ಬುದ್ಧನಗರ ಹಳೆಯ ಬಾವಿ ದುರಸ್ಥಿಗೊಳಿಸಲು ಮನವಿ
ಕಲಬುರಗಿ,ಜು.27- ಶತಮಾನಗಳ ಹಳೆಯದಾದ ಭಾವಿ ನಗರದ ವಾರ್ಡ್ ನಂ.49 ರಲ್ಲಿ ಬರುವ ಬುದ್ಧನಗರದಲ್ಲಿದ್ದು, ಇದರ ಜಿರ್ನೋದ್ದಾರ ಕೈಗೊಂಡು ಬಡಾವಣೆಯ ನಾಗರಿಕರಿಗೆ ಪೈಪ್ ಲೈನ್ ಮೂಲಕ ನೀರಿನ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳುವಂತೆ ಜೈಕನ್ನಡಿಗರ ಸೇನೆ ರಾಜ್ಯಾಧ್ಯಕ್ಷ ದತ್ತು ಎಚ್.ಭಾಸಗಿ ಅವರು, ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.
ಸುಮಾರು 100 ವರ್ಷಗಳ ಹಳೆಯದಾದ ಈ ಭಾವಿಯ ತಡೆಗೋಡೆ, ಮಣ್ಣು ಮತ್ತು ಗಿಡಮರಗಳು ಕುಸಿದು ಭಾವಿಯೊಳಗೆ ಬಿದ್ದು ಸಂಪೂರ್ಣ ಮುಚ್ಚಿಹೋಗಿರುತ್ತದೆ. ಐತಿಹಾಸಿವಾದ ಈ ಭಾವಿಯನ್ನು ದುರಸ್ಥಿಗೊಳಿಸಿ ಇದರಲ್ಲಿ ಪೈಪ್ ಲೈನ್ ಜೊಡಣೆ ಮಾಡಿಸಿ ಬಡಾವಣೆಯ ಸುತ್ತಲಿನ ನಾಗರಿಕರಿಗೆ ನೀರು ಒದಗಿಸಲು ಮುಂದಾಗಬೇಕು, ಬೇಸಿಗೆಯಲ್ಲಿ ಇಲ್ಲಿನ ನಾಗರಿಕರು ಎದುರಿಸುತ್ತಿದ್ದ ಸಮಸ್ಯೆಗೆ ಈ ಭಾವಿ ವರವಾಗಲಿದೆ ಹೀಗಾಗಿ ಜಿಲ್ಲಾಡಳಿತ ಈ ಕುರಿತು ತುರ್ತು ಗಮನ ಹರಿಸಿ ಕ್ರಮ ಕೈಗೋಳ್ಳಬೇಕು ಎಂದು ದತ್ತು ಭಾಸಗಿ ಅವರು ಮನವಿ ಮಾಡಿದ್ದಾರೆ. ಅವರೊಂದಿಗೆ ರಾಮಾ ಪೂಜಾರಿ, ಹುಸೇನ, ಅನೀಲ ತಳವಾರ, ಮಲ್ಲು ಆಲಗೂಡ, ಶಿವು ಮಡಕಿ, ಶಂಕರ, ಪ್ರವೀಣ ಭರಣಿ ಸೇರಿದಂತೆ ಹಲವರಿದ್ದರು.