ಚಂದ್ರಯಾನ-3ರ ಇಸ್ರೋ ವಿಜ್ಞಾನಿಗಳೊಂದಿಗೆ ಸಂವಹನ
ಕಲಬುರಗಿ:ಜು.27: ಚಂದ್ರಯಾನ-3ರ ಸಾಧನೆ, ಯಶೋಗಾಥೆಯ ಬಗ್ಗೆ ಇಸ್ರೋ ವಿಜ್ಞಾನಿಗಳೊಂದಿಗೆ ಶುಕ್ರವಾರ ಬೆಂಗಳೂರಿನ ಇಸ್ರೋ ಪ್ರದಾನ ಕಚೇರಿಯಲ್ಲಿ ಜರುಗಿದ ಸಂವಹನದಲ್ಲಿ ಕಲಬುರಗಿ ಜಿಲ್ಲೆಯ ಪ್ರತಿನಿಧಿಯಾಗಿ ಜೇವರ್ಗಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಭೌತಶಾಸ್ತ್ರ ಉಪನ್ಯಾಸಕರು, ರಾಜ್ಯ ಸಂಪನ್ಮೂಲ ವ್ಯಕ್ತಿ ಶಂಕರ ಹೊಸದೊಡ್ಡಿ ಅವರು ಭಾಗವಹಿಸಿ, ಸಾಕಷ್ಟು ಮಾಹಿತಿಯನ್ನು ಪಡೆದಿದ್ದಾರೆ. ಉತ್ತಮ ಉಪನ್ಯಾಸಕ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಜಿಲ್ಲೆಯ ವಿದ್ಯಾರ್ಥಿಗಳಿಗೆ ಚಂದ್ರಯಾನದ ವಿಜಯ ಪತಾಕೆಯ ಬಗ್ಗೆ ವಿವರಿಸಲಿದ್ದಾರೆ. ನಮ್ಮ ಕಾಲೇಜು, ಜಿಲ್ಲೆಗೆ ಕೀರ್ತಿಯನ್ನು ತಂದಿರುವ ಶಂಕರ ಹೊಸದೊಡ್ಡಿ ಅವರಿಗೆ ಅಭಿನಂದನೆಗಳು. ನೀವು ಕಲಬುರಗಿ ಜಿಲ್ಲೆಯ ಸಿ.ವಿ.ರಾಮನ್ ರಾಗಿ ಕಾರ್ಯ ನಿರ್ವಹಿಸಿ ಎಂದು ಸಮಾಜ ಸೇವಕ ಎಚ್.ಬಿ.ಪಾಟೀಲ ಶುಭ ಹಾರೈಸಿದ್ದಾರೆ.