ನೀಟ್ ಪರೀಕ್ಷೆ ಟಾಪರ್ಸ್ : ಇಡೀ ಕರ್ನಾಟಕದಲ್ಲಿಯೇ ಬೀದರ್ ಮೂರನೆ ಸ್ಥಾನ
ಬೀದರ್ :ಜು.27: ವೈದ್ಯಕೀಯ ಹಾಗೂ ದಂತ ವೈದ್ಯಕೀಯ ವೃತ್ತಿಪರ ಕೋರ್ಸುಗಳಿಗೆ ಪ್ರವೇಶ ನೀಡಲು ರಾಷ್ಟಿçÃಯ ಪರೀಕ್ಷಾ ಸಂಸ್ಥೆ ಅಖಿಲ ಭಾರತ ಮಟ್ಟದಲ್ಲಿ ನಡೆಸಿದ ರಾಷ್ಟಿçÃಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಯಲ್ಲಿ (ನೀಟ್ ಎಂದೇ ಪ್ರಸಿದ್ಧ) ಬೀದರ್ ಜಿಲ್ಲೆ ಇಡೀ ಕರ್ನಾಟಕದಲ್ಲಿಯೇ ಮೂರನೆ ಸ್ಥಾನ ಪಡೆದುಕೊಂಡಿದೆ ಎಂದು ಇಲ್ಲಿ ಶುಕ್ರವಾರ ತಿಳಿಸಿದ ಜಿಲ್ಲೆಯಲ್ಲಿನ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳ ಮುಖ್ಯಸ್ಥರು ಈ ನಿಟ್ಟಿನಲ್ಲಿ ತಮಗೆ ಉಂಟಾಗಿರುವ ಸಂತಸವನ್ನು ಜನರೊಂದಿಗೆ ಹಂಚಿಕೊಡರು.
ಅಧಿಕೃತ ಅಂಕಿ-ಅAಶಗಳು
ಭಾಲ್ಕಿಯಲ್ಲಿನ ಹಿರೇಮಠ ಸಂಸ್ಥಾನ ವಿದ್ಯಾಪೀಠದ ರೂವಾರಿ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು, ಬೀದರ್‌ನಲ್ಲಿಯ ಶಾಹೀನ್ ಸಮೂಹ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ.ಅಬ್ದುಲ್ ಖದೀರ್, ಜ್ಞಾನ ಸುಧಾ ಶಿಕ್ಷಣ ಸಂಸ್ಥೆ ಅಧ್ಯಕ್ಷರಾದ ಡಾ.ಪೂರ್ಣಿಮಾ ಜಾರ್ಜ್, ಕೆಆರ್‌ಇ ಶಿಕ್ಷಣ ಸಂಸ್ಥೆ ಅಧ್ಯಕ್ಷ ಬಸವರಾಜ್ ಜಾಬಶೆಟ್ಟಿ, ವಿಸ್‌ಡಂ ಗುಂಪು ಸಂಸ್ಥೆಗಳ ಅಧ್ಯಕ್ಷ ಮಹಮ್ಮದ್ ಆಸೀಫುದ್ದೀನ್ ಮತ್ತು ಕಲಬುಗರಿಯಲ್ಲಿ ಪ್ರಧಾನ ಕಚೇರಿ ಹೊಂದಿರುವ ಎಚ್‌ಕೆಇ ಸೊಸೈಟಿ ಆಡಳಿತ ಮಂಡಳಿ ಸದಸ್ಯ ಡಾ.ರಜನೀಶ್ ವಾಲಿ ಬೀದರ್ ಪತ್ರಿಕಾ ಭವನದಲ್ಲಿ ಈ ನಿಟ್ಟಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ರಾಜ್ಯದಲ್ಲಿಯೇ ಅತಿ ಹೆಚ್ಚು ನೀಟ್ ವಿದ್ಯಾರ್ಥಿಗಳು 600-720 ಶ್ರೇಣಿಯಲ್ಲಿ ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳು ಬೆಂಗಳೂರು ನಗರದವರು. ಈ ಶ್ರೇಣಿಯಲ್ಲಿ ಅಂಕ ಗಳಿಸಿರುವ 4,302 ವಿದ್ಯಾರ್ಥಿಗಳ ಪೈಕಿ 1,457 ವಿದ್ಯಾರ್ಥಿಗಳು ಬೆಂಗಳೂರು ನಗರದಿಂದ ಬಂದವರು. ರಾಷ್ಟಿçÃಯ ಪರೀಕ್ಷಾ ಸಂಸ್ಥೆ ತೀರಾ ಇತ್ತೀಚೆಗೆ ನೀಟ್ ಪರೀಕ್ಷೆಯ ಕೇಂದ್ರವಾರು ಫಲಿತಾಂಶಗಳ ಪ್ರಮಾಣ ಕುರಿತಾದ ಅಂಕಿ-ಅAಶಗಳನ್ನು ಬಿಡುಗಡೆ ಮಾಡಿದೆ. ಈ ನಿಟ್ಟಿನಲ್ಲಿ ಬೆಂಗಳೂರು ನಗರ, ಮಂಗಳೂರು (621), ಬೀದರ್ (309), ದಾವಣಗೆರೆ (266) ಮತ್ತು ಕಲಬುರಗಿ (215) ಮುಂಚೂಣಿಯಲ್ಲಿವೆ ಎಂದು ಡಾ.ಅಬ್ದುಲ್ ಖದೀರ್ ತಿಳಿಸಿದರು. ಉಡುಪಿಯಲ್ಲಿ 163 ವಿದ್ಯಾರ್ಥಿಗಳು 600 ರಿಂದ 720 ಅಂಕ ಗಳಿಸಿದ್ದಾರೆ. ಬೆಳಗಾವಿ (151), ಮೈಸೂರು (136) ಹಾಗೂ ಹುಬ್ಬಳ್ಳಿ (111) ವಿದ್ಯಾರ್ಥಿಗಳು ಅಂಕ ಗಳಿಸಿದ್ದಾರೆ ಎಂದು ಅವರು ರಾಷ್ಟಿçÃಯ ಪರೀಕ್ಷಾ ಸಂಸ್ಥೆ ಬಿಡುಗಡೆ ಮಾಡಿದ ಮಾಹಿತಿಯನ್ನಾಧರಿಸಿ ಅಂಕಿ-ಅAಶ ನೀಡಿದರು.
ಪ್ರಾಥಮಿಕ ಶಿಕ್ಷಣ
ಕೇವಲ ಶಾಹೀನ್ ಸಮೂಹ ಶಿಕ್ಷಣ ಸಂಸ್ಥೆಯಿAದಲೇ ಬೀದರ್ ಜಿಲ್ಲೆ ನೀಟ್ ಪರೀಕ್ಷೆಯಲ್ಲಿ ಈ ಸಾಧನೆ ಮಾಡಿದೆ ಎನ್ನಲಾಗದು ಎಂದು ಮಾರ್ಮಿಕವಾಗಿ ನುಡಿದ ಡಾ.ಅಬ್ದುಲ್ ಖದೀರ್ ಈ ಸಾಧನೆಗೆ ಬೀದರ್ ಜಿಲ್ಲೆಯಲ್ಲಿನ ಎಲ್ಲ ಶಿಕ್ಷಣ ಸಂಸ್ಥೆಗಳ ಸಹಯೋಗ ಕೂಡ ಉಂಟು ಎಂದು ನುಡಿದರು. ಶಿಕ್ಷಣ ಕ್ಷೇತ್ರದಲ್ಲಿ ಬೀದರ್ ಜಿಲ್ಲೆ ಇನ್ನೂ ಹೆಚ್ಚಿನ ಸಾಧನೆ ಮಾಡಲು ಅವಕಾಶವಾಗುವಂತೆ ಪ್ರಾಥಮಿಕ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುವುದು ಅಗತ್ಯವಾಗಿದೆ ಎಂದು ಡಾ.ಅಬ್ದುಲ್ ಖದೀರ್ ಪ್ರತಿಪಾದಿಸಿದರು. ರಾಷ್ಟçದಲ್ಲಿ ಪರೀಕ್ಷಾ ಅವ್ಯವಹಾರಗಳನ್ನು ತಡೆಯುವುದು ಇಂದಿನ ಅವಶ್ಕಕತೆಯಾಗಿದೆ ಎಂದು ಅವರು ನುಡಿದರು. ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು ಮಾತನಾಡಿ ನೀಟ್ ಪರೀಕ್ಷೆಯಲ್ಲಿ ಬೀದರ್ ಜಿಲ್ಲೆಯ ಸಾಧನೆ ಹೆಮ್ಮೆಯ ವಿಷಯವಾಗಿದೆ. ಬೆಂಗಳೂರು, ಮಂಗಳೂರು, ದಾವಣಗೆರೆ ಹಾಗೂ ಧಾರವಾಡ ಜಿಲ್ಲೆಗಳಲ್ಲಿನ ವಿದ್ಯಾರ್ಥಿಗಳು ಶಿಕ್ಷಣ ಪಡೆಯಲು ಬೀದರ್ ಜಿಲ್ಲೆಗೆ ಆಗಮಿಸುವ ದಿನಗಳು ದೂರವಿಲ್ಲ ಎಂದು ನುಡಿದರು. ಡಾ.ಪೂರ್ಣಿಮಾ ಜಾರ್ಜ್ ಮಾತನಾಡಿ ಶಿಕ್ಷಣದಿಂದಲೇ ಬದಲಾವಣೆ ಸಾಧ್ಯ ಎಂದು ಪ್ರತಿಪಾದಿಸಿದರು. ಡಾ.ರಜನೀಶ್ ವಾಲಿ ಮಾತನಾಡಿ ಬೀದರ್ ಜಿಲ್ಲೆ ನೀಟ್ ಪರೀಕ್ಷೆಯಲ್ಲಿ ಮಾಡಿದ ಸಾಧನೆ ಹೆಮ್ಮೆಯ ವಿಷಯವಾಗಿದೆ ಎಂದು ನುಡಿದರು. ಬಸವರಾಜ್ ಜಾಬಶೆಟ್ಟಿ ಮಾತನಾಡಿ ಕೆಆರ್‌ಇ ಶಿಕ್ಷಣ ಸಂಸ್ಥೆಯ ಸಾಧನೆಗಳನ್ನು ಪಟ್ಟಿ ಮಾಡಿದರು. ಮಹಮ್ಮದ್ ಆಸೀಫುದ್ದೀನ್ ಬೀದರ್ ಜಿಲ್ಲೆ ನೀಟ್ ಪರೀಕ್ಷೆಯಲ್ಲಿ ಮಾಡಿದ ಸಾಧನೆ ಸಂತಸ ತಂದಿದೆ ಎಂದು ತಿಳಿಸಿದರು.