ಆಲಮಟ್ಟಿ ಅಣೆಕಟ್ಟೆಗೆ ಹೆಚ್ಚಿದ ನೀರು: ಪ್ರವಾಹ ಭೀತಿ
ವಿಜಯಪುರ,ಜು.27:ನೆರೆಯ ಮಹಾರಾಷ್ಟ್ರದಲ್ಲಿ ಮಳೆಯ ಅಬ್ಬರ ಮುಂದುವರಿದಿದ್ದು, ಭಾರಿ ಪ್ರಮಾಣದ ನೀರು
ಆಲಮಟ್ಟಿ ಡ್ಯಾಂಗೆ ಹರಿದು ಬರುತ್ಯಿದೆ. ಹೊರ ಹರಿವು ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ನದಿ ದಂಡೆ ಜನರಿಗೆ ಪ್ರವಾಹ ಭೀತಿ ಹೆಚ್ಚಿದೆ.
ವಿಜಯಪುರ ಜಿಲ್ಲೆ ನಿಡಗುಂದಿ ತಾಲೂಕಿನ ಆಲಮಟ್ಟಿ
ಡ್ಯಾಂಗೆ 2,09,917 ಕ್ಯೂಸೆಕ್ ಒಳ ಹರಿವು ಇದ್ದು
ಡ್ಯಾಂನಿAದ 3,00,000 ಕ್ಯೂಸೆಕ್ ನೀರು ಹೊರ ಹರಿವು ಇದೆ. ಒಳ ಹಾಗೂ ಹೊರ ಹರಿವು ಇನ್ನೂ ಹೆಚ್ಚುವ ಸಾಧ್ಯತೆ ಇದೆ.
ಅರಳಿದಿನ್ನಿ ಗ್ರಾಮದ ಕೆಲ ಜಮೀನಗಳಿಗೆ ನೀರು ನುಗ್ಗಿದ್ದು, ವಿವಿಧ ಬೆಳೆಗಳು ಜಲಾವೃತಗೊಂಡಿವೆ. ಬೆಳೆಗಳು ನಾಶವಾಗುವ ಆತಂಕವನ್ನು ರೈತರು ವ್ಯಕ್ತಪಡಿಸಿದ್ದಾರೆ.
519.60 ಮೀಟರ್ ಎತ್ತರ ಡ್ಯಾಂನಲ್ಲಿ 516.68 ಮೀಟರ್ ನೀರು ಸಂಗ್ರಹವಾಗಿದೆ.
ಅಣೆಕಟ್ಟೆ ಕೆಳಭಾಗದ ಜನರಿಗೆ ಎಚ್ಚರಿಕೆಯಿಂದ ಇರಲು ಡಂಗುರ ಸಾರಲಾಗಿದೆ.