ಸಂಗೀತವು ಮಲೀನ ಮನಸ್ಸನ್ನು ಶುಚಿಗೊಳಿಸುತ್ತದೆ: ಸಿದ್ದಯ್ಯ ಶಾಸ್ತ್ರಿ
ಕಲಬುರಗಿ:ಜು.27:ಸಂಗೀತಕ್ಕೆ ತಾಳ, ಸ್ವರ ಎಷ್ಟು ಮುಖ್ಯವೋ, ಸಂಸಾರ ಸಂಬAಧಗಳಿಗೂ ತಾಳ್ಮೆ, ಸಹನೆ ಅಷ್ಟೇ ಮುಖ್ಯ ಎಂದು ಪ್ರವಚನ ಪಟುಗಳಾದ ಸಿದ್ದಯ್ಯ ಶಾಸ್ತ್ರಿ ನರುಣಾ ಹೇಳಿದರು.
ಕಲಬುರಗಿ ನಗರದಲ್ಲಿರುವ ದೇವಿ ನಗರದ ಶ್ರೀ ದೇವಿ ಅಂಬಾಭವಾನಿ ದೇವಸ್ಥಾನದ ಆವರಣದಲ್ಲಿ ಶ್ರೀದೇವಿ ಸರಸ್ವತಿ ಕಲಬಳಗ ಸಂಘದ ವತಿಯಿಂದ ಸಂಸ್ಕೃತಿಕ ಸ್ವರ ಸಂಗೀತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ ಶರಣರ ವಚನಗಳು ಸಂಗೀತದೊAದಿಗೆ ಆಲಿಸಿದರೆ ಜನಸಾಮಾನ್ಯರ ಮನ ಮುಟ್ಟಿ ಶಾಂತಿ ಸಮೃದ್ಧಿಯಾಗುವುದರೊಂದಿಗೆ ಸಮಾಜ ಪರಿವರ್ತನೆಯಾಗುತ್ತದೆ.ಸಂಗೀತ ಕಲಾವಿದರಿಗೆ ಮಲಿನವಾದ ಮನಸ್ಸುಗಳನ್ನು ಸ್ವಚ್ಛಗೊಳಿಸಿ ಸನ್ಮಾರ್ಗದ ಕಡೆಗೆ ತೆಗೆದುಕೊಂಡು ಹೋಗುತ್ತಾರೆ. ಕಲಾವಿದರನ್ನು ಗೌರವಿಸಿ ಪ್ರೋತ್ಸಾಹಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಎಂದು ಮಾರ್ಮಿಕವಾಗಿ ಹೇಳಿದರು. ಮುಖ್ಯ ಅತಿಥಿಗಳಾಗಿ ಕಾಶಿನಾಥ ಹಿರೇಮಠ ಹಾರಕೂಡ, ಚಿಕ್ಕವೀರಯ್ಯ ಸ್ವಾಮಿ ಸಂಗೊಳಗಿ, ರಾಜಕುಮಾರ ಚಿಣಮಗೇರಿ, ಬಸವರಾಜ ನಾಲವಾರ, ಸಿದ್ದರಾಮಯ್ಯ ಆಲಗೂಡ, ನ್ಯಾಯವಾದಿ ಹಣಮಂತರಾಯ ಎಸ್. ಅಟ್ಟೂರ ಆಗಮಿಸಿದರು. ಇದೇ ಸಂದರ್ಭದಲ್ಲಿ ಹಲವಾರು ವರ್ಷಗಳಿಂದ ಸಂಗೀತ ಸೇವೆ ಮಾಡುತ್ತಿರುವ
ಸಂಘದ ಅಧ್ಯಕ್ಷರಾದ ಶರಣಪ್ಪ ಕಟ್ಟಿಮನಿ ಅವರಿಗೆ ಬಡಾವಣೆಯ ಪರವಾಗಿ ಗೌರವಿಸಲಾಯಿತು. ಕಲಾವಿದರಾದ
ಶಿವಕುಮಾರ ಶಾಸ್ತ್ರಿ ದುತ್ತರಗಾಂವ, ಶಿವಾನಂದ ಅಳ್ಳಗಿ, ಈರಣ್ಣ ಪಂಚಾಳ, ಕಲ್ಲಿನಾಥ ಹಿರೇಮಠ, ವೀರಯ್ಯ ಸ್ವಾಮಿ ಮಾಡಿಯಾಳ, ರುದ್ರಪ್ಪ ಪಾಟೀಲ ಬೆಡಜುರ್ಗಿ ಅವರು ಸಂಗೀತ ಸೇವೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಬಡಾವಣೆಯ ಅನೇಕ ಜನರು ಉಪಸ್ಥಿತರಿದ್ದರು.