ಕುಷ್ಠರೋಗ ಪತ್ತೆ ಹಚ್ಚುವ ಆಂದೋಲನದ ಪೂರ್ವಭಾವಿ ಸಭೆ
ಸೇಡಂ, ಜು,27: ಇಲ್ಲಿನ ತಹಶೀಲ್ದಾರ ಕಚೇರಿಯಲ್ಲಿ ಕುಷ್ಠರೋಗ ಪತ್ತೆ ಹಚ್ಚುವ (ಆಂದೋಲನ ಕಾರ್ಯಕ್ರಮವು ದಿನಾಂಕ 29.7.2024 ರಿಂದ 14.8.2024 ರವರಿಗೆ) ತಾಲೂಕ ಮಟ್ಟದ ಅಧಿಕಾರಿಗಳ ಪೂರ್ವಭಾವಿ ಸಭೆ ನಡೆಸಲಾಯಿತು.ಸಭೆಯ ಅಧ್ಯಕ್ಷತೆಯನ್ನು ಉಪವಿಭಾಗ ಅಧಿಕಾರಿ ಶ್ರೀ ಆಶಪ್ಪ ಪೂಜಾರಿ ಮತ್ತು ತಹಸೀಲ್ದಾರ ರಾದ ಶ್ರೀಮತಿ ಶ್ರೀಯಾಂಕ ಧನುಶ್ರೀ ವಹಿಸಿದ್ದು,ಕುಷ್ಠರೋಗ ನಿರ್ಮೂಲನಾ ಆಂದೋಲನವು ಯಶಸ್ವಿ ಯಾಗಲು ಎಲ್ಲಾ ಅಧಿಕಾರಿಗಳು ಶ್ರಮಿಸಬೇಕು ಜನರು ಮೂಢನಂಬಿಕೆಯಿAದ ಹೊರ ಬಂದು ಮುಚ್ಚು ಮರೆಯಿಲ್ಲದೆ ತಪಾಸಣೆ ಮಾಡಿಸಿಕೊಳ್ಳುವ ಹಾಗೆ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.ಸಭೆಯಲ್ಲಿ ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳಾದ ಚನ್ನಪ್ಪ ರಾಯಣ್ಣನವರ ತಾಲೂಕ ಆರೋಗ್ಯ ಅಧಿಕಾರಿಗಳಾದ ಡಾ.ಸಂಜೀವ ಪಾಟೀಲ್ ತಾಲೂಕ ಹಿರಿಯ ಆರೋಗ್ಯ ನಿರೀಕ್ಷಣ ಅಧಿಕಾರಿಗಳಾದ ಶಿವಯೋಗಿ ಸಕ್ಪಲ್ ವೈದ್ಯಾಧಿಕಾರಿಗಳಾದ ವೆಂಕಟೇಶ್ ಜೋಡಿ,ಡಾ.ನಾಗಮಣಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕರಾದ ಶ್ರೀಮತಿ ಸರಿತಾ ಕುಲ್ಕರ್ಣಿ ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳು ಪುರಸಭೆ ಅಧಿಕಾರಿಗಳು ಹಾಗು ತಾಲೂಕ ಮಟ್ಟದ ಅಧಿಕಾರಿಗಳು ಇದ್ದರು.