೧.೧೦ ಲಕ್ಷ ಮಂದಿಗೆ ಆಟೋಮೊಬೈಲ್ ತರಬೇತಿ
ರಾಮನಗರ.ಜು.೨೮-ಆರ್ಥಿಕವಾಗಿ ಹಿಂದುಳಿದ ವರ್ಗಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆಟೋಮೊಬೈಲ್ ಕ್ಷೇತ್ರದಲ್ಲಿ ನುರಿತ ತಂತ್ರಜ್ಞರಾಗಲು ಉಚಿತ ತರಬೇತಿ ಅವಕಾಶಗಳನ್ನು ಒದಗಿಸುವ ಮೂಲಕ ಟಿಕೆಎಂ ಸ್ವಾಮ್ಯದ ಟೊಯೋಟಾ ತಾಂತ್ರಿಕ ತರಬೇತಿ ಸಂಸ್ಥೆ(ಟಿಟಿಟಿಐ) ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರತಿಭೆಗಳನ್ನು ಪರಿಚಯಿಸುತ್ತಿದೆ ಎಂದು ಸಂಸ್ಥೆಯ ಟಿಕೆಎಂನ ಹಣಕಾಸು ಮತ್ತು ಆಡಳಿತ ಕಾರ್ಯನಿರ್ವಾಹಕ ಉಪಾಧ್ಯಕ್ಷ ಜಿ.ಶಂಕರ ತಿಳಿಸಿದರು.
ಸಂಸ್ಥೆಯ ಬಿಡದಿ ಸ್ಥಾವರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ೨೦೦೧ರಲ್ಲಿ ಟೊಯೋಟಾ ಟೆಕ್ನಿಕಲ್ ಟ್ರೈನಿಂಗ್ ಇನ್ಸ್ಟಿಟ್ಯೂಟ್(ಟಿಟಿಟಿಐ) ಎಂಬ ಸಂಸ್ಥೆಯೊಂದನ್ ತೆರೆದು ಗ್ರಾಮೀಣ ಭಾಗದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಆರಿಸಿಕೊಂಡು ಅವರಿಗೆ ಟಿಕೆಎಂ ಗುಣಮಟ್ಟದ ತಂತ್ರಜ್ಞಾನದ ಸ್ಪರ್ಶ ನೀಡುತ್ತಿದೆ. ಬಡವರ್ಗಗಳ ಕೆಲ ವಿದ್ಯಾರ್ಥಿಗಳಿಗೆ ಸೀಮಿತವಾಗಿದ್ದ ತಂತ್ರಜ್ಞಾನ ತರಬೇತಿ ಸೌಲಭ್ಯವನ್ನು ಇದೀಗ ೧೨೦೦ ವಿದ್ಯಾರ್ಥಿಗಳಿಗೆ ಒದಗಿಸುತ್ತಿದೆ ಎಂದರು.
ಟೊಯೋಟಾ ಟೆಕ್ನಿಕಲ್ ಟ್ರೈನಿಂಗ್ ಇನ್ಸ್ಟಿಟ್ಯೂಟ್(ಟಿಟಿಟಿಐ) ಮೂಲಕ ಪ್ರತಿ ಸಾಲಿನ ಶೈಕ್ಷಣಿಕ ವರ್ಷದ ಪ್ರವೇಶಾತಿ ಸಂದರ್ಭದಲ್ಲಿ ರಾಜ್ಯದ ೩೧ ಜಿಲ್ಲೆಗಳಲ್ಲಿನ ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಅಂಕಗಳಿಕೆ, ನಡವಳಿಕೆ ಮತ್ತು ಕುಟುಂಬದ ಸ್ಥಿತಿ-ಗತಿಗಳ ಪರಿಶೀಲನೆಯಿಂದ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಪ್ರತಿ ವರ್ಷವೂ ಗ್ರಾಮೀಣ ಭಾಗಗಳಿಗೆ ಸಂಸ್ಥೆಯ ಅಕಾರಿಗಳ ತಂಡ ಶಾಲೆಯ ಮುಖ್ಯಶಿಕ್ಷಕರಿಂದ ವಿದ್ಯಾರ್ಥಿಗಳ ಮಾಹಿತಿಯನ್ನು ಕಲೆಹಾಕಲಿದೆ.
ಮುಂದಿನ ಅಂತಾರಾಷ್ಟ್ರೀಯ ಮಟ್ಟದ ಕೌಶಲ್ಯ ಸ್ಪರ್ಧೆಗೆ ಸಂಸ್ಥೆಯಿಂದ ಈ ಬಾರಿ ೬ ಜನ ವಿದ್ಯಾರ್ಥಿಗಳನ್ನು ತಯಾರು ಮಾಡಲಾಗುತ್ತಿದೆ. ಜತೆಗೆ ವಿದ್ಯಾರ್ಥಿನಿಯರನ್ನೂ ಕೌಶಲ ಸ್ಪರ್ಧೆಗೆ ಅಣಿಗೊಳಿಸಲಾಗುತ್ತಿದೆ.
ತರಬೇತಿ ಅವಯಲ್ಲಿ ಆಟೋಮೊಬೈಲ್ ಅಸೆಂಬ್ಲಿ, ಆಟೋಮೊಬೈಲ್ ವೆಲ್ಡ್, ಆಟೋಮೊಬೈಲ್ ಪೇಂಟ್ ಮತ್ತು ಮೆಕಾಟ್ರಾನಿಕ್ಸ್ ಎಂಬ ನಾಲ್ಕು ಕೋರ್ಸ್ಗಳನ್ನು ಒದಗಿಸುತ್ತದೆ. ಕೌಶಲ್ಯ ತರಬೇತಿ ಪಡೆಯುವ ವಿದ್ಯಾರ್ಥಿಗಳು ಟೊಯೋಟಾ ಘಟಕದಲ್ಲಿ ವಿಶ್ವಪ್ರಸಿದ್ಧ “ಟೊಯೋಟಾ ಪ್ರೊಡಕ್ಷನ್ ಸಿಸ್ಟಮ್ನಲ್ಲಿ ಸ್ವತಹ ಅನುಭವವನ್ನು ಪಡೆಯುತ್ತಿದ್ದಾರೆ. ಒಟ್ಟಾರೆ ಟಿಟಿಟಿಐ ಭವಿಷ್ಯದಲ್ಲಿ ವಿಶ್ವಶೇಷ್ಠ ಸಂಸ್ಥೆಯಾಗಿ ರೂಪುಗೊಳ್ಳುವ ಎಲ್ಲಾ ಲಕ್ಷಣಗಳು ಗೋಚರಿಸಿದೆ
ಎಂದು ಶಂಕರ್.ಜಿ ಮಾಹಿತಿ ನೀಡಿದರು. ಇದೇ ವೇಳೆ ಸಂಸ್ಥೆಯ ವಿಶ್ವಕೌಶಲ್ಯ ರ್ಸ್ಪಗಳು ತಮ್ಮ ಅನುಭವಗಳನ್ನು ಹಂಚಿಕೊಂಡರು.