ಕೃಷಿ ವಿಜ್ಞಾನಿಗಳ ಭೇಟಿ
ಚನ್ನಮ್ಮನ ಕಿತ್ತೂರು,ಜು೨೭: ತಾಲೂಕಿನ ಹಿರೇನಂದಿಹಳ್ಳಿ, ಬಚ್ಚನಕೇರಿ,ತಿಗಡೊಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕೃಷಿ ಇಲಾಖೆ, ಕೃಷಿ ವಿಶ್ವವಿದ್ಯಾಲಯ ಧಾರವಾಡ ಮತ್ತು ಕೃಷಿ ವಿಜ್ಞಾನ ಕೇಂದ್ರ ಮತ್ತಿಕೊಪ್ಪ ಸಂಯೋಗದಲ್ಲಿ ಹತ್ತಿ, ಸೋಯಾಬಿನ್, ಕಬ್ಬು ಮತ್ತು ಗೋವಿನಜೋಳ ಬೆಳೆ ಬೆಳೆದ ರೈತರ ಹೊಲಗಳಿಗೆ ಭೇಟಿ ನೀಡಿ ಕೀಟ ಹಾಗೂ ರೋಗಬಾಧೆ ವಿಕ್ಷೀಸಿ ಪರೀಕ್ಷಿಸಿ ರೈತರಿಗೆ ಹತೋಟಿ ಕ್ರಮಗಳನ್ನು ತಿಳಿಸಲಾಯಿತು.
ನೀರು ಬಸಿದು ಹೋಗಲು ಕಾವಲಿ ಮಾಡಬೇಕು. ಹತ್ತಿ ಬೆಳೆಯಲ್ಲಿ ರಸ ಹೀರುವ ಹಾಗೂ ಎಲೆ ತಿನ್ನುವ ಕೀಟಗಳ ನಿರ್ವಹಣೆಗೆ ೫-ಗ್ರಾಂ, ಉಲಾಲ ಹಾಗೂ ೧೩.೦.೪೫ ನೀರಿನಲ್ಲಿ ಕರಗುವ ರಸಗೊಬ್ಬರದ ಜೊತೆಗೆ ೮೦ ದಿನ ಮತ್ತು ೧೦೦ ದಿನ ಬೆಳೆಗೆ ಸಿಂಪಡಣೆ ಮಾಡಬೇಕು.
ಕಬ್ಬು ಬೆಳೆಗೆ ತುಕ್ಕು ರೋಗ ನಿರ್ವಹಣೆಗೆ ಟೇಬ್ಯುಕೋನ್‌ಝೋನಲ್ ೧ ಎಂಎಲ್ ಪ್ರತಿ ಲೀಟರ ನೀರಿಗೆ ೨ ಎಂಎಲ್ ನ್ಯಾನೋ ಯೂರಿಯಾ ಜೊತೆಗೆ ಸೇರಿಸಿ ಸಿಂಪಡಣೆ ಮಾಡಬೇಕು.
ಸೋಯಾಬಿನ್ ಬೆಳೆ ಬೆಳೆಯಲ್ಲಿ ಎಲೆ ತನ್ನುವ ಕೀಟ ನಿರ್ವಹಣೆ ಮಾಡಲು ಥಿಯೋಮೀಥಾಕ್ಸಾಮ್ + ಲ್ಯಾಮ್ದ ಸೈನೋತ್ರಿನ್ ೧ ಎಂಎಲ್ ಪ್ರತಿ ಲೀಟರ ನೀರಿಗೆ ೧೩.೦.೪೫ ಗೊಬ್ಬರವನ್ನು ೫ ಗ್ರಾಂ ಬೆರೆಸಿ ಸಿಂಪಡಣೆ ಮಾಡಬೇಕು.
ಗೋವಿನ ಜೋಳ ಬೆಳೆಯಲ್ಲಿ ಲದ್ದಿಹುಳು ನಿರ್ವಹಣೆಗೆ ಇಮಾಮೆಕ್ಟಿನ ೦.೫ಗ್ರಾಮ. ಪ್ರತಿ ಲೀಟರ್ ನೀರಿಗೆ ೫ ಗ್ರಾಂ. ೧೯.೧೯.೧೯. ನೀರಿನಲ್ಲಿ ಕರಗುವ ಗೊಬ್ಬರದ ಜೋತೆಗೆ ಸಿಂಪಡಣೆ ಮಾಡಬೇಕೆಂದು ತಜ್ಞೆರುಗಳಾದ ಕೆಎಲ್‌ಇಕೆವಿಕೆ ಮತ್ತಿಕೊಪ್ಪದ ಬೇಸಾಯ ಶಾಸ್ತçಜ್ಞ ವಿಶ್ವನಾಥ ಜಿ.ಬಿ. ಮತ್ತು ಸಸ್ಯ ಸಂರಕ್ಷಣಾ ವಿಜ್ಞಾನಿ ಡಾ. ಎಸ್.ಎಸ್.ಹಿರೇಮಠ ಹಾಗೂ ಕೃಷಿ ವಿಶ್ವವಿದ್ಯಾಲಯ ಧಾರವಾಡ ಕೀಟ ಶಾಸ್ತçಜ್ಞ ಎಸ್.ವಿ.ಹೂಗಾರ ಇವರುಗಳು ರೈತರಿಗೆ ತಿಳಿಹೇಳಿದರು.
ಈವೇಳೆ ಬೈಲಹೊಂಗಲ ಸಹಾಯಕ ಕೃಷಿ ನಿರ್ದೇಶಕ ಬಸವರಾಜ ದಳವಾಯಿ, ಕಿತ್ತೂರ ಕೃಷಿ ಅಧಿಕಾರಿ ಮಂಜುನಾಥ ಕೆಂಚರಾವುತ, ರೈತ ಸಂಪರ್ಕ ಕೇಂಧ್ರದ ಸಿಬ್ಬಂದಿಗಳು ಹಾಗೂ ವಿವಿಧ ಗ್ರಾಮದ ರೈತರು ಹಾಜರಿದ್ದರು.