ಮಳೆಗಾಲದಲ್ಲೂ ವಾಡಿಯಲ್ಲಿ ಕುಡಿಯುವ ನೀರಿಗೆ ಬರ
ವಾಡಿ,ಜು.27-ರಾಜ್ಯಾದ್ಯಂತ ವರುಣನ ಅಬ್ಬರ ಜೋರಾಗಿದೆ. ಆದರೆ ವಾಡಿ ಪಟ್ಟಣದಲ್ಲಿ ಮಾತ್ರ ಮಳೆಗಾಲದ ಈ ಸಂದರ್ಭದಲ್ಲಿಯೂ ಮಾತ್ರ ಕುಡಿಯುವ ನೀರಿಗೆ ಬರ ಬಂದಿದೆ.
ಕಳೆದ ಒಂದು ವಾರದಿಂದ ನೀರಿಲ್ಲದೆ ಜನ ಪರದಾಡುವಂತಾಗಿದೆ. ಮಹಿಳೆಯರು ಹನಿ ನೀರಿಗಾಗಿ ಕೊಡ ಹಿಡಿದು ಅಲೆದಾಡುವಂತಾಗಿದೆ.
ಸುಮಾರು 50 ಸಾವಿರ ಜನಸಂಖ್ಯೆ ಹೊಂದಿರುವ ವಾಡಿ ಪಟ್ಟಣದಲ್ಲಿ 23 ವಾರ್ಡ್ಗಳಿದ್ದು, ಇಲ್ಲಿ ಶಾಶ್ವತ ಕುಡಿಯುವ ನೀರಿನ ಘಟಕವಿದ್ದರೂ ಜನರಿಗೆ ಮಾತ್ರ ಶುದ್ಧ ನೀರು ಸಿಗುತ್ತಿಲ್ಲ. ಒಂದು ವಾರದಿಂದ ಕುಡಿಯುವ ನೀರಿನ ಹಾಹಾಕಾರ ಉಂಟಾದರೂ ಚುನಾಯಿತ ಜನ ಪ್ರತಿನಿಧಿಗಳಾಗಲಿ, ಅಧಿಕಾರಿಗಳಲಿ ಜನರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಸಂಬAಧಪಟ್ಟವರು ಈಗಲಾದರೂ ಗಮನ ಹರಿಸಿ ಕುಡಿಯುವ ನೀರಿನ ಸಮಸ್ಯೆ ಬಗೆ ಹರಿಸಬೇಕು ಎಂಬುದು ಪಟ್ಟಣದ ನಾಗರಿಕರ ಆಗ್ರಹವಾಗಿದೆ.