ಗುಣಮಟ್ಟದ ಕಾಮಗಾರಿಗೆ ಒತ್ತು ನೀಡಿ: ಸಚಿವ ಡಾ. ಶರಣಪ್ರಕಾಶ್ ಪಾಟೀಲ್
ಸೇಡಂ, ಜು,27: ಬಹುದಿನಗಳವರೆಗೆ ಬಾಳಿಕೆ ಬರುವಂತೆ ಗುಣಮಟ್ಟದ ಸಿಸಿ ರಸ್ತೆ ನಿರ್ಮಾಣಕ್ಕೆ ಗುತ್ತೇದಾರರು ಮಹತ್ವ ನೀಡಬೇಕು ಎಂದು ವೈದ್ಯಕೀಯ ಶಿಕ್ಷಣ ಸಚಿವರಾದ ಡಾ .ಶರಣಪ್ರಕಾಶ್ ಆರ್ ಪಾಟೀಲ್ ಹೇಳಿದರು.
ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಪ್ರಾಂಗಣದಲ್ಲಿ 2023-24ನೇ ಸಾಲಿನ ಆರ್.ಐ.ಡಿ.ಎಫ್ 29ರ ಯೋಜನೆಯಡಿ ಸಿ.ಸಿ. ರಸ್ತೆ ಹಾಗೂ ಆರ್.ಸಿ.ಸಿ. ಡ್ರೈನ್ ನಿರ್ಮಾಣ ಕಾಮಗಾರಿಯ (2 ಕೋಟಿ 31 ಲಕ್ಷ ರೂಪಾಯಿ ವೆಚ್ಚದಲ್ಲಿ) ಮಂಜೂರಾದ ಭೂಮಿ ಪೂಜೆ ಕಾರ್ಯಕ್ರಮಕ್ಕೆ ವೈದ್ಯಕೀಯ ಶಿಕ್ಷಣ ಸಚಿವರಾದ ಡಾ.ಶರಣಪ್ರಕಾಶ್ ಪಾಟೀಲ್ ಚಾಲನೆ ನೀಡಿ ಅವರು ಮಾತನಾಡಿದರು.ಈ ವೇಳೆಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ನಾಗೇಶ್ವರರಾವ್ ಮಾಲಿ ಪಾಟೀಲ್ ತಹಶೀಲ್ದಾರ್ ಶ್ರೀಯಾಂಕ್ ಧನಶ್ರೀ, ಕೃಷಿ ಉತ್ಪನ್ನ ಮಾರುಕಟ್ಟೆ ಕಾರ್ಯದರ್ಶಿ ರಾಜಕುಮಾರ್ ಕೌಡಲ್,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶಿವಶರಣ ರೆಡ್ಡಿ ಪಾಟೀಲ್,ರವಿಂದ್ರ ನಂದಿಗಾಮ್, ,ವಿಶ್ವನಾಥ್ ಪಾಟೀಲ್ ಅರೆಬೋಮನಳ್ಳಿ, ಹೇಮರೆಡ್ಡಿ ಪಾಟೀಲ್, ಗುತ್ತಿಗೆದಾರ ಭೀಮರಾವ್ ಪಾಟೀಲ್, ರಾಮಯ್ಯ ಪುಜಾರಿ,ಸಂತೋಷ್ ಕುಲಕರ್ಣಿ, ರಾಮಶೇಟ್ಟಿ ಬೀರನಳ್ಳಿ, ಈರಣ ರೇಮಣಿ,ಸೇರಿದಂತೆ ಹಲವರು ಇದ್ದರು.