ನಾಳೆ ನಗರಕ್ಕೆ ಕಾಶೀ ಜಗದ್ಗುರುಗಳ ಆಗಮನ
ಕಲಬುರಗಿ:ಜು.27:ನಗರದ ಸೊಗಸಕೇರಿಯ ಶ್ರೀ ಗುರುಶಾಂತಲಿAಗೇಶ್ವರ ಕಲ್ಯಾಣ ಮಂಟಪದಲ್ಲಿ ಶ್ರೀಮದ್ ಕಾಶೀe್ಞÁನ ಸಿಂಹಾಸನಾಧೀಶ್ವರ ಜಗದ್ಗುರು ಡಾ. ಚಂದ್ರಶೇಖರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಕಾಶೀ ಪೀಠ ಇವರಿಂದ 17ನೇ ವರ್ಷದ ಆಷಾಢ ಮಾಸದ ವೀರಶೈವ ಧರ್ಮಗ್ರಂಥ ಶ್ರೀ ಸಿದ್ಧಾಂತ ಶಿಖಾಮಣಿ ವಚನ ಸಾಹಿತ್ಯ ಸಮನ್ವಯಾತ್ಮಕ, ಆಧ್ಯಾತ್ಮಿಕ ಆಶೀರ್ವಚನ ಕಾರ್ಯಕ್ರಮ ಜರುಗುವುದು. ಜುಲೈ 28ರಂದು ರಾತ್ರಿ 8 ಗಂಟೆಗೆ ಪೂಜ್ಯ ಚಿ.ದೊಡ್ಡಪ್ಪ ಅಪ್ಪ ಹಾಗೂ ಮಾತೋಶ್ರೀ ಡಾ.ದಾಕ್ಷಾಯಣಿ ಎಸ್.ಅಪ್ಪ ಶರಣ ಸಂಸ್ಥಾನ ಕಲಬುರಗಿ ಇವರಿಂದ ಧರ್ಮಸಭೆ ಉದ್ಘಾಟನೆಗೊಳ್ಳುವುದು.
ಅಂದು ಕಡಗಂಚಿಯ ವೀರತಪಸ್ವಿ ಶ್ರೀ ವೀರಭದ್ರ ಶಿವಾಚಾರ್ಯರರ ನೇತೃತ್ವದಲ್ಲಿ ಶ್ರೀ ಕಾಶೀ ಜಗದ್ಗುರುಗಳನ್ನು ಬರಮಾಡಿಕೊಳ್ಳಲಾಗುವುದು. ಶಖಾಪುರ ತಪೋವನ ಮಠದ ಡಾ.ಸಿದ್ಧರಾಮ ಶಿವಾಚಾರ್ಯರು, ಪಾಳಾದ ಡಾ.ಗುರುಮೂರ್ತಿ ಶಿವಾಚಾರ್ಯರು, ಕಡಗಂಚಿಯ ಪಂಪಾಪತಿ ದೇವರು ಅನೇಕ ರಾಜಕೀಯ ಧುರಿಣರು ಹಾಗೂ ಭಕ್ತಾದಿಗಳು ಪಾಲ್ಗೊಳ್ಳುವರು. ಅಗಸ್ಟ 1ರಂದು ಲಿಂಗದಿಕ್ಷೆ ಹಾಗೂ ಅಯ್ಯಾಚಾರ ಜರುಗುವವು. ಪ್ರತಿನಿತ್ಯ ಬೆಳಿಗ್ಗೆ ಸಾಯಂಕಾಲ ದಾಸೋಹ ಸೇವೆಯು ಮಲ್ಲಿಕಾರ್ಜುನ ತಡಕಲ್ ಮಾಜಿ ನಿರ್ದೇಶಕರು ಕ.ಕ.ರ.ಸಾ.ಸಂಸ್ಥೆ ಕಲಬುರಗಿ ಇವರಿಂದ ಜರುಗುವುದು. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದರ್ಶನಾಶೀರ್ವಾದ ಪಡೆಯಬೇಕೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.