ಮನುಷ್ಯನ ಪರಿಪೂರ್ಣತೆಗೆ ಸಂಸ್ಕೃತಿ ಮತ್ತು ಕಲೆ ಅಗತ್ಯ
ಬಾಗಲಕೋಟೆ,ಜು೨೭: ಮನುಷ್ಯನ ಪರಿಪೂರ್ಣತಗೆ ಸಂಸ್ಕೃತಿ ಮತ್ತು ಕಲೆ ಅಗತ್ಯವಾಗಿದ್ದು, ಪಠ್ಯದ ಜೊತೆಗೆ ಸಾಂಸ್ಕೃತಿಕ ಚಟುವಟಿಕೆಗೆಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸಬೇಕೆಂದು ನಿವೃತ್ತ ಪ್ರಾಚಾರ್ಯರು ಹಾಗೂ ಖ್ಯಾತ ಜಾನಪದ ವಿದ್ವಾಂಸರಾದ ಡಾ. ಶಂಭು ಬಳಿಗಾರ ಹೇಳಿದರು.
ವಿದ್ಯಾಗಿರಿಯಲ್ಲಿರುವ ಪ್ರತಿಷ್ಠಿತ ಎಂ.ಬಿ.ಎ ಸಂಸ್ಥೆಯಾದ ಬಿ.ವಿ.ವಿ. ಸಂಘದ, ಎನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜಮೆಂಟ್ ಸ್ಟಡೀಸ್, (ಬಿಮ್ಸ್) ವತಿಯಿಂದ ಬಿಮ್ಸ್ನ ಸಭಾಭವನದಲ್ಲಿ ನಡೆದ ಒಂದು ದಿನದ ಬಿಮ್ಸ್ ಕಲಾ ಪರ್ವ ಸಾಂಸ್ಕೃತಿಕ ಹಬ್ಬವನ್ನು ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳಿಗೆ ಸಂಸ್ಕೃತಿ ಸಂಸ್ಕಾರದ ರೂಪವನ್ನು ಕಲಿಸಿದರೆ, ಕಲೆ ಸೌಂದರ್ಯದ ಮನಸ್ಸನ್ನು ಅರಳಿಸುತ್ತದೆ, ಪ್ರಧಾನವಾದ ಲಿಲಿತ ಕಲೆಗಳು ಮನು?À್ಯನ ಬದುಕಿಗೆ ಪೂರಕವಾಗಿವೆ, ಬದುಕಿನಲ್ಲಿ ಮಾತು ನಮ್ಮ ಸಂಸ್ಕೃತಿಯನ್ನು ತಿಳಿಸುತ್ತದೆ, ವಿವೇಕದಲ್ಲಿ ವಿನಯ ಬೇರೆತಾಗ ಜೀವನ ಅರಳುವುದು, ಎಲ್ಲ ವಿದ್ಯಾರ್ಥಿಗಳಲ್ಲಿ ತಮ್ಮದೆಯಾದ ಶಕ್ತಿ ಸಾಮರ್ಥ್ಯವಿದ್ದು ಅದನ್ನು ಇಂಥಹ ಸಾಂಸ್ಕೃತಿಕ ವೇದಿಕೆ ಮೂಲಕ ಹೊರ ತರುವ ಪ್ರಯತ್ನವೇ ಈ ಕಲಾ ಪರ್ವದ ಮೂಲ ಉದ್ದೇಶವಾಗಿದೆ, ವಿದ್ಯಾರ್ಥಿಗಳ ಶೈಕ್ಷಣಿಕ ಈ ೨೫ ವ?Àð, ಜೀವನದ ೭೫ ವ?Àðಕ್ಕೆ ಸಮ ಆದ್ದರಿಂದ ವಿದ್ಯಾರ್ಥಿಗಳು ಯಾವುದೆ ಆಕ?Àðಣೆಗೆ ಒಳಗಾಗಗದೆ ಶೈಕ್ಷಣಿಕ ಅಧ್ಯಯನದಲ್ಲಿನ ಪ್ರತಿಕ್ಷಣವು ಜ್ಞಾನದ ಅರಿವಿಗಾಗಿ ಬಳಸಿ, ಜೊತೆಗೆ ಇಂಥಹ ಸಾಂಸ್ಕೃತಿಕ ಹಬ್ಬಗಳಲ್ಲಿ ಭಾಗವಹಿಸಿ, ಮನು?À್ಯನ ಪರಿಪೂರ್ಣತೆಗೆ ಸಂಸ್ಕೃತಿ ಮತ್ತು ಕಲೆ ಅಗತ್ಯವಾಗಿವೆ ಎಂದರು.
ಕಾಲೇಜುಗಳ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಗುರುಬಸವ ಸೂಳಿಬಾವಿ ಮಾತನಾಡಿ ಬಿ.ವಿ.ವಿ. ಸಂಘದ, ಎನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜಮೆಂಟ್ ಸ್ಟಡೀಸ್, (ಬಿಮ್ಸ್) ಈಗ ೨೫ ನೇ ವರ್ಷದಲ್ಲಿ ಮುನ್ನಡಯತ್ತಿದ್ದು ಈ ಭಾಗದ ವಿದ್ಯಾರ್ಥಿಗಳ ಅಧ್ಯಯನಕ್ಕೆ ತನ್ನದೆಯಾದ ಕೋಡುಗೆ ನೀಡುತ್ತಿದೆ. ವಿದ್ಯಾರ್ಥಿಗಳು ತಮ್ಮ ಸುಂದರ ಬದುಕು ಕಟ್ಟಿಕೊಂಡು ಒಳ್ಳೆಯ ಪ್ರಜೆಯಾಗಿ ದೇಶಾಭಿಮಾನಿಯಾಗಿ ತಂದೆ ತಾಯಿಯ ಋಣ ತಿರಿಸುವ ಕೆಲಸ ಮಾಡಬೇಕಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ ಅವರು ಮಾತನಾಡಿದರು
ಇದೆ ಸಂದರ್ಭದಲ್ಲಿ ಡಾ.ಶಂಭು ಬಳಿಗಾರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸಂಸ್ಥೆಯ ನಿರ್ದೇಶಕರಾದ ಡಾ. ಪ್ರಕಾಶ್ ಕೆ. ವಡವಡಗಿಯವರು ಸ್ವಾಗತಿಸಿದರು, ಕಾರ್ಯಕ್ರಮ ಸಂಯೋಜಕಿ ಶೃತಿ ವಾರದ ಪ್ರಸ್ತಾವಿಕ ಮಾತನಾಡಿದರು, ವಿದ್ಯಾರ್ಥಿನಿ ವಾಸವಿ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಹರ್ಶಿತ ಅಂಗಡಿ,ನಿಕಿತಾ ಎಡಿಕೆ ಕಾರ್ಯಕ್ರಮ ನಿರೂಪಿಸಿದರೆ, ಹರಿಪ್ರೀಯಾ ಎಂಚಲ್ಲಿ ವಂದಿಸಿದರು. ಕಾರ್ಯಕ್ರಮದಲ್ಲಿ ಬಿ.ವಿ.ವಿ ಸಂಘದ ಸದಸ್ಯರು, ವಿವಿಧ ಮಹಾವಿದ್ಯಾಲಯಗಳ ಪ್ರಾಚಾರ್ಯರು.ಸಿಬ್ಬಂದಿ ವರ್ಗ ಭಾಗವಹಿಸಿದ್ದರು.
ಬಿಮ್ಸ್: ಕಲಾ ಪರ್ವದಲ್ಲಿ ಆಯೋಜಿಸಲಾದ ಸ್ಪರ್ಥೆಗಳನ್ನು ಒಟ್ಟು ನಾಲ್ಕು ವಿಭಾಗಳಾಗಿ ವಿಂಗಡಿಸಿದ್ದು , ರಂಗೋಲಿ ಸ್ಪರ್ಥೆ, ಫೇಸ್ ಪೇಂಟಿAಗ್, ಸಮೂಹ ನೃತ್ಯ, ಗುಂಪು ಗಾಯನಗಳಾಗಿದ್ದು ಈ ಸಾಂಸ್ಕೃತಿಕ ಹಬ್ಬದಲ್ಲಿ ೨೦ಕ್ಕೂ ಹೆಚ್ಚಿನ ಪದವಿ ೨೦೦ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.