ಡೆಂಗ್ಯೂ ಜಾಗೃತಿ ಕಾರ್ಯಕ್ರಮ
ಧಾರವಾಡ,ಜು೨೭: ಡೆಂಘೀ ರೋಗದ ಆತಂಕ ಬೇಡ. ಎಲ್ಲರೂ ಅದರಲ್ಲೂ ಸಾರ್ವಜನಿಕರು ಒಗ್ಗಟ್ಟಾಗಿ ನಿಯಂತ್ರಣಕ್ಕೆ ಕೈ ಜೋಡಿಸಿದರೆ ಬಹುಬೇಗ ನಿಯಂತ್ರಣಕ್ಕೆ ಬರಲಿದೆ. ಬೆಳಿಗ್ಗೆ ಸಮಯದಲ್ಲಿಯೇ ಡೆಂಘೀ ರೋಗ ತರುವ ಸೊಳ್ಳೆ ವಿಶೇ?Àವಾಗಿ ಮಕ್ಕಳಿಗೆ ಕಚ್ಚಲಿದ್ದು ಜನರು ಎಚ್ಚರ ವಹಿಸಬೇಕು. ಜ್ವರ ಬಂದರೆ ತಪ್ಪದೇ ವೈದ್ಯರನ್ನು ಸಂಪರ್ಕಿಸಬೇಕು. ಡೆಂಗ್ಯೂ ಖಾಯಿಲೆ ಪ್ರತಿ ಮಳೆಗಾಲದಲ್ಲಿಯೂ ಅನೈರ್ಮಲ್ಯ ಸ್ಥಳಗಳಲ್ಲಿ, ಅನಗತ್ಯ ನೀರು ಸಂಗ್ರಹಣ ಸ್ಥಳಗಳಲ್ಲಿ ಕಾಣಿಸುತ್ತದೆ. ಡೆಂಗ್ಯೂ ಖಾಯಿಲೆ ಬಗ್ಗೆ ಭಯ, ಆತಂಕ ಬೇಡ. ತಿಳುವಳಿಕೆ, ಮುಂಜಾಗೃತೆ ವಹಿಸುವುದೇ ಇದಕ್ಕೆ ಮದ್ದು ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಹೇಳಿದರು.
ಅವರು ಅಮ್ಮಿನಭಾವಿ ಗ್ರಾಮದ ವಾಲ್ಮೀಕಿ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಮತ್ತು ಜಿಲ್ಲಾ ಆರೋಗ್ಯ ಇಲಾಖೆ ಸಂಯುಕ್ತವಾಗಿ ಆಯೋಜಿಸಿದ್ದ ಶುಕ್ರವಾರ ಸೊಳ್ಳೆ ನಿರ್ಮೂಲನಾ ದಿನಾಚರಣೆ ಹಾಗೂ ಡೆಂಗ್ಯೂ ನಿಯಂತ್ರಣಕ್ಕಾಗಿ ಸಾರ್ವಜನಿಕ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಡೆಂಗ್ಯೂ ನಿಯಂತ್ರಣ ಮತ್ತು ನಿರ್ಮೂಲನೆ ನಮ್ಮೆಲ್ಲರ ಕೈಯಲ್ಲಿದೆ. ನಮ್ಮ ಮನೆ ಹಾಗೂ ಮನೆ ಸುತ್ತಮುತ್ತ ನೀರು ನಿಲ್ಲದಂತೆ, ಟೈರ್, ಪ್ಲಾಸ್ಟಿಕ್ ಸೇರಿದಂತೆ ಯಾವುದೇ ನಿರುಪಯುಕ್ತ ವಸ್ತು ಹಾಗೂ ತ್ಯಾಜ್ಯಗಳಲ್ಲಿ ನೀರು ಶೇಖರಣೆ ಆಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಮನೆಯಲ್ಲಿ ಬಳಕೆಗೆ, ಕುಡಿಯಲು ಸಂಗ್ರಹಿಸುವ ನೀರಿನ ತೋಟ್ಟಿ ಹಾಗೂ ಸಂಗ್ರಹ ಉಪಕರಣಗಳ ಮೇಲೆ ಮುಚ್ಚಬೇಕು ಮತ್ತು ಹೊಸ ನೀರು ತುಂಬುವಾಗ ಮೊದಲಿನ ನೀರನ್ನು ಚೆಲ್ಲಿ, ಸ್ವಚ್ಛವಾಗಿ ತೊಳೆದು ಒಣ ಅರಿವೆಯಿಂದ ಒರಿಸಿ, ಮತ್ತೇ ನೀರು ತುಂಬಬೇಕು. ಇ?ÀÄ್ಟ ಜಾಗೃತಿವಹಿಸಿದರೆ ಡೆಂಗ್ಯೂ ಮುಕ್ತರಾಗುಬಹುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
೩೫೦೦ ರಕ್ತದ ಮಾದರಿ ಪರೀಕ್ಷೆ: ಜನವರಿ ಒಂದರಿAದ ಜುಲೈ ೨೫ ರವರೆಗೆ ಡೆಂಗ್ಯೂ ಶಂಕೆಯಿAದ ಸುಮಾರು ೩೫೦೦ ರಕ್ತದ ಮಾದರಿಗಳನ್ನು ತಪಾಸಣೆಗೆ ಒಳಪಡಿಸಲಾಗಿದೆ. ಇದರಲ್ಲಿ ೫೨೧ ಜನರಲ್ಲಿ ಡೆಂಗ್ಯೂ ಪಾಜಿಟಿವ್ ಗುರುತಿಸಲಾಗಿದ್ದು, ಇವರಿಗೆಲ್ಲ ಅಗತ್ಯ ಔ?Àಧಿ, ಚಿಕಿತ್ಸೆ, ಆರೈಕೆ ನೀಡಿ ಗುಣಮುಖರನ್ನಾಗಿ ಮಾಡಲಾಗಿದೆ. ಕಳೆದ ೨೪ ಗಂಟೆಯಲ್ಲಿ ೧೫೪ ಜನರ ರಕ್ತ ಪರೀಕ್ಷೆ ಮಾಡಲಾಗಿದ್ದು, ೭ ಜನರಲ್ಲಿ ಪಾಜಿಟಿವ್ ಕಂಡು ಬಂದಿದೆ. ಇವತ್ತಿನವರೆಗೆ ಜಿಲ್ಲೆಯ ವಿವಿಧ ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ೧೫ ಜನ ಡೆಂಗ್ಯೂ ಶಂಕಿತರು ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದರು.
ಬೇವಿನ ಎಣ್ಣೆ ಬಳಕೆ: ಮಳೆಗಾಲದ ತಂಪು ವಾತಾರಣ ಹಾಗೂ ಡೆಂಗ್ಯೂ ಪ್ರಕರಣಗಳಿಂದ ಸುರಕ್ಷತೆ ಪಡೆಯಲು ಕೈ, ಕಾಲು ಮುಚ್ಚುವಂತೆ ಬಟ್ಟೆ ಧರಿಸುವುದು ಉತ್ತಮ ಆರೋಗ್ಯ ಇಲಾಖೆ ಸಲಹೆ ಪ್ರಕಾರ ಡೆಂಗ್ಯೂ ತರುವ ಅನಾಫಿಲಿಸ್ ಸೊಳ್ಳೆಯಿಂದ ರಕ್ಷಣೆ ಪಡೆಯಲು ಕೈ, ಕಾಲುಗಳಿಗೆ ಕೊಬ್ಬರಿ ಎಣ್ಣೆ ಮಿಶ್ರಣ ಮಾಡಿದ ಬೇವಿನ ಎಣ್ಣೆ ಹಚ್ಚಿಕೊಳ್ಳಬೇಕು.
ಸರ್ಕಾರದ ನಿರ್ದೇಶನದಂತೆ ಡೆಂಗ್ಯೂ ಹಾಟ್‌ಸ್ಪಾಟ್ ಪ್ರದೇಶದಲ್ಲಿ ಬೇವಿನ ಎಣ್ಣೆ ವಿತರಣೆ ಕಾರ್ಯಕ್ರಮ ಸಹ ನಡೆಯುತ್ತಿದೆ. ಬೇವಿನ ಎಣ್ಣೆಯಲ್ಲಿ ಕೆಲವು ರಾಸಾಯನಿಕ ಅಂಶಗಳನ್ನು ಸೇರ್ಪಡೆ ಮಾಡಲಾಗಿದೆ. ಇದರ ವಾಸನೆಯಿಂದ ಸೊಳ್ಳೆ ಕಚ್ಚುವುದಿಲ್ಲ. ಒಂದು ಸ್ಪೂನ್ ಬೇವಿನ ಎಣ್ಣಿಗೆ ನಾಲ್ಕು ಸ್ಪೂನ್ ಕೊಬ್ಬರಿ ಎಣ್ಣೆ ಮಿಶ್ರಣ ಮಾಡಿ ಕೈ, ಕಾಲು, ದೇಹದ ಇತರ ಭಾಗಗಳಿಗೆ ಈ ಮಿಶ್ರಣದ ಎಣ್ಣೆ ಹಚ್ಚಬೇಕು. ಇದರಿಂದ ಅನಾಫಿಲಿಸ್ ಸೊಳ್ಳೆ ಕಚ್ಚುವುದಿಲ್ಲ. ಈ ಸೊಳ್ಳೆ ಹಗಲು ಹೊತ್ತಿನಲ್ಲಿ ಮಾತ್ರ ಕಚ್ಚುವುದರಿಂದ ಮಕ್ಕಳು, ಮಹಿಳೆಯರು ಸೇರಿದಂತೆ ಎಲ್ಲರೂ ಇದರಿಂದ ಸುರಕ್ಷತೆ ಪಡೆಯಬಹುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಸರಕಾರಿ ಆಸ್ಪತ್ರೆಗಳಲ್ಲಿ ರಕ್ತ ಪರೀಕ್ಷೆ, ಚಿಕಿತ್ಸೆ ಉಚಿತ: ಯಾರಿಗೆ ಆಗಲಿ ಜ್ವರ ಬಂದ ತಕ್ಷಣ ನಿರ್ಲಕ್ಷವಹಿಸದೆ ಆಸ್ಪತ್ರೆಗೆ ತೋರಿಸಬೇಕು. ಎಲ್ಲ ಸರಕಾರಿ ಆಸ್ಪತ್ರೆಗಳಲ್ಲಿ ಡೆಂಗ್ಯೂ ಸೇರಿದಂತೆ ಎಲ್ಲ ಖಾಯಿಲೆಗಳಿಗೆ ರಕ್ತ ಪರೀಕ್ಷೆ, ಚಿಕಿತ್ಸೆ ಉಚಿತವಾಗಿದೆ. ಖಾಸಗಿ ಆಸ್ಪತ್ರೆ ಹಾಗೂ ಪ್ರಯೋಗಾಲಯಗಳಿಗೆ ಶುಲ್ಕ ರೂ. ೩೦೦ ದರ ನಿಗದಿ ಮಾಡಿ, ಸರಕಾರ ಆದೇಶಿಸಿದೆ. ಡೆಂಗ್ಯೂ ರಕ್ತ ಪರೀಕ್ಷೆ ದರಗಳನ್ನು ಆಸ್ಪತ್ರೆ ಹಾಗೂ ಪ್ರಯೋಗಾಲಯಗಳಲ್ಲಿ ಎದ್ದು ಕಾಣುವಂತೆ ಪ್ರಕಟಿಸಲು ಜಿಲ್ಲಾಡಳಿತ ನಿರ್ದೇಶಿಸಿದೆ ಎಂದು ಅವರು ಹೇಳಿದರು.
ಹಾಟ್ ಸ್ಪಾಟ್, ತಾತ್ಕಾಲಿಕ ಫೀವರ್ ಕ್ಲೀನಿಕ್: ಡೆಂಗ್ಯೂ ಪಾಜಿಟಿವ್ ೩ ಕ್ಕಿಂತ ಹೆಚ್ಚು ಪ್ರಕರಣಗಳು ಒಂದೇ ಸ್ಥಳ ಅಥವಾ ಒಂದೇ ಪ್ರದೇಶದಲ್ಲಿ ಕಂಡು ಬಂದಲ್ಲಿ ಅದನ್ನು ಡೆಂಗ್ಯೂ ಹಾಟ್‌ಸ್ಪಾಟ್ ಎಂದು ಪರಿಗಣಿಸಿ, ಅಲ್ಲಿ ಲಾರ್ವಾ ಸೊಳ್ಳೆ ನಿರ್ಮೂಲನೆ ಹಾಗೂ ಮನೆ ಮನೆ ಜಾಗೃತಿಗೆ ಆದ್ಯತೆ ನೀಡಲಾಗುತ್ತದೆ. ತಕ್ಷಣ ಡೆಂಗ್ಯೂ ಹಾಟ್‌ಸ್ಪಾಟ್ ಸುತ್ತಮುತ್ತಲಿನ ಪ್ರದೇಶಕ್ಕೆ ಅನುಕೂಲವಾಗುವಂತೆ ಸುರಕ್ಷತಾ ಕ್ರಮ ವಹಿಸಲಾಗುತ್ತದೆ.
ಒಂದು ವಾರದ ಪರೀಕ್ಷೆಯಲ್ಲಿ ಯಾವ ಪ್ರದೇಶದಲ್ಲಿ ಹೆಚ್ಚು ಡೆಂಘೀ ಪ್ರಕರಣಗಳು ದಾಖಲಾಗುತ್ತವೆಯೋ ಆ ಪ್ರದೇಶವನ್ನು ಹಾಟ್‌ಸ್ಪಾಟ್ ಎಂದು ಗುರುತಿಸಿ ಅಲ್ಲಿ ತಾತ್ಕಾಲಿಕ ಫೀವರ್ ಕ್ಲಿನಿಕ್ ಆರಂಭಿಸಲಾಗುತ್ತಿದೆ. ಇದರಿಂದ ಆ ಪ್ರದೇಶದ ಶಂಕಿತ ಡೆಂಘೀ ಪ್ರಕರಣಗಳನ್ನು ಬೇಗ ಪತ್ತೆ ಹಚ್ಚಿ ನಿಯಂತ್ರಿಸಲು ಸುಲಭ ಆಗಲಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಡೆಂಗ್ಯೂ ಶಂಕಿತರ ಮತ್ತು ಪಾಜಿಟಿವ್ ಇರುವವರ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆ, ಕಿಮ್ಸ್ ಮತ್ತು ಎಲ್ಲ ಸರಕಾರಿ ಆಸ್ಪತ್ರೆಗಳಲ್ಲಿ ಲಭ್ಯತೆಗೆ ಅನುಗುಣವಾಗಿ ಡೆಂಘೀ ರೋಗಿಗಳಿಗಾಗಿ ಪ್ರತ್ಯೇಕ ಹಾಸಿಗೆಗಳನ್ನು ಕಾಯ್ದಿರಿಸಲಾಗಿದೆ. ಅಗತ್ಯ ಔ?Àಧಿ ಸಹ ಸಂಗ್ರಹ ಮಾಡಲಾಗಿದೆ. ಜಿಲ್ಲೆಯಲ್ಲಿ ಡೆಂಗ್ಯೂ ನಿಯಂತ್ರಣದಲ್ಲಿದ್ದು, ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಬಯಲು ಶೌಚ ಮುಕ್ತ ಪ್ರದೇಶ: ಬಯಲು ಶೌಚ ಸಂಪೂರ್ಣವಾಗಿ ತೊಲಗಿಸಲು ಸ್ವಚ್ಛ ಭಾರತ ಅಭಿಯಾನ ಅಂಗವಾಗಿ ಮನೆಮನೆಗಳಲ್ಲಿ ವೈಯಕ್ತಿಕ ಮತ್ತು ಸಮುದಾಯ ಶೌಚಾಲಯಗಳನ್ನು ಕಟ್ಟಿಸಲಾಗಿದೆ. ಸಮೀಕ್ಷೆ ಮಾಡಿ ಯಾವ ಪ್ರದೇಶದಲ್ಲಿ ಶೌಚಾಲಯಗಳಿಲ್ಲವೋ ಅಲ್ಲಿ ಕ್ಯಾಂಪೇನ್ ಮಾಡಲಾಗುವುದು ಎಂದರು.
ಗಮನ ಸೇಳೆದ ‘ಡೆಂಗ್ಯೂ ಡೆಂಗ್ಯೂ’ ಕಿರು ನಾಟಕ: ಡೆಂಗ್ಯೂ ಜನಜಾಗೃತಿ ಕಾರ್ಯಕ್ರಮದಲ್ಲಿ ಅಮ್ಮಿಭಾವಿ ಗ್ರಾಮದ ಶ್ರೀ ಶಾಂತೇಶ್ವರ ಪ್ರೌಢಶಾಲೆ ವಿದ್ಯಾರ್ಥಿನೀಯರು ಪ್ರಸ್ತುತಪಡಿಸಿದ `ಡೆಂಗ್ಯೂ, ಡೆಂಗ್ಯೂ’ ನಾಟಕ ಸಾರ್ವಜನಿಕರ ಗಮನ ಸೆಳೆಯಿತು.
ವಿದ್ಯಾರ್ಥಿನೀಯರು, ಕುಟುಂಬದ ಪ್ರಾತ್ರದಾರಿಗಳಾಗಿ ದಿನನಿತ್ಯ ಘಟನಾವಳಿಗಳನ್ನು ಸೇರಿಸಿಕೊಂಡು ಡೆಂಗ್ಯೂ ಹರಡಲು ನಮ್ಮ ನಿರ್ಲಕ್ಷ್ಯತೆ, ಉದಾಸೀನತೆ ಎ?ÀÄ್ಟ ಕಾರಣ ಎಂಬುದನ್ನು ಜನರಿಗೆ ಮನಮುಟ್ಟುವಂತೆ ಸಹ ಶಿಕ್ಷಕ ಆದಿತ್ಯ ದುರ್ಗಾದಾಸ್ ನಿರ್ದೇಶನದಲ್ಲಿ ಕಿರುನಾಟಕವನ್ನು ಅದ್ಭುತವಾಗಿ ಪ್ರಸ್ತುತ ಪಡಿಸಿದರು. ಜಿಲ್ಲಾಧಿಕಾರಿಗಳಿಂದ ಭೇ?À ಎನಿಸಿಕೊಂಡು, ಪ್ರಶಂಸೆ ಪಡೆದರು.
*ಕರಪತ್ರ, ಬೇವಿನ ಎಣ್ಣಿ ವಿತರಣೆ: ಸೊಳ್ಳೆ ನಿರ್ಮೂಲನೆ ಹಾಗೂ ಲಾರ್ವಾ ನಿರ್ಮೂಲನೆ ಕಾರ್ಯಕ್ರಮದ ಅಂಗವಾಗಿ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಅಮ್ಮಿನಭಾವಿ ಗ್ರಾಮದ ವಾಲ್ಮೀಕಿ ಓಣಿ ಸೇರಿದಂತೆ ಸುತ್ತಲಿನ ಮನೆಗಳಿಗೆ ತೆರಳಿ ಡೆಂಗ್ಯೂ ಜಾಗೃತಿಯ ಕರಪತ್ರಗಳನ್ನು ವಿತರಿಸಿದರು. ಮತ್ತು ಡೆಂಗ್ಯೂ ಖಾಯಿಲೆಯಿಂದ ಗುಣಮುಖರಾದ ಮನೆಗಳಿಗೆ ತೆರಳಿ ಜಾಗೃತಿ ಮೂಡಿಸಿದರು. ವಾಲ್ಮೀಕಿ ಓಣಿ ಸೇರಿದಂತೆ ಡೆಂಗ್ಯೂ ಹಾಟ್ ಸ್ಪಾಟ್ ಆಗಬಹುದಾದ ಪ್ರದೇಶಗಳಲ್ಲಿ ಆರೋಗ್ಯ ಇಲಾಖೆಯಿಂದ ನೀಡುವ ಬೇವಿನ ಎಣ್ಣೆ (ನೀಮ್ ಆಯಿಲ್) ಬಾಟಲ್‌ಗಳನ್ನು ವಿತರಿಸಿದರು.
ಡೆಂಗ್ಯೂ ಜಾಗೃತಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಮ್ಮಿನಭಾವಿ ಗ್ರಾಮ ಪಂಚಾಯತ ಅಧ್ಯಕ್ಷೆ ನೀಲಮ್ಮ ತಿದಿ ವಹಿಸಿ, ಮಾತನಾಡಿದರು. ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಶಶಿ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಬಿ.ಡಿ.ಚೆವರಡ್ಡಿ ಸ್ವಾಗತಿಸಿದರು. ಅಂಗನವಾಡಿ ಶಿಕ್ಷಕಿ ಸವಿತಾ ಅಂಗಡಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಜಿಲ್ಲಾ ಮಲೇರಿಯಾ ಅಧಿಕಾರಿ ಡಾ. ಮಂಜುನಾಥ ಸೊಪ್ಪಿಮಠ, ಅಮ್ಮಿನಭಾವಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸ್ಥಾನಿಕ ವೈದ್ಯಾಧಿಕಾರಿ ಡಾ. ಬೀನಾ ಶೂರ್ಪಾಲಿ, ಅಮ್ಮಿನಭಾವಿ ಗ್ರಾಮ ಪಂಚಾಯತಿ ಸದಸ್ಯರು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು, ಶಾಲಾ ವಿದ್ಯಾರ್ಥಿಗಳು, ಸ್ತಿçÃಶಕ್ತಿ ಸಂಘಗಳ ಸದಸ್ಯರು, ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.