ವಿದ್ಯಾರ್ಥಿಗಳು ಪರಿವರ್ತಕರಾಗಬೇಕು: ಡಾ. ದಿಲೀಪ್ ನವಲೆ
ಕಲಬುರಗಿ:ಜು.27: ವಿದ್ಯಾರ್ಥಿನಿಯರು ಯಾವಾಗಲೂ ಪರಿವರ್ತನೆಯ ಕಡೆಗೆ ಚಲಿಸಬೇಕು. ಯಥಾಸ್ಥಿತಿಗೆ ಹೊಂದಿಕೊAಡರೆ ಬದುಕು ಬದಲಾಗುವುದಿಲ್ಲ ಎಂದು ವಿಧಿವಿಜ್ಞಾನ ಅಧಿಕಾರಿ ಡಾ. ದಿಲೀಪ್ ನವಲೆ ಅವರು ಹೇಳಿದರು.
ಬುದ್ಧ ಬಸವ ಡಾ. ಅಂಬೇಡ್ಕರ್ ವಿಚಾರ ವೇದಿಕೆ ವತಿಯಿಂದ ನಗರದ ಮಹಿಳಾ ಪದವಿ ಮಹಾವಿದ್ಯಾಲಯದಲ್ಲಿ ಶನಿವಾರ ಆಯೋಜಿಸಿದ್ದ ಯಥಾಸ್ಥಿತಿ ಮನಸ್ಥಿತಿ ಮತ್ತು ಪರಿವರ್ತನ ಮನಸ್ಥಿತಿಯ ಕುರಿತು ವಿಶೇಷ ಉಪನ್ಯಾಸ ನೀಡಿದ ಅವರು, ಈ ದೇಶದಲ್ಲಿ ಬುದ್ಧನ ನಂತರ ಪರಿವರ್ತನಾ ಮನಸ್ಥಿತಿ ಶುರುವಾಯಿತು. ನಂತರ ಬಂದ ಬಸವೇಶ್ವರ? ಡಾ.ಅಂಬೇಡ್ಕರ್ ಅವರು ಕೂಡ ಪರಿವರ್ತನ ಮನಸ್ಥಿತಿಯವರಾಗಿದ್ದರು. ಇಡೀ ನಮ್ಮ ಸಂವಿಧಾನ ಪರಿವರ್ತನೆಯ ಹಾದಿಯಲ್ಲಿ ರಚನೆಯಾಗಿದೆ. ಆದರೆ ಯಥಾಸ್ಥಿತಿ ಮನಸ್ಥಿತಿ ವ್ಯವಸ್ಥೆಯನ್ನು ಹಾಗೆ ಇರಿಸಲಾಗುತ್ತದೆ. ಬಂಧನದ ಸ್ಥಿತಿಯನ್ನು ಇಂದಿನ ವಿದ್ಯಾರ್ಥಿಗಳು ಕಿತ್ತೆಸೆಯಬೇಕು ಎಂದರು.
ಮುಖ್ಯ ಅತಿಥಿಗಳಾಗಿದ್ದ ಡಾ. ಅನೀಲಕುಮಾರ್ ಹಾಲು ಅವರು ಮಾತನಾಡಿ, ಇಂದಿನ ಯುವತಿಯರಿಗೆ ಮನಸ್ಥಿಗಳ ಬಗ್ಗೆ ಜಾಗ್ರತಿ ಇರಬೇಕು. ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು. ಇಂದಿನ ಕಟ್ಟುಪಾಡುಗಳಿಂದ ಹೊರಬಂದು ಉತ್ತಮ ಸಾಧಕರಾಗಬೇಕು ಎಂದರು. ಡಾ. ಪ್ರಕಾಶ್ ಎಂ. ಮೋರಗೆ ಅವರು ಅಧ್ಯಕ್ಷತೆ ವಹಿಸಿದ್ದರು. ಸಂಯೋಜಕ ಡಾ. ಮಲ್ಲಿಕಾರ್ಜುನ್ ಶೆಟ್ಟಿ ಅವರು ಸ್ವಾಗತಿಸಿದರು. ಡಾ. ಪ್ರಕಾಶ್ ಬಡಿಗೇರ್ ಅವರು ಅತಿಥಿಗಳನ್ನು ಪರಿಚಯ ಮಾಡಿದರು. ಡಾ. ಅಶೋಕ್ ಸಪಳೆ ಅವರು ಕಾರ್ಯಕ್ರಮ ನಿರೂಪಿಸಿದರು. ಡಾ. ವಿದ್ಯಾವತಿ ಅವರು ವಂದಿಸಿದರು.
ಕಾರ್ಯಕ್ರಮದಲ್ಲಿ ಸಂತೋಷ್ ಹೂಂಪ್ಲಿ, ಡಾ. ಜ್ಯೋತಿ ಕೆಎಸ್, ಡಾ. ಸಂತೋಷ್ ಕಂಬಾರ್, ಡಾ. ಸಂತೋಷ್ ಹೂಗಾರ್, ಡಾ. ಅಣವೀರಪ್ಪ ಬೋಳೆವಾಡ್, ಡಾ. ಪ್ರಕಾಶ್ ಪಾಟೀಲ್, ಡಾ. ಸುರೇಶ್ ಬಡಿಗೇರ್, ಡಾ. ರಾಜಕುಮಾರ್ ಕಟ್ಟಿಮನಿ, ಡಾ. ಮಾಳಪ್ಪ ದಂಡಗುAಡ್ ಮುಂತಾದವರು ಉಪಸ್ಥಿತರಿದ್ದರು.