ಹಬೋಹಳ್ಳಿ :ಸರ್ಕಾರಿ  ಶಾಲೆಗೆ ಹಳೇ ವಿದ್ಯಾರ್ಥಿಗಳಿಂದ ಪೀಠೋಪಕರಣ ವಿತರಣೆ
ಸಂಜೆವಾಣಿ ವಾರ್ತೆ
 ಹಗರಿಬೊಮ್ಮನಹಳ್ಳಿ:ಜು.27 ತಾಲೂಕಿನ ಉಲವತ್ತಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಳೆಯ ವಿದ್ಯಾರ್ಥಿಗಳು ಸುಮಾರು 25000 ರೂ. ಹೆಚ್ಚು ಮೌಲ್ಯದ ಪೀಠೋಪಕರಣಗಳನ್ನು ನೀಡುವ ಮೂಲಕ ತಾವು ಕಲಿತ ಶಾಲೆಗೆ ಕೃತಜ್ಞತೆ ಸಲ್ಲಿಸಿದರು
 ಸರ್ಕಾರಿ ಶಾಲೆ ಎಂದರೆ ಸೌಲಭ್ಯಗಳಿಲ್ಲದೆ ಅನೇಕ ಸಮಸ್ಯೆಗಳಿಂದ ವಿದ್ಯಾರ್ಥಿಗಳು  ಒಳ್ಳೆಯ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಸರ್ಕಾರ ಶಿಕ್ಷಣಕ್ಕಾಗಿ ಕೋಟ್ಯಾಂತರ ವೆಚ್ಚ ಮಾಡಿದರು ಅದು ನೀರಲ್ಲಿ ಹೋಮವಾಗಿ ಹೋಗುತ್ತಿದೆ. ಶಾಲೆಯಲ್ಲಿ ಒಳ್ಳೆಯ ಪೀಠೋಪಕರಣಗಳು ಇಲ್ಲದೆ ಶಿಕ್ಷಕರು ಪರದಾಡುವಂತಾಗಿದೆ. ಇಂತಹ ಸಂದರ್ಭದಲ್ಲಿ ಹಳೆಯ ವಿದ್ಯಾರ್ಥಿಗಳು ನಾವು ಕಲಿತ ಶಾಲೆಗೆ ಏನಾದರೂ ಮಾಡಬೇಕೆಂಬ ಮಹಾದಾಶಯೊಂದಿಗೆ ಹಳೆಯ ವಿದ್ಯಾರ್ಥಿಗಳು ವಾಟ್ಸಾಪ್ ಮೂಲಕ ಗ್ರೂಪ್ ಮಾಡಿಕೊಂಡು ಶಾಲೆಗೆ ಪೀಠೋಪಕರಣ ನೀಡುವ ಮೂಲಕ ಮಾದರಿಯಾಗಿದ್ದಾರೆ .