ಗ್ಲೋಬಲ್ ಸೈನಿಕ ಅಕಾಡೆಮಿಯಲ್ಲಿ ಕಾರ್ಗಿಲ್ ವಿಜಯ್ ದಿವಸ್ ದಿನಾಚರಣೆ
ಬೀದರ್ :ಜು.27:ನಗರದ ಹೊರವಲಯದಲ್ಲಿರುವ ಗ್ಲೋಬಲ್ ಸೈನಿಕ್ ಅಕಾಡೆಮಿಯಲ್ಲಿ ದಿನಾಂಕ 26 ಜುಲೈ ರಂದು ಕಾರ್ಗಿಲ್ ವಿಜಯ್ ದಿವಸವನ್ನು ಪ್ರತಿ ವರ್ಷದಂತೆ ಅತೀ ಸಂಭ್ರಮದಿAದ ಆಚರಿಸಲಾಯಿತು. ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಗಮಿಸಿದ ಸಂಸ್ಥೆಯ ನಿರ್ದೇಶಕರಾದ ಡಾ. ಸಂಗಮೇಶ ಕುನೆಕೇರಿ ಮತ್ತು ಇನ್ನೊರ್ವ ಅತಿಥಿಗಳಾದ ಡಾ. ರಘು ಕೃಷ್ಣ ಮೂರ್ತಿ ಭಾಗವಹಿಸಿದರು. ಈ ವೇಳೆ ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ತಾನದ ವಿರುದ್ಧ ಹೋರಾಡಿ ಹುತಾತ್ಮರಾದ ವೀರ ಯೋಧರಿಗೆ ಜವಾನ್ ಜ್ಯೋತಿ ಬೆಳಗಿಸಿ ಪುಷ್ಪ ನಮನವನ್ನು ಸಲ್ಲಿಸಿ ಗೌರವ ವಂದನೆಯನ್ನು ನೀಡಿ ಸ್ಮರಿಸಲಾಯಿತು. ನಂತರ ಕಾರ್ಗಿಲ್ ಯುದ್ಧದ ಇತಿಹಾಸವನ್ನು ಕುರಿತು ಶಿಕ್ಷಕರಾದ ಶ್ರೀ ಹರ್ಷವರ್ಧನ್ ಮಠಪತಿ, ಶ್ರೀಮತಿ ಆಶಾ ಮತ್ತು ಮಕ್ಕಳು ಭಾಷಣವನ್ನು ನೀಡಿದರು ಮಕ್ಕಳಿಂದ ದೇಶಭಕ್ತಿ ಗೀತ ಗಾಯನ ಅತೀ ಮಧುರವಾಗಿ ಮೂಡಿತು, ದೇಶಭಕ್ತಿಯನ್ನು ಮೂಡಿಸುವ ಮಕ್ಕಳ ನೃತ್ಯವು ಮೈ ರೋಮಾಂಚನಗೊಳಿಸಿತು.
ಸAಸ್ಥೆಯ ಅಧ್ಯಕ್ಷರಾದ ಕರ್ನಲ್ ಶರಣಪ್ಪ ಸಿಕೇನಪೂರೆ ಅವರು ಕಾರ್ಗಿಲ್ ಯುದ್ಧದಲ್ಲಿ ಹೋರಾಡಿದರು ಎಂಬುವುದು ಸಂಸ್ಥೆಗೆ ಹಾಗೂ ಬೀದರ್ ಜನತೆಗೆ ಹೆಮ್ಮೆಯ ವಿಷಯವಾಗಿದೆ. ಪ್ರತಿ ವರ್ಷ ಅಧ್ಯಕ್ಷರು ಕಾರ್ಗಿಲ್ ಯುದ್ಧದ ಕುರಿತು ಮಕ್ಕಳಿಗೆ ವಿವರಿಸುತ್ತಿದ್ದರು ಈ ವರ್ಷ ಅವರು ಕೆನಡಾಕ್ಕೆ ತೆರಳಿದ್ದು ಅಲ್ಲಿಂದಲೇ ಸಂಸ್ಥೆಯ ಎಲ್ಲಾ ಸಿಬ್ಬಂದಿಗಳಿಗೆ ಹಾಗೂ ಮಕ್ಕಳಿಗೆ ಕಾರ್ಗಿಲ್ ವಿಜಯ್ ದಿವಸದ ಹಾರ್ದಿಕ ಶುಭಾಷಯಗಳನ್ನು ತಿಳಿಸಿದ್ದಾರೆ.
ಈ ವೇಳೆ ಡಾ.ರಘು ಕೃಷ್ಣ ಮೂರ್ತಿಯವರು ಮಾತನಾಡಿ ಎಲ್ಲರಿಗೂ ಕಾರ್ಗಿಲ್ ವಿಜಯ್ ದಿವಸದ ಶುಭಾಷಯಗಳನ್ನು ತಿಳಿಸಿ ಇಂದು ನಾವು ವೀರಯೋಧರ ಸ್ಮರಿಸುವ ದಿನವಾಗಿದೆ ಈ ದಿನ ಮಕ್ಕಳಿಂದ ಮೂಡಿ ಬಂದ ವಿಭಿನ್ನ ಚಟುವಟಿಕೆ ಬಗ್ಗೆ ಸಂತಸ ವ್ಯಕ್ತಪಡಿಸಿದರು. ನಂತರ ಡಾ. ಸಂಗಮೇಶ ಕುನೆಕೇರಿ ಅವರು ಮಾತನಾಡಿ ಅನೇಕ ವೀರರನ್ನು ನೆನೆದು ಇವರ ವೀರ ಶೂರ ಹೋರಾಟದಿಂದ ಕಾರ್ಗಿಲ್ ವಿಜಯವಾಯಿತು ಇದು ನಮಗೆ ಹೆಮ್ಮೆಯ ವಿಷಯ ಈ ಯುದ್ಧದಲ್ಲಿ ಕರ್ನಲ್ ಶರಣಪ್ಪ ಸಿಕೇನಪೂರೆ ಅವರು ಭಾಗಿಯಾಗಿದ್ದರು ಎಂದು ತಿಳಿಸಿದರು. ಗ್ಲೋಬಲ್ ಸೈನಿಕ ಅಕಾಡೆಮಿಯಲ್ಲಿ ನಡೆದ ಸಲಾಮಿ ಸಲ್ಯುಟ್ಟ ಅನ್ನು ಕಂಡು ಅತೀ ಆನಂದ ಮತ್ತು ಆಶ್ಚರ್ಯವನ್ನು ತಂದು ಕೊಟ್ಟಿದೆ ಎಂದು ತಿಳಿಸಿದರು. ನಾವೇಲ್ಲರೂ ಎಲ್ಲ ವೀರರ ತ್ಯಾಗ ಬಲಿದಾನವನ್ನು ಇಂದು ಸ್ಮರಿಸಿ ಗೌರವಿಸೋಣ ಎಂದರು.
ಈ ವೇಳೆ ಮುಖ್ಯ ಗುರುಗಳಾದ ಜ್ಯೋತಿ ರಾಗಾ, ಡಾ. ಮನಿಷಾ, ಸುಬೇದಾರ್ ಮಡೇಪ್ಪ ಸುಬೇದಾರ್ ಧನರಾಜ್, ಮಾಜಿ ಸೈನಿಕರಾದ ಚಂದ್ರಶೆಖರ ಮಠಪತಿ, ಇರಾರೆಡ್ಡಿ, ಶ್ರೀ ಅಶೊಕ ಪಾಟೀಲ, ಡಾ. ಗಹನಿನಾಥ್ ಶಿಕ್ಷಕಿ ಶ್ರೀಮತಿ ಸಬಾ,ಶ್ರೀಮತಿ ಪೂಜಾ ಶಿಕ್ಷಕ ವೃಂದ,ವಿದ್ಯಾರ್ಥಿಗಳು ಹಾಗೂ ಎಲ್ಲಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.