ಪ್ರಾಚೀನ ವೇದಗಳು ನಮ್ಮ ದೇಶಕ್ಕೆ ಮಾರ್ಗದರ್ಶಕ
ಬೀದರ :ಜು.27: ಬಿ.ವಿ. ಭೂಮರಡ್ಡಿ ಮಹಾವಿದ್ಯಾಲಯ ವತಿಯಿಂದ ನಗರದ ಪ್ರತಿಷ್ಠಿತ ಓಡವಾಡ ಅಗ್ರಹಾರದ ಅನಂತಶಯನ ದೇವಾಲಯದಲ್ಲಿ ಉಪನ್ಯಾಸಕರಾಗಿ ಆಗಮಿಸಿದ ಕರ್ನಾಟಕ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಡಾ. ಬಸವರಾಜ ಬಲ್ಲೂರ ಅವರು ಮಾತನಾಡುತ್ತಾ ಪ್ರಾಚೀನ ವೇದಗಳು ನಮ್ಮ ದೇಶಕ್ಕೆ ಮಾರ್ಗದರ್ಶಕವಾಗಿವೆ. ಆದರೆ ವೇದಗಳಿಗಿಂತ ವಚನಗಳಲ್ಲಿ ಅದ್ಭುತವಾದ ವಿಚಾರಗಳಿವೆ ಇಂದಿನ ಜಾಗತೀಕ ಸಮಸ್ಯೆಗಳಿಗೆ ವಚನಗಳಲ್ಲಿ ಪರಿಹಾರವಿದೆ. 12ನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣನವರು ಹೇಳಿದ ವಚನಗಳು ಜಾಗತೀಕ ಶಾಂತಿಗೆ ಪ್ರಸ್ತುತವಾಗಿವೆ. ವಚನಗಳಲ್ಲಿ ಖಗೋಳಶಾಸ್ತç ಅಂತರೀಕ್ಷದ ಗ್ಯಾಲಕ್ಸಿಗಳ ಬಗ್ಗೆ ಮಾಹಿತಿ ಇದೆ ಅಂದಿನ ದಿನಮಾನಗಳಲ್ಲಿ ವಚನಗಳಲ್ಲಿ ಶಾಂತಿಯ ಸಂಕೇತವಿದೆ ಎಂದು ಹೇಳಿದರು. ಇಂದಿನ ಶಿಬಿರಾರ್ಥಿಗಳು ಶರಣರ ವಚನಗಳನ್ನು ಪಾಲಿಸಿದರೆ ಜೀವನ ಪರಿಶುದ್ಧವಾಗುತ್ತದೆ ಎಂದು ಮಾರ್ಮಿಕವಾಗಿ ನುಡಿದರು.
ಕಾರ್ಯಕ್ರಮದ ಘನ ಅಧ್ಯಕ್ಷತೆಯನ್ನು ವಹಿಸಿದ ಮಹಾವಿದ್ಯಾಲಯ ಪ್ರಾಂಶುಪಾಲರಾದ ಡಾ. ಪಿ. ವಿಠ್ಠಲ ರೆಡ್ಡಿಯವರು ಮಾತನಾಡುತ್ತಾ ಜಗತ್ತಿನ ಜ್ವಲಂತ ಸಮಸ್ಯೆಗಳಿಗೆ ವಚನಗಳಲ್ಲಿ ಪರಿಶುದ್ಧವಾದ ಅಂಶಗಳು ಅಡಕವಾಗಿವೆ ವಿಶ್ವ ಸಂಸ್ಥೆಯು ಸಹ ನಮ್ಮ ಶಿವಶರಣ ತತ್ವಗಳನ್ನು ಅಳವಡಿಸಿಕೊಂಡು ಜಾಗತೀಕ ಶಾಂತಿಗೆ ಪ್ರಯತ್ನಿಸುತ್ತಿದ್ದಾರೆ. ನಾವು ಕೇವಲ ಮೂರ್ತಿ ಪೂಜೆ ಮಾಡದೆ ವಿಶ್ವಗುರು ಬಸವಣ್ಣನವರ ಆದರ್ಶಗಳಾದ ಕಾಯಕ ಮತ್ತು ದಾಸೋಹ ಇವೇರಡು ಪಾಲಿಸಿದಾಗ ನಮ್ಮ ಜೀವನ ಸಾರ್ಥಕವಾಗಿ ಗಾಂಧೀಜಿಯವರ ಮತ್ತು ಕನಸು ನನಸಾಗಲು ಸಾಧ್ಯವಾಗುತ್ತದೆ ಬಸವಣ್ಣನವರ ವಚನಗಳಿಂದ ಹಾಗೂ ಆದರ್ಶಗಳಿಂದ ರಾಮ ರಾಜ್ಯವಾಗಲು ಸಾಧ್ಯವಾಗುತ್ತದೆ ಎಂದು ಮಾರ್ಮಿಕವಾಗಿ ನುಡಿದರು.
ವೇದಿಕೆಯ ಮೇಲೆ ಎನ್.ಎಸ್.ಎಸ್. ‘ಅ’ ಘಟಕದ ಅಧಿಕಾರಿಗಳಾದ ಡಾ. ದೀಪಾ ರಾಗ ಹಾಗೂ ಎನ್.ಎಸ್.ಎಸ್. ‘ಬ’ ಘಟಕದ ಅಧಿಕಾರಿಗಳಾದ ಶ್ರೀ ಬಸವರಾಜ ಬಿರಾದಾರ ಹಾಗೂ ಗೌರವ ಉಪಸ್ಥಿತಿ ಶ್ರೀಮತಿ ಶೈಲಜಾ ಸಿದ್ಧವೀರ ಉಪಸ್ಥಿತರಿದ್ದರು.
ಕಾರ್ಯಕ್ರಮ ಮೊದಲಿಗೆ ಕು: ಶಿವಕುಮಾರ ಬಿ.ಎ. 6 ಸೆಮಿಸ್ಟರ ಸ್ವಾಗತ ಗೀತೆ ಹಾಡಿದರೆ ಕು:ವಚನಾಂಬಿಕ ನಿರೂಪಿಸಿದರೆ ಕು: ಸಾಹೀಲ್ ಅಬ್ಬಾಸ ಸ್ವಾಗತಿಸಿದರು ಹಾಗೂ ಪ್ರಾಧ್ಯಾಪಕರಾದ ಕಾವೇರಿ ಖಂಡ್ರೆ ವಂದಿಸಿದರು.
ಕಾಯಕ್ರಮದಲ್ಲಿ ಶಿಬಿರಾರ್ಥಿಗಳು, ಪ್ರಾಧ್ಯಾಪಕರು ಬೋಧಕೇತರ ಸಿಬ್ಬಂದಿ ವರ್ಗದವರು ಹಾಜರಿದ್ದರು.