ಹುಮನಾಬಾದ್ ಪಟ್ಟಣದ 9 ರಾಸಾಯನಿಕ ಕಾರ್ಖಾನೆಗಳ ಬಂದ್ ಗೆ ಆದೇಶ
ಸಂಜೆವಾಣಿ ವರದಿ ಫಲಶ್ರುತಿ
ಹುಮನಾಬಾದ್ :ಜು.27: ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿ, ಕಾರ್ಖಾನೆಗಳಿಂದ ರಾಸಾಯನಿಕ ಮಿಶ್ರಿತ ತ್ಯಾಜ್ಯ ಹಳ್ಳಕ್ಕೆ ಹರಿದು ಬಿಡುತ್ತಿರುವ ಕಾರಣ ಹುಮನಾಬಾದ್ ಪಟ್ಟಣದ ಕೈಗಾರಿಕಾ ಪ್ರದೇಶದ ರಾಸಾಯನಿಕ ಕಾರ್ಖಾನೆಗಳ ಕುರಿತು ಸಂಜೆವಾಣಿ ಪತ್ರಿಕೆಯಲ್ಲಿ ವರದಿ ಪ್ರಕಟಿಸಿದ ಬೆನ್ನಲ್ಲೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಆದೇಶ ಹೊರಡಿಸಿದೆ.
ಕಾರ್ಖಾನೆಗಳಿಂದ ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದ ಸಾರ್ವಜನಿಕರಿಂದ ಬಹಳಷ್ಟು ದೂರುಗಳು ಬಂದಿರುವ ಹಿನ್ನಲ್ಲೆ ಶಾಸಕ ಡಾ. ಸಿದ್ದು ಪಾಟೀಲ್ ಅಧಿವೇಶನದಲ್ಲಿ ಕಾರ್ಖಾನೆಗಳಿಂದ ಆಗುತ್ತಿರುವ ಅನಾಹುತಗಳ ಕುರಿತು ಪರಿಸರ ಸಚಿವರ ಗಮನ ಸೇಳೆದು ಕಾರ್ಖಾನೆಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದರು.
ಬಳಿಕ ಜಲ ಹಾಗೂ ವಾಯು ಮಾಲಿನ್ಯ ಮಾಡುತ್ತಿರುವ ಕಾರ್ಖಾನೆಗಳ ವಿರುದ್ಧ ಮುಲಾಜಿಲ್ಲದೆ ಶಿಸ್ತುಕ್ರಮ ಕೈಗೊಳ್ಳುವಂತೆ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಹಾಗೂ ಉಸ್ತವಾರಿ ಸಚಿವ ಈಶ್ವರ ಖಂಡ್ರೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಭೇಟಿ ನೀಡಿ ಕಾರ್ಖಾನೆಗಳ ಹಾವಳಿ ಕುರಿತು ಮಾಹಿತಿ ಪಡೆದು ಕ್ರಮ ಕಯಗೊಳ್ಳುವಂತೆ ತಿಳಿದ ಬೆನ್ನಲ್ಲೆ ಮಾಲಿನ್ಯ ನಿಯಂತ್ರಣ ಮಂಡಳಿAದ 9 ಕಾರ್ಖಾನೆಗಳ ಬಂದ ಮಾಡುವಂತೆ ಆದೇಶ ಹೊರಡಿಸಿದೆ.
ಜತೆಗೆ ತಕ್ಷಣದಿಂದಲೇ ತ್ಯಾಜ್ಯ ನೀರು ಹರಿಯದಂತೆ ತಡೆ ಹಾಕಲು ಸೂಚಿಸಿರುವ ಕಾರಣ ವಾಯು ಮಾಲಿನ್ಯ ನಿಯಂತ್ರಣ ಅಧಿಕಾರಿಗಳು ಕಾಯೋನ್ಯು ಮುಖರಾಗಿ ಹುಮನಾಬಾದ ಕೈಗಾರಿಕಾ ಪ್ರದೇಶದ ಸುತ್ತಲಿನ ಕಾರ್ಖಾನೆಗಳನ್ನು ತಪಾಸಣೆ ನಡೆಸಿ ಬೀಗ ಹಾಕಿಸಿ ಬಾಗಿಲು ಮುಚ್ಚಲು ಸಮ್ಮತಿಸಿದ್ದಾರೆ.
ಇನ್ನೂ ಕೇಲ ಉಳಿದ ಕಾರ್ಖಾನೆಗಳ ವಿರುದ್ಧ ಕಾರ್ಯಾಚರಣೆಗೆ ಚಾಲನೆ ದೊರೆತಿದ್ದು, ತಕ್ಷಣ ವಿದ್ಯುತ್ ಹಾಗೂ ನೀರಿನ ಸಂಪರ್ಕ ಕಡಿತಗೊಳಿಸಲು ಮಂಡಳಿ ತನ್ನ ಅಧಿಕಾರಿಗಳಿಗೆ ತಾಕೀತು ಮಾಡಿದೆ. ಈ ಕುರಿತು ವಿಧಾನ ಸಭೆ ಅಧಿವೇಶನ ಸಂಧರ್ಭದಲ್ಲಿ ಚುಕ್ಕೆ ಗುರಿತಿನ ಸಂಖ್ಯೆಯ ಪ್ರಶ್ನೆ ಸಂಧರ್ಭದಲ್ಲೂ ಸಹಿತ ವಿಷಯ ಪ್ರಸ್ತಾವಿಸಲಾಗಿದೆ.
ಈ ಕುರಿತು ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಹಾಗೂ ಬೀದರ್ ಜಿಲ್ಲಾ ಉಸ್ತವಾರಿ ಸಚಿವ ಈಶ್ವರ ಖಂಡ್ರೆ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿಯ ಮೇಲೆ ಒತ್ತಡ ಹಾಕುವ ಮೂಲಕ ಕಾರ್ಖಾನೆಗಳನ್ನು ಮುಚ್ಚಿಸುವಂತೆ ಒತ್ತಡ ಹಾಕಲಾಗಿತ್ತು. ಇದರಿಂದ ಇದೀಗ ಹುಮನಾಬಾದ ಕೈಗಾರಿಕಾ ಪ್ರದೇಎಂದುಶದ ಎಂ.ಕೆ ಇಂಡಸ್ಟ್ರೀಸ್, 6255 ಇಂಡಸ್ಟ್ರೀಸ್, ಕೆಜಿಎನ್ ಇಂಡಸ್ಟ್ರೀಸ್, ಎಂ.ಬಿ ಇಂಡಸ್ಟ್ರೀಸ್, ಓ.ಆರ್‌ಐದು ಟೈರ್‌ಪೈರೋಲಿಸಿಸ್ ಕಾರ್ಖಾನೆಗಳನ್ನು ಹಾಗೂ ಸ್ಕೂಟಿಕ್ ಎರಡು ಘಟಕ, ಕ್ಷತ್ರೀಯ ಹಾಗೂ ಕೆ.ಎಸ್.ಟಿ ನಾಲ್ಕು ರಾಸಾಯನಿಕ ಕಾರ್ಖಾನೆಗಳು ಮುಚ್ಚಿಸಲು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಆದೇಶಿಸಿದೆ.
ಇದಲ್ಲದೇ ಇನ್ನೂ ಕೆಲ ರಾಸಾಯನಿಕ ಅಪಾಯಕಾರಿ ಕಾರ್ಖಾನೆಗಳು ಮುಚ್ಚಿಸುವಂತೆ ಕೂಡ ಚರ್ಚೆ ನಡೆದಿದೆ. ಪರಿಸರ ಮಾಲಿನ್ಯ ಮಾಡುವ ಕಾರ್ಖಾನೆಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಶಾಸಕ ಡಾ. ಸಿದ್ದು ಪಾಟೀಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.