕೆ ಮಾದರಿಯಾಗಿದೆ. ಚಿನ್ನ. ರೇಷ್ಮೆ.ಹಾಲು, ತರಕಾರಿಗಳು ಮಾತ್ರವಲ್ಲದೆ ಶೈಕ್ಷಣಿಕವಾಗಿ, ರಾಜಕೀಯವಾಗಿ, ಸಾಹಿತ್ಯ, ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಖ್ಯಾತಿ ಹೊಂದಿರುವಂತ ಮಾದರಿ ಜಿಲ್ಲೆಯಾಗಿದೆ. ಇಲ್ಲಿನ ಜನರು ಬರಗಾಲ ಪೀಡಿತ ಪ್ರದೇಶವಾಗಿದ್ದರೂ ಸಾಧನೆಗೈದ ಶ್ರಮ ಜೀವಿಗಳಾಗಿದ್ದಾರೆ ಎಂದು ಶ್ಲಾಘಿಸಿದರು.
ಸಂವಿಧಾನ ಬದ್ದವಾದ ಕಾನೂನು ಸುವ್ಯವಸ್ಥೆಗಳನ್ನು ಪ್ರತಿಯೊಬ್ಬರೂ ಪಾಲನೆ ಮಾಡ ಬೇಕಾಗುವುದು ಅದ್ಯ ಕರ್ತವ್ಯವಾಗಿದೆ. ಪೊಲೀಸ್ ಇಲಾಖೆಯು ಕಾನೂನು ಸುವ್ಯವಸ್ಥೆಗಳನ್ನು ಕಾಪಾಡಲು ಸಾರ್ವಜನಿಕರ ಮತ್ತು ನ್ಯಾಯಾಲಯದ ನಡುವಿನ ಕೊಂಡಿಯಾಗಿದೆ. ಸಣ್ಣ ಪುಟ್ಟ ಸಮಸ್ಯೆಗಳನ್ನು ಬಗೆಹರಿಸ ಬಹುದಾಗಿದೆ ಅದರೆ ಯಾವೂದೇ ಪ್ರಕರಣವನ್ನು ತೀರ್ಮಾನಿಸುವಂತ ಅಧಿಕಾರ ಪೊಲೀಸ್ ಇಲಾಖೆಗೆ ಇಲ್ಲವಾಗಿದೆ. ಮಾದ್ಯಮಗಳಿಗೆ ಎಫ್.ಐ.ಆರ್. ದಾಖಲು ಮಾಡಿದ ನಂತರವೇ ಖಚಿತವಾದ ಮಾಹಿತಿ ನೀಡಬಹುದಾಗಿದೆ ಹೊರತಾಗಿ ಅದಕ್ಕೆ ಮೊದಲು ನೀಡಿದಾಗ ಕೆಲವೊಂದು ಪ್ರಕರಣಗಳು ಬದಲಾಗುವ ಸಾಧ್ಯತೆ ಇರುತ್ತದೆ ಎಂದು ಹೇಳಿದರು,
ಮಹಿಳೆಯರ ಮತ್ತು ಮಕ್ಕಳ ವಿಚಾರಕ್ಕೆ ಸಂಬಂಧಿಸಿದಂತೆ ಎಚ್ಚರಿಕೆ ಮತ್ತು ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳ ಬೇಕಾಗಿದೆ. ಪೊಲೀಸ್ ಇಲಾಖೆಗೆ ಮತ್ತು ಆಸ್ಪತ್ರೆಗೆ ಯಾರೂ ಸುಮ್ಮನೆ ಬರುವುದಿಲ್ಲ ಏನಾದರೂ ಸಮಸ್ಯೆಗಳು ಇದ್ದರೇನೆ ಬರುವುದು. ಜನರ ನಿರೀಕ್ಷೆಯಂತೆ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರವನ್ನು ಕಲ್ಪಿಸ ಬೇಕಾಗಿರುವುದು ನಮ್ಮಗಳ ಕರ್ತವ್ಯವಾಗಿದೆ ಎಂದರು,
ಯುವಕರ ಮೇಲಿನ ಎಫ್.ಐ.ಆರ್ ಭವಿಷ್ಯಕ್ಕೆ ಮಾರಕ-
ಇಂದಿನ ಯುವಕರು ಮಾದಕ ವಸ್ತುಗಳಿಗೆ ಮೋರೆಹೋಗಿ ಹಾದಿ ತಪ್ಪುತ್ತಿರುವ ಬಗ್ಗೆ ತಿಳುವಳಿಕೆ ನೀಡ ಬೇಕು. ಎಫ್.ಐ.ಆರ್ ಪ್ರಕರಣಗಳಿಂದ ಯುವಕರ ಭವಿಷ್ಯದಲ್ಲಿ ಮಾರಕವಾಗಲಿದೆ ಬಗ್ಗೆ ಅವರಿಗೆ ತಿಳುವಳಿಕೆ ನೀಡುವಂತಾಗ ಬೇಕು ಎಂದರು.
ಜುಲೈನಿಂದ ಕೆಲವು ಕಾನೂನುಗಳಲ್ಲಿ ಮಾರ್ಪಡಾಗಿದೆ. ದೂರುದಾರರಿಗೆ ಕೆಲವು ಠಾಣೆಗಳಲ್ಲಿ ಎಫ್.ಐ.ಆರ್.ದಾಖಲಿಸಲು ತೊಂದರೆಯಾದಲ್ಲಿ ಅವರಿಗೆ ಅನುಕೊಲವಾಗುವ ಠಾಣೆಗಳಿಗೆ ಹೋಗಿ ಎಫ್.ಐ.ಆರ್. ದಾಖಲಿಸ ಬಹುದು ನಂತರದಲ್ಲಿ ಅದನ್ನು ಸಂಬಂಧ ಪಟ್ಟ ಠಾಣೆಗೆ ವರ್ಗಾಯಿಸಲಾಗುವುದು.ಈಗಾಗಲೇ ನಮ್ಮ ದೇಶದಲ್ಲಿ ೨-೩ ರಾಜ್ಯಗಳಲ್ಲಿ ಇದು ಜಾರಿಯಾಗಿದೆ. ಇಮೇಲ್ ಮತ್ತು ಆನ್ ಲೈನ್ ಮೂಲಕ ದೊರಿನ ಪ್ರಕರಣಗಳನ್ನು ದಾಖಲಿಸ ಬಹುದಾಗಿದೆ ಎಂದರು.
ಅದರೆ ನಾವು ದೂರು ನೀಡಿದ ನಂತರ ಪೊಲೀಸ್ ಠಾಣೆಯಿಂದ ಹಿಂಬರಹ ಪಡೆದಾಗ ಮಾತ್ರ ಅದು ಅಧಿಕೃತ ದಾಖಲಾತಿಯಾಗುತ್ತದೆ. ಪೊಲೀಸ್ ಐ.ಟಿ.ಯಲ್ಲಿ ಅಧಿಕಾರಿಗಳ ಈ ಸಹಿ ಅಗಿದ್ದರೆ ಮಾತ್ರ ಎಫ್.ಐ.ಆರ್.ದಾಖಲು ಮಾಡಲು ಸಾಧ್ಯವಾಗುತ್ತದೆ ಇಲ್ಲವಾದರೆ ಎಫ್.ಐ.ಆರ್ ದಾಖಲು ಮಾಡುವುದಿಲ್ಲ ಎಂದು ಸ್ವಷ್ಟ ಪಡಿಸಿದರು,
ನ್ಯಾಯಾಲಯಗಳಿಗೆ ಸ್ಥಳ ಪರಿಶೀಲನೆ ಹಾಗೂ ಸಾಕ್ಷಿ ಹೇಳಿಕೆಗಳನ್ನು ವಿಡೀಯೋ ಮೂಲಕ ದಾಖಲಿಸಲು ಸೂಚನೆ ನೀಡಲಾಗಿದೆ. ಈ ವಿಡಿಯೋಗಳನ್ನು ಆಪ್‌ಗಳಲ್ಲಿ ದಾಖಲು ಮಾಡ ಬೇಕು ಅದನ್ನು ನ್ಯಾಯಾಲಯವು ಪರಿಶೀಲಿಸಲು ಸುಲಭವಾಗಲಿದೆ ಸಾಕ್ಷಿದಾರರ ಹೇಳಿಕೆಗಳು ತಿರುಚಲು ಸಾಧ್ಯವಾಗುವುದಿಲ್ಲ. ಇದನ್ನು ಕೋಲಾರ ಜಿಲ್ಲೆಯಿಂದಲೇ ಪ್ರಯೋಗಿಕವಾಗಿ ಪ್ರಾರಂಭಿಸಲಾಗುವುದು.ಎಫ್.ಐ.ಆರ್ ನಂತರ ಬಿ. ರಿಪೋರ್ಟ್ ಹಾಕುವುದನ್ನು ತಪ್ಪಿಸಲು ಈ ಕಾಯ್ದೆ ಪೂರಕವಾಗುವುದು ಎಂದು ವಿವರಿಸಿದರು,
ದೈನಂದಿನ ಜೀವನದಲ್ಲಿ ಸಾಮಾನ್ಯವಾದ ಕಾನೂನುಗಳ ಅರಿವು ಅಗತ್ಯವಿದೆ. ಪ್ರತಿಯೊಂದು ಪ್ರಕರಣಗಳು ನ್ಯಾಯಾಲಯಗಳಿಗೆ ಸವಾಲಾಗಿದೆ. ಹಲ್ಲೆಗಳಿಗೆ ಸಂಬಂಧಿಸಿದಂತೆ ಕಾಯ್ದೆಗಳಲ್ಲಿಯೇ ಉಪ ಕಾಯ್ದೆಗಳು ಜಾರಿಯಲ್ಲಿವೆ. ಕಮ್ಯೂನಿಟಿ ಸರ್ವಿಸ್ ಮೂಲಕ ಅಪರಾಧಿಗೆ ಶಿಕ್ಷೆಯನ್ನು ನೀಡುವ ಮೂಲಕ ಪರಿವರ್ತಿಸುವ ಪ್ರಯತ್ನಗಳನ್ನು ನ್ಯಾಯಾದೀಶರು ಮಾಡಬಹುದಾಗಿದೆ ಎಂದು ಉದಾಹರಿಸಿದರು.
ಪೊಲೀಸ್ ಇಲಾಖೆಯಲ್ಲಿ ಹಳೆಯ ಕಾಯ್ದೆಗಳು ಬದಲಾವಣೆಯಾಗಿರುವ ಕುರಿತು ಸಿಬ್ಬಂದಿಗಳಿಗೆ
ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ ಮಾತನಾಡಿ ಹೊಸ ಕಾನೂನುಗಳು ಸಂವಿಧಾನ ತಿದ್ದುಪಡಿ ಅನ್ ಲೈನ್ ಪ್ರಕರಣ ದಾಖಲಾತಿ, ನ್ಯಾಯ ಸಂಹೀತೆ ಅರಿವು ಮಾದ್ಯಮಗಳಿಗೆ ಅಗತ್ಯವಿದೆ. ಇತ್ತೀಚೆಗೆ ಪ್ರೆಸ್ ಎಂದು ವಾಹನಗಳಿಗೆ ಅನಧಿಕೃತವಾಗಿ ಅಳವಡಿಸಿ ಕೊಂಡಿರುವವರ ಸಂಖ್ಯೆ ಹೆಚ್ಚಾಗಿ ದುರ್‍ಬಳಿಕೆಯಾಗುವುದನ್ನು ನಿಯಂತ್ರಿಸಲು ಇಲಾಖೆಯಿಂದ ಗುರುತಿಸಿ ಸ್ಟೀಕರ್ ನೀಡುವಂತಾಗ ಬೇಕೆಂದು ಸಲಹೆ ನೀಡಿದರು,
ಜಿಲ್ಲೆಯಲ್ಲಿ ಎಫ್.ಐ.ಆರ್. ಅಗುವ ಪ್ರಕರಣಗಳಿಗೆ ವಿಶೇಷವಾದ ಪೊಲೀಸ್ ವೆಬ್ ಸೆಟ್ ಅನುಷ್ಠಾನಲಕ ಸಮರ್ಪಕವಾದ ಮಾಹಿತಿ ಸಾರ್ವಜನಿಕರಿಗೆ ನೀಡಲು ಅನುವು ಮಾಡಿ ಕೊಡಬೇಕೆಂದು ಮನವಿ ಮಾಡಿದರು,
ಕಾರ್ಯಕ್ರಮದಲ್ಲಿ ರಾಜ್ಯ ಪತ್ರಕರ್ತರ ಸಂಘದ ನಿರ್ದೇಶಕ ವಿ.ಮುನಿರಾಜು, ಜಿಲ್ಲಾ ಪತ್ರಕರ್ತರ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್.ಗಣೇಶ್ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ಸ್ವಾಗತಿಸಿದರು, ಖಜಾಂಜಿ ಸುರೇಶ್ ನಿರೂಪಿಸಿದರು, ಇದೇ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ನಿಖಿಲ್ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು,